ಪ್ರಮುಖ ವಿಜ್ಞಾನ-ತಂತ್ರಜ್ಞಾನ

ಸೆ.13ಕ್ಕೆ ಬಾನಂಗಳದಲ್ಲೊಂದು ಅಪರೂಪದ ದೃಶ್ಯ: ನೋಡಲು ಮರೆಯದಿರಿ

ಗುರು ಮತ್ತು ಶನಿ ಗ್ರಹಗಳ ನಡುವೆ 3 ಜನ ಗಗನಯಾತ್ರಿಗಳ ಪ್ರಯಾಣ

ಸೆಪ್ಟೆಂಬರ್ 13ರಂದು ಸಂಜೆ, ಗುರು ಮತ್ತು ಶನಿ ಗ್ರಹಗಳ ಮಧ್ಯದಿಂದ 3 ಗಗನಯಾತ್ರಿಗಳು ಹಾದು ಹೋಗುತ್ತಾರೆ.

ಬರುವ ದಿನಗಳಲ್ಲಿ ಸೂರ್ಯಾಸ್ತದ ನಂತರ ಆಕಾಶದಲ್ಲಿ ಅತೀ ಪ್ರಕಾಶಮಾನವಾಗಿರುವ ಗುರು ಗ್ರಹವನ್ನು ಗುರುತಿಸುವುದು ಕಷ್ಟ ಅಲ್ಲ. ದಕ್ಷಿಣ ಕ್ಷಿತಿಜದಿಂದ ಉತ್ತರದ ದಿಕ್ಕಿನಲ್ಲಿ ನೋಡುತ್ತಾ ಬಂದರೆ, ಪ್ರಕಾಶಮಾನವಾಗಿ ಕಾಣುವ ಚುಕ್ಕಿ ಗುರು ಗ್ರಹ. ಇದರ ಪಶ್ಚಿಮ ದಿಕ್ಕಿನಲ್ಲಿ ಶನಿ ಗ್ರಹವನ್ನು ಗುರುತಿಸಬಹುದು.

ಸೆಪ್ಟೆಂಬರ್ 13ರ ಸಂಜೆ ಈ ಗುರು ಗ್ರಹದ ಹೊಳಪನ್ನು ಪ್ರತಿಸ್ಪರ್ಧಿಸುವ ಚುಕ್ಕಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್. ಇದನ್ನು ISS ಎಂದು ಕರೆಯುತ್ತಾರೆ. ಹಲವಾರು ದೇಶಗಳು ಒಟ್ಟುಗೂಡಿ ಸ್ಥಾಪಿಸಿದ ಈ ಪ್ರಯೋಗಾಲಯವು 21 ವರ್ಷಗಳಿಂದ, ಅಂತರಿಕ್ಷದಲ್ಲಿ ಪ್ರತಿ ಗಂಟೆಗೆ 27500 ಕಿ. ಮಿ ವೇಗದಲ್ಲಿ ಭೂಮಿಯ ಸುತ್ತ ದಿನಕ್ಕೆ ಸುಮಾರು 15 ಬಾರಿ ಪರಿಭ್ರಮಿಸುತ್ತಿದೆ.

410 ಕಿಲೋಮೀಟರ್ ಎತ್ತರದಲ್ಲಿ ಹಾರುವ ಈ ಒಂದು ಉಪಗ್ರಹದಲ್ಲಿ ಮನುಷ್ಯರು ವಾಸಿಸುತ್ತ, ಅಂತರಿಕ್ಷದ ಬಗ್ಗೆ, ಹಲವಾರು ಪ್ರಯೋಗಗಳು ಮತ್ತು ಸಂಶೋಧನೆಗಳನ್ನು ನಡೆಸುತ್ತಾರೆ. ಕೆಲವೊಮ್ಮೆ ಒಂದು ವರ್ಷಗಳ ಕಾಲ ಓರ್ವ ಗಗನಯಾತ್ರಿ ಇಲ್ಲಿ ವಾಸಿಸಿದ್ದು ಉಂಟು.

ಕೆಲವು ತಿಂಗಳಿನಿಂದ, ರಷ್ಯಾ ದೇಶದ ಏನಾಟೊಲಿ ಇವ್ಯಾನಿಶಿನ್ ಮತ್ತು ಇವಾನ್ ವ್ಯಾಗನರ್ ಹಾಗು ಅಮೇರಿಕಾದ ಕ್ರಿಸ್ ಕ್ಯಾಸಿಡಿ ಅವರು ಈ ಉಪಗ್ರಹದಲ್ಲಿ ವಾಸಿಸುತ್ತಿದ್ದಾರೆ. ಇವರನ್ನು ಹೊತ್ತ ISS ಸಪ್ಟೆಂಬರ್ 13ರಂದು, 7:30 ರ ಹೊತ್ತಿಗೆ ನೈರುತ್ಯ ದಿಕ್ಕಿನ ಕ್ಷಿತಿಜದಿಂದ ಉದಯವಾಗಿ ವಾಯುವ್ಯ ದಿಕ್ಕಿನಲ್ಲಿ ಹಾದುಹೋಗುವುದು ಗೋಚರಿಸುತ್ತದೆ. ಈ ಪ್ರಯಾಣದಲ್ಲಿ ISS ಅನ್ನು ಗುರು ಹಾಗೂ ಶನಿ ಗ್ರಹಗಳ ನಡುವಿನಲ್ಲಿ 7:32ಕ್ಕೆ ಕಾಣಬಹುದು.

ISS ನ ಈ ಪ್ರಯಾಣದಿಂದ, ಉಡುಪಿಯ ನಿವಾಸಿಗಳಿಗೆ, 3 ಗಗನಯಾತ್ರಿಗಳು, ಈ 2 ದೈತ್ಯ ಗ್ರಹಗಳ ನಡುವೆ ಹಾದು ಹೋಗುವಂತೆ ಕಾಣುತ್ತದೆ. ಈ ದಿನ ISS ಅನ್ನು ಖಗೋಳಶಾಸ್ತ್ರಜ್ಞರು -3.5 ಪ್ರಮಾಣ (magnitude) ದಷ್ಟು ಹೊಳಪು ಎಂದು ಗುರುತಿಸುತ್ತಾರೆ.

ಇದರೊಂದಿಗೆ ಗುರು ಗ್ರಹ -2.48 ಹಾಗೂ ಶನಿ ಗ್ರಹ 0.38ರಷ್ಟು ಪ್ರಮಾಣ ಇರುತ್ತದೆ. ಹಾಗಾಗಿ ಸೆಪ್ಟೆಂಬರ್ 13ರಂದು ಸಂಜೆ 7:30ರಿಂದ 7:33ರ ವರೆಗೆ ಆಕಾಶದಲ್ಲಿ ಅತೀ ಪ್ರಕಾಶಮಾನವಾಗಿ ಹೊಳೆಯುವುದು ISS ಉಪಗ್ರಹ.

ಗುರು ಗ್ರಹ ಭೂಮಿಯಿಂದ 689616264 ಕಿಲೋಮೀಟರ್ ದೂರ ಹಾಗೂ ಶನಿ ಗ್ರಹ 1406444381 ಕಿಲೋಮೀಟರ್ ದೂರದಲ್ಲಿ ಇದ್ದು, 520 km ಎತ್ತರದಲ್ಲಿ ಈ 2 ಗ್ರಹಗಳ ಮಧ್ಯದಲ್ಲಿ ಹಾದು ಹೋಗುವ ಹಾಗೆ ನಮಗೆ ಕಾಣುವ ISSನ ಈ ದೃಶ್ಯವನ್ನು ಹವ್ಯಾಸಿ ಖಗೋಳ ವೀಕ್ಷಕರು ಹಾಗೂ ಖಗೋಳ-ಛಾಯಾಗ್ರಾಹಕರು ಸಂಭ್ರಮಿಸಬಹುದು.

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಶುಭ್ರ ಆಕಾಶದಲ್ಲಿ ಎಲ್ಲರೂ ಈ ದೃಶ್ಯವನ್ನು ನೋಡಿ ಆನಂದಿಸಬೇಕೆಂದು ಹಾರೈಸುತ್ತದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ನಿಷ್ಠೆ ಮತ್ತು ಜ್ಞಾನದ ಜತೆಗೆ ರಾಷ್ಟ್ರ ನಿರ್ಮಾಣ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರಿ

Upayuktha

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಗೆ ಕೇಂದ್ರ ಅನುಮೋದನೆ; ಎನ್‌ಸಿರ್‌ ಗೂ ಎನ್‌ಪಿಆರ್‌ಗೂ ಸಂಬಂಧವಿಲ್ಲ

Upayuktha

ಕೊರೊನಾ ಅಪ್‌ಡೇಟ್: ದ.ಕ.- 5, ಉಡುಪಿ- 21, ಕರ್ನಾಟಕ- 176

Upayuktha

Leave a Comment

error: Copying Content is Prohibited !!