ನಗರ ಸ್ಥಳೀಯ

ವಿಜಯದಾಸರ ಆರಾಧನಾ ಮಹೋತ್ಸವ ಮತ್ತು ಗೌರವ ಡಾಕ್ಟರೇಟ್ ಪುರಸ್ಕೃತ ಸಾಧಕರಿಗೆ ಅಭಿನಂದನೆ

ಆಯೋಜನೆ: ಶ್ರೀನಿವಾಸ ಉತ್ಸವ ಬಳಗ

ಬೆಂಗಳೂರು: ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀಮದ್ ಉತ್ತರಾದಿಮಠ ಮತ್ತು ಶ್ರೀನಿವಾಸ ಉತ್ಸವ ಬಳಗ (ದಾಸಸಾಹಿತ್ಯ ಪ್ರಚಾರ ಮಾಧ್ಯಮ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ಮತ್ತು ಗೌರವ ಡಾಕ್ಟರೇಟ್ ಪುರಸ್ಕøತ ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಪ್ರಣವ ಮೀಡಿಯಾ ಹೌಸ್ ಮತ್ತು ದಾಸ ಸೌರಭ, ಕಲಬುರ್ಗಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಶ್ರೀಮದುತ್ತರಾದಿ ಮಠದ ಪರಮಪೂಜ್ಯ ಶ್ರೀಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಪರಮಾನುಗ್ರಹದಿಂದ ಬೆಂಗಳೂರು ಬಸವನಗುಡಿ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿರುವ ದಾಸಸಾಹಿತ್ಯ ಪಿತಾಮಹಾ ಶ್ರೀಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಸನ್ನಿಧಾನದಲ್ಲಿ ನಡೆಯಿತು.

ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು ನೆರವೇರಿಸಿ ದಿವ್ಯ ಸಾನಿಧ್ಯ ವಹಿಸಿದ್ದರು. ಪುರಂದರದಾಸರ ಪ್ರತಿಮೆಯ ಸುತ್ತಲೂ ಅಳವಡಿಸಿರುವ ದಾಸರ ನುಡಿಗಳ ಶಿಲಾಫಲಕ ಮತ್ತು ಮುಂಬರುವ ಪುರಂದರದಾಸರ ಆರಾಧನಾ ಮಹೋತ್ಸವದ ಕರಪತ್ರವನ್ನು ಅನಾವರಣಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗಾಯನ ಸಮಾಜ ಅಧ್ಯಕ್ಷ ಡಾ|| ಎಂ.ಆರ್.ವಿ ಪ್ರಸಾದ್ ಹಾಗೂ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್‍ಗೆ ಭಾಜನರಾದ ಸಾಧಕರಾದ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಟಿ.ವಾದಿರಾಜ್, ಆಧ್ಯಾತ್ಮ ಚಿಂತಕ ಕಡೂರು ಶ್ರೀಧರಾಚಾರ್ಯ ಮತ್ತು ಖ್ಯಾತ ಜ್ಯೋತಿಷಿ ಕೆ.ಮುರಳಿಧರ ಭಟ್‍ರವರನ್ನು ಮೈಸೂರು ಪೇಟ, ಫಲಕ ದೊಂದಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು.

ಕೆ.ಆರ್.ಪುರಂ ಹರಿದಾಸ ಸಂಘದ ಅಧ್ಯಕ್ಷ ಡಾ. ಹ.ರಾ.ನಾಗಾರಾಜಾಚಾರ್ಯ ಅಭಿನಂದನ ನುಡಿಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ಕೆ.ಆರ್.ಗುರುರಾಜಾರಾವ್ ಮೊದಲಾವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ವಿಜಯದಾಸರ ಮಹಿಮೆ ಕುರಿತು – ಮ.ಶಾ.ಸಂ. ಖೇಡ ಪ್ರಮೋದ್ ಆಚಾರ್‌ ಅವರಿಂದ ಉಪನ್ಯಾಸ, ವಿದುಷಿ ಶ್ರೀಮತಿ ಶುಭಾ ಸಂತೋಷ್ ಮತ್ತು ತಂಡದಿಂದ ದಾಸರ ಪದಗಳ ಗಾಯನ ನಡೆಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಉದ್ಘಾಟನೆ

Upayuktha

ಕೊರೊನಾ ವಿರುದ್ಧ ಸಮರ: ಜನತಾ ಕರ್ಫ್ಯೂಗೆ ಮಂಗಳೂರು ಸ್ತಬ್ಧ

Upayuktha

ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ, ನಿಲ್ದಾಣ ಮತ್ತು ದರ ವಿವರ

Upayuktha