ರಾಜ್ಯ ಶಿಕ್ಷಣ

ವಿದ್ಯಾಗಮ ಕಾರ್ಯ ಕ್ರಮ ತಾತ್ಕಾಲಿಕ ಸ್ಥಗಿತ- ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಈಗಾಗಲೇ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ಈ ಕಾರಣದಿಂದ  ಇನ್ನೂ ಶಾಲೆಗಳು ಆರಂಭವಾಗದಿರಲು ಕಾರಣ, ಇದೀಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ, ಆನ್ ಲೈನ್ ತರಗತಿಗಳು ಹಳ್ಳಿಗಳ ವಿದ್ಯಾರ್ಥಿಗಳಿಗೂ ದೊರಕುವುದಿಲ್ಲ ಎಂಬ ಕಾರಣದಿಂದ ರಾಜ್ಯ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಆಯೋಜನೆ ಮಾಡಿದರು.

ಆದರೆ ವಿದ್ಯಾಗಮ ಕಾರ್ಯಕ್ರಮಗಳು ಆರಂಭವಾದ ಬಳಿಕ ಹಲವು ಮಕ್ಕಳು ಮತ್ತು ಶಿಕ್ಷಕರಿಗೆ ಕೋವಿಡ್ ಸೋಂಕು ತಗಲಿದೆ, ಇದರಿಂದ ಮಕ್ಕಳು ಮತ್ತು ಶಿಕ್ಷಕರ ಜೀವಕ್ಕೆ ಅಪಾಯವಾಗುತ್ತಿದೆ ಎಂದು ರಾಜ್ಯದ ಹಲವು ಜಿಲ್ಲೆಗಳಿಂದ ವ್ಯಾಪಕವಾದ ದೂರು ಬಂದ ಹಿನ್ನೆಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ತಿಳಿಸಿದ್ದಾರೆ.

ಇದೀಗ ಶಿಕ್ಷಣ ಇಲಾಖೆ ಈ ಕುರಿತು ಮಾಹಿತಿ ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ ಮತ್ತು ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೆ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ತಮಿಳುನಾಡಿನಲ್ಲಿ ಟ್ರ್ಯಾಕ್ಟರ್ ಮಗುಚಿ ಅದರಲ್ಲಿದ್ದ 5 ಮಹಿಳೆಯರು ಸಾವು; 15 ಮಂದಿ ಗೆ ಗಾಯ

Harshitha Harish

ಮುಂದಿನ ಅಧಿವೇಶನದಲ್ಲೇ ಗೋಹತ್ಯೆ ನಿಷೇಧ ಮಸೂದೆ ಮಂಡನೆ : ಸಚಿವ ಪ್ರಭು ಚವ್ಹಾಣ್

Upayuktha News Network

ಸ್ಪೇಸ್​​​​​​​ನಲ್ಲಿ ರಿಲೀಸ್ ಆಯ್ತು ‘ಹಾಸ್ಟೆಲ್ ಹುಡುಗರು’ ಟೀಸರ್: ಪ್ರಮೋಷನ್ ಕ್ರಿಯೆಟಿವಿಟಿ ನೋಟಿ ಕಿಚ್ಚ ಫುಲ್ ಫಿದಾ

Sushmitha Jain