ಕತೆ-ಕವನಗಳು

*ವ್ಯವಸ್ಥೆ ( ಅವ್ಯವಸ್ಥೆ)*

ಕ್ರಾಂತಿಯಾಗಬೇಕು ;ತುಳಿವವರ ಮೆಟ್ಟಿ ನಿಲ್ಲಬೇಕು, ಅಪಹಾಸ್ಯಗೈದವರ ಸೊಕ್ಕು ಮುರಿಯಬೇಕು

ಕ್ರಾಂತಿಯಾಗಬೇಕು;ಬಡವನೆಂದು ಜರಿದವರ ಅಹಂಕಾರವಳಿಯಬೇಕು, ಪುಟ್ಟ ಮಕ್ಕಳ ಜೀತಕಿಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು..

ಕ್ರಾಂತಿಯಾಗಬೇಕು ಅತ್ಯಾಚಾರಿಗಳಿಗೆ ಕ್ರೂರವಾಗಿ ನೋವು ನೀಡಬೇಕು, ಕೊಲೆಗಾಡುಕರಿಗೆ ಗಲ್ಲಾಗಬೇಕು.

ಕ್ರಾಂತಿಯಾಗಬೇಕು;ನೊಂದವರ ಪಾಲಿಗೆ ಬೆಳಕಾಗುವಂತ, ಹೊಟ್ಟೆ ಹಸಿವಿನಿಂದ ನರಳುವ ಜನರಿಲ್ಲದ ನಾಡಗಬೇಕು

ಕ್ರಾಂತಿಯಾಗಬೇಕು ;ನಮ್ಮ ನ್ಯಾಯ ವ್ಯವಸ್ಥೆಯಲ್ಲೊಂದು, ಅನಕ್ಷರಸ್ತರು ಅರಿವಂತ ಕಾನೂನು ಬರಬೇಕು, ಅಕ್ಷರಸ್ತರ ಹುಟ್ಟು ಹಾಕಬೇಕು..

ಕ್ರಾಂತಿಯಾಗಬೇಕು ಶಿಕ್ಷಣದಲ್ಲೊಂದು, ಡೊನೇಷನ್ ಎಂಬ ಮಹಾಮಾರಿ ತೊಲಗಬೇಕು, ಸರ್ವರಿಗೂ ಉಚಿತ ಶಿಕ್ಷಣ ಲಭಿಸಬೇಕು..

ಕ್ರಾಂತಿಯಾಗಬೇಕು ಜಾತಿ ಜಾತಿಗಳ ನಡುವಲ್ಲಿ, ಸರ್ವರೂ ಸಮಾನರು ಎಂಬ ದ್ಯೇಯ ವಾಕ್ಯದಲ್ಲಿ,ಎಲ್ಲರೂ ನಮ್ಮವರೇ ಎಂಬ ಹೆಮ್ಮೆ ಇರಬೇಕು..

ಕ್ರಾಂತಿಯಾಗಬೇಕು ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ ಸಿಗಬೇಕು, ಅರ್ಹತೆ ಇರುವವನೀಗಷ್ಟೇ ಉನ್ನತ ಹುದ್ದೆ ದೊರೆಯಬೇಕು..

ಕ್ರಾಂತಿಯಾಗಬೇಕು ದೇಶದೊಳು ಬದಲಾವಣೆಯ ಕ್ರಾಂತಿಯಾಗಬೇಕು ಜನರೆಲ್ಲರೂ ಒಂದಾಗಬೇಕು, ಭವಿಷ್ಯತ್ತಿನ ಚಿಂತನೆ ಮಾಡಬೇಕು..

✍ *ನಾಗಶ್ರೀ. ಎಸ್. ಭಂಡಾರಿ*
*ಮೂಡುಬಿದಿರೆ*

Related posts

ಕವನ: ಅ…ಕ್ಷರ ಮಹಿಮೆ

Upayuktha

ಹವ್ಯಕ ಪದ್ಯ: ಅಜ್ಜಿಯ ಶಾಸ್ತ್ರಂಗೊ

Upayuktha

ಪರಿಸರ

Harshitha Harish