ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಜಯಂತಿ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

ಸ್ವಾಮಿ ವಿವೇಕಾನಂದರು ನಮ್ಮವರೆಂಬುದು ನಮ್ಮ ಹೆಮ್ಮೆ: ಶ್ರೀನಿವಾಸ ಪೈ

ಪುತ್ತೂರು: ಶಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಸ್ಥಳವನ್ನು ಅವರ ಹೆಸರಿನಿಂದಲೇ ಗುರುತಿಸಲಾಗುತ್ತಿದೆ. ಆ ಪ್ರದೇಶದ ಜನಜೀವನದ ಮೇಲೆ ವಿವೇಕಾನಂದರ ಚಿಂತನೆಗಳ ಸಕಾರಾತ್ಮಕ ಪರಿಣಾವನ್ನು ಈಗಲೂ ಕಾಣುವುದಕ್ಕೆ ಸಾಧ್ಯ. ಇಂತಹ ಮಹಾನ್ ಚೇತನ ನಮ್ಮವರು ಎನ್ನುವುದನ್ನು ಯೋಚಿಸುವಾಗಲೇ ಹೆಮ್ಮೆ ಎನಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.

ಅವರು ಶನಿವಾರ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಜನರಲ್ಲಿ ಪಸರಿಸುವುದು ಸ್ಪರ್ಧೆಯ ಉದ್ದೇಶ. ಅವರನ್ನು ಹೆಚ್ಚು ಹೆಚ್ಚು ಅರಿಯುವುದಕ್ಕೆ, ಅವರ ಆದರ್ಶಗಳ ಬಗೆಗೆ ಚಿಂತನೆ ನಡೆಸುವುದಕ್ಕೆ ಈ ಸ್ಪರ್ಧೆ ಅವಕಾಶ ಮಾಡಿಕೊಡುತ್ತಿದೆ. ಅವರ ಜೀವನ ಮತ್ತು ಮಾರ್ಗದರ್ಶನ ಯುವಸಮೂಹದ ಮಧ್ಯೆ ಪ್ರಸಾರವಾಗಬೇಕು. ಕಡಿಮೆ ಜೀವಿತಾವಧಿಯಲ್ಲಿ ಅವರು ಏರಿದ ಎತ್ತರ, ಸಾಧಿಸಿದ ಸಂಗತಿಗಳು ಅನೂಹ್ಯವಾದದ್ದು ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಯಾವುದೇ ದೇಶವನ್ನು ಅಧಃಪತನಕ್ಕೆ ತಳ್ಳಬೇಕಾದರೆ ಬಾಂಬ್ ದಾಳಿ ಮಾಡಬೇಕಿಲ್ಲ ಬದಲಾಗಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆ ಸಾಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗಾಗಿ ಭಾರತೀಯ ಶಿಕ್ಷಣವನ್ನು ಉತ್ಕೃಷ್ಟ ಮಟ್ಟದಲ್ಲಿ ಕಾಪಾಡಿಕೊಳ್ಳುವುದಕ್ಕೆ ವಿವೇಕಾನಂದರ ಚಿಂತನೆಗಳು ಅಗತ್ಯ. ಒಳ್ಳೆಯ ಮನಸ್ಸಿನಿಂದ ಕಾರ್ಯನಿರ್ವಹಿಸುವುದು ಮನುಷ್ಯನನ್ನು ಉನ್ನತಿಕೆಯತ್ತ ಒಯ್ಯುತ್ತದೆ ಎಂದು ನುಡಿದರು.

ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ.ಶ್ರೀಧರ ಎಚ್.ಜಿ.ಮಾತನಾಡಿ ವಿವೇಕಾನಂದ ಜಯಂತಿ ಸ್ಪರ್ಧೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹಾಗಾಗಿಯೇ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿಲ್ಲ. ಇತರೆ ಕಾಲೇಜಿನಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಒಳ್ಳೆಯ ಅನುಭವವನ್ನು ಈ ಸ್ಪರ್ಧೆ ನೀಡುತ್ತದೆ. ಕಾಲೇಜು ಆರಂಭವಾದಾಗಿನಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ನುಡಿದರು.

ಕಾರ್ಯಕ್ರಮವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಕೆ.ಮಂಜುನಾಥ್ ಉದ್ಘಾಟಿಸಿ, ಶುಭ ಹಾರೈಸಿದರು. ವಿದ್ಯಾರ್ಥಿನಿ ಶ್ರೀರಾಗ ಪ್ರಾರ್ಥಿಸಿದರು. ವಿವೇಕಾನಂದ ಜಯಂತಿ ಸ್ಪರ್ಧಾ ಸಮಿತಿಯ ಸಂಯೋಜಕರಲ್ಲೊಬರಾದ ವಿದ್ಯಾ ಎಸ್ ಸ್ವಾಗತಿಸಿದರು. ಮತ್ತೋರ್ವಸಂಯೋಜಕ ರಮೇಶ್ ಭಟ್ ಕೆ ವಂದಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಡಿ.19 ರಿಂದ ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ಜಾತ್ರೆ: ಚಪ್ಪರ ಮುಹೂರ್ತ

Upayuktha

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಬೇಕು: ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ

Upayuktha

ಮೈಕ್ರೋ ಫೈನಾನ್ಸ್‌ಗಳಿಂದ ಬಡ ಮಹಿಳೆಯರ ಸಾಲ ಮನ್ನಾಕ್ಕೆ ಆಗ್ರಹ

Upayuktha