ಕಿರುತೆರೆ- ಟಿವಿ

‘ಕೃಷ್ಣ’ ಧಾರಾವಾಹಿಯ ‘ಕಂಸ’: ಮನೋಜ್ಞ ಅಭಿನಯ ನೀಡಿದ ಈ ಕಲಾವಿದ ಯಾರು ಗೊತ್ತೇ…?

ವಿಲಾಸ್‌ರಾಜ್‌- ಮರಾಠಿ ರಂಗಭೂಮಿ ಕಲಾವಿದ

ಪೌರಾಣಿಕ ಕಥೆಗಳನ್ನು ಇಂದಿನ‌ ಜನತೆಯು ಹೆಚ್ಚೆಚ್ಚು ಇಷ್ಟಪಡುತ್ತಿದ್ದು. ಅದರಂತೆಯೆ ಲಾಕ್‌ಡೌನ್‌ ಸಮಯದಲ್ಲಿ ದೂರದರ್ಶನದ ರಾಷ್ಟ್ರೀಯ ವಾಹಿನಿಯು ರಾಮಾಯಣದ ಬಳಿಕ ‘ಕೃಷ್ಣ’ ಧಾರಾವಾಹಿ ಪ್ರಸಾರ ಮಾಡುವ ಮೂಲಕ ಕಿರುತೆರೆಯಲ್ಲಿ ಹೊಸ ದಾರಿಯನ್ನು ಸೃಷ್ಟಿಸಿದೆ.

ಡಿಡಿ ನ್ಯಾಷನಲ್‌ ಚಾನೆಲ್‌ನಲ್ಲಿ ಬರುತ್ತಿರುವ ರಮಾನಂದ ಸಾಗರ್ ಅವರ ಕೃಷ್ಣ ಧಾರಾವಾಹಿಯು ಮರುಪ್ರಸಾರಗೊಳ್ಳುತ್ತಿದ್ದು ಉತ್ತಮ ಪ್ರತಿಕ್ರಿಯೆ ಪಡೆದಿದೆ. ಕೃಷ್ಣ ಲೀಲೆಗಳೊಂದಿಗೆ ಸಮಾಜದ ದುಷ್ಟರ ಸಂಹಾರವನ್ನು ಮಾಡುವುದರ‌ ಮೂಲಕ ಜಗತ್ತಿಗೆ ತನ್ನ ಸಾರವನ್ನು ಪರಿಚಯಿಸಿದನು. ಅದರಲ್ಲಿಯೂ ತನ್ನ ಮಾವನಾದ ಕಂಸನನ್ನು ಸಂಹಾರಕ್ಕಾಗಿ ಬಂದ ಕೃಷ್ಣ ಎಂದೇ ಹೇಳಲಾಗುತ್ತದೆ. ಈ ಧಾರಾವಾಹಿಯಲ್ಲಿ ಕಂಸನ ಪಾತ್ರ ಮಾಡಿದ ಕಲಾವಿದ ವಿಲಾಸ್‌ರಾಜ್ ಅಭಿನಯ ನೋಡುಗರಲ್ಲಿ ನೈಜ ಕಂಸನನ್ನೆ ಕಂಡಂತಹ ಅನುಭವವಾಗುತ್ತದೆ. ಪಾತ್ರದಲ್ಲಿ ಪರಕಾಯ ಪ್ರವೇಶದ ಮೂಲಕ ಕಂಸನ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇವರು‌ ಇದಕ್ಕೂ ಮೊದಲು ಅಥವಾ ನಂತರ ಅವರು ಹೆಚ್ಚಾಗಿ ಮತ್ತೆ ಎಲ್ಲೂ ಕಾಣಿಸಿಲ್ಲ.

‌ಈ‌ ಧಾರಾವಾಹಿಯಲ್ಲಿ ಕೃಷ್ಣ, ರಾಧೆ ಸೇರಿದಂತೆ ಪ್ರತಿಯೊಂದು ಪಾತ್ರವು ಅದ್ಭುತವಾಗಿದ್ದು ಅದರಲ್ಲಿಯೂ ಕಂಸನ ಪಾತ್ರದಾರಿಯಾದ ವಿಲಾಸ್‌ರಾಜ್ ನೋಡುಗರ ಮೆಚ್ವಿಗೆಯನ್ನು ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಕಂಸ‌ ಎಂಬ ಪಾತ್ರಕ್ಕೆಬೇಕಾದ ಮೈಕಟ್ಟು, ಗಡಸು ಧ್ವನಿ ಎಲ್ಲವೂ ಇವರಲ್ಲಿ ಸೇರುವುದರೊಂದಿಗೆ ಪೌರಾಣಿಕ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇವರ ನಟನೆ ಇತ್ತೆಂದರೆ ತಪ್ಪಾಗಲಾರದು.

ಇವರು ಮೂಲತಃ ರಂಗಭೂಮಿ ಕಲಾವಿದರು. ಪ್ರೇಮ್ ಸಾಗರ್ ಅವರು ಇವರ ಮನೋಜ್ಞ ನಟನೆಯನ್ನು ರಂಗದಲ್ಲಿ ನೋಡಿ ಮೆಚ್ವುಗೆ ವೈಕ್ತಪಡಿಸಿದ್ದರು. ಈ ಧಾರಾವಾಹಿ ನಂತರ ವಿಲಾಸ್ ಹಿಂತಿರುಗಿ ನೋಡಿದ್ದೇ ಇಲ್ಲ ಎಂದು ಸಾಗರ್ ಅವರು ಹೇಳುತ್ತಾರೆ.

ಕೃಷ್ಣ ಧಾರಾವಾಹಿಯಲ್ಲಿ ಕಂಸ ಮತ್ತು ಲವಣಾಸುರನ ಪಾತ್ರವನ್ನು ವಿಲಾಸ್‌ರಾಜ್‌ ನಿರ್ವಹಿಸಿದ್ದಾರೆ. ಬಳಿಕ ವಿಕ್ರಮ್ ಔರ್ ಬೇತಾಳ್ ಧಾರಾವಾಹಿಯಲ್ಲೂ ಅವರು ನಟಿಸಿದ್ದರು. ಇನ್ಮು ವಿಲಾಸ್ ಅವರ ಪಾತ್ರದಲ್ಲಿ ಎಷ್ಟು ಮಗ್ನರಾಗುತ್ತಿದ್ದರೆಂದರೆ ಕೆಲವೊಮ್ಮೆ ಟಿವಿ ನೋಡುತ್ತಿದ್ದ ಮಕ್ಕಳು ಸಹ ಹೆದರಿ ಹೋಗುವಂತೆ ನೈಜವಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದರು ವಿಲಾಸ್ ರಾಜ್.

ಒಂದು ಬಾರಿ ವಿಲಾಸ್‌ರಾಜ್‌ ಗಿರ್‌ಗಾಂವ್‌ಗೆ ತೆರಳಿದ್ದಾಗ ಅವರನ್ನು ನೋಡಿದ ಮಕ್ಕಳೆಲ್ಲಾ ‘ಲವಣಾಸುರ ಬಂದ, ಎಲ್ಲರೂ ಮನೆಯೊಳಗೆ ಹೋಗಿ’ ಎಂದು ಕೂಗಿಕೊಂಡ ಘಟನೆ ಅವರ ನಟನೆ ಎಷ್ಟು ಪ್ರಭಾವಿಯಾಗಿತ್ತು ಎಂಬುದಕ್ಕೆ ಸಾಕ್ಷಿ. ಈ ಘಟನೆ ವಿಲಾಸ್‌ರಾಜ್ ಅವರನ್ನು ಭಾರೀ ಅಚ್ಚರಿಯಲ್ಲಿ ಕೆಡವಿತು.

ಲವಣಾಸುರನ ಪತ್ನಿಯ ಪಾತ್ರ ಮಾಡಿದ್ದ ಕ್ಷಮಾ ರಾಜ್‌ ಬಳಿಕ ಕಂಸನ ಪತ್ನಿಯ ಪಾತ್ರವನ್ನೂ ಮಾಡಿದ್ದರು. ಬಳಿಕ ಅವರಿಬ್ಬರೂ ನಿಜ ಜೀವನದಲ್ಲೂ ದಂಪತಿಗಳಾದರು.

ದುಃಖದ ಸಂಗತಿಯೆಂದರೆ ಈಗ ಅವರು ನಮ್ಮೊಂದಿಗಿಲ್ಲ. 2015ರಲ್ಲಿ ‘ಆಯಿ ಶಿವಾಯ್ ಘರ್ ನಹಿ’ ಎಂಬ ಮರಾಠಿ ಧಾರಾವಾಹಿಯಲ್ಲಿ ನಟಿಸಿದ್ದೇ ಕೊನೆ. ಅನಂತರ ಅವರು ನಟನೆಗೆ ವಿದಾಯ ಹೇಳಿದರು.

ಆದರೆ ತನ್ನ ಪಾತ್ರಕ್ಕೆ ಜೀವ ತುಂಬುವಂತ ಕಲಾವಿದ ನಂತರದಲ್ಲಿ ಮರಾಠಿಯ ಆಯಿ ಶಿವಾಯಿ ಗರ್ ನಹಿ ಎಂಬ ಧಾರಾವಾಹಿಯ ನಂತರ ಕಿರುತೆರೆಯಿಂದ ಕಣ್ಮರೆಯಾದರು. ಆದರೆ ಇಂದಿಗೂ ಜನ ಕಂಸ ಎಂದಾಕ್ಷಣ ಒಮ್ಮೆ ವಿಲಾಸ್ ರಾಜ್ ಅವರನ್ನು ನೆನೆಯುವಂತೆ ಜನಮನದಲ್ಲಿ ಅಚ್ಚಳಿಯದಂತೆ ಇದ್ದಾರೆ.

ಮರು ಪ್ರಸಾರವಾಗುತ್ತಿರುವ ಶ್ರೀಕೃಷ್ಣ ಧಾರಾವಾಹಿಯಲ್ಲಿ ಕಂಸನ ವಧೆಯ ಸನ್ನಿವೇಶದ ಸಂಚಿಕೆ ಸನಿಹವಾಗಿದೆ. ಯಾರಾದರೂ ನೋಡದೆ ಇದ್ದಲ್ಲಿ ವಿಲಾಸ್ ರಾಜ್ ಅವರ ಅದ್ಬುತ ನಟನೆಯನ್ನು ನೋಡಲಾದರೂ ಈಗಲಾದರೂ ಒಮ್ಮೆ ವೀಕ್ಷಿಸಬಹುದು.

– ಶ್ರೀಕೃಷ್ಣ ಭಟ್ ಶಿರಸಿ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಡ್ಯಾನ್ಸಿಂಗ್ ಸ್ಟಾರ್ ಸೋನಾಲಿ ಭದೋರಿಯಾ

Upayuktha

ಪ್ರವೀಣ್ ಮಂಜೇಶ್ವರ ನಿರ್ದೇಶನದ “ಯಾರಿವನು” ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆ

Upayuktha

ಸಂಗೀತ ನಿರ್ದೇಶಕ ವಿ. ಮನೋಹರ್ ಇಂದು ಹನುಮಗಿರಿ ಕ್ಷೇತ್ರಕ್ಕೆ ಭೇಟಿ

Harshitha Harish

Leave a Comment