ರಾಜ್ಯ ಸಮುದಾಯ ಸುದ್ದಿ

ತೆರಿಗೆದಾರರಾದ ನಮಗೆ ಸರ್ಕಾರಿ ಸೌಲಭ್ಯ ಪಡೆಯುವ ಹಕ್ಕಿದೆ: ಸಚ್ಚಿದಾನಂದ ಮೂರ್ತಿ

ಬೆಂಗಳೂರು: ಬ್ರಾಹ್ಮಣರು ಸ್ವಾಭಿಮಾನಿಗಳಾಗಿದ್ದು, ಆರ್ಥಿಕ ಸಮಸ್ಯೆಗಳಿದ್ದರೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹಿಂಜರಿಯುತ್ತಾರೆ. ಆದರೆ ತೆರಿಗೆದಾರರಾದ ನಮಗೆ ಸರ್ಕಾರದಿಂದ ಸೌಲಭ್ಯ ಪಡೆಯುವ ಹಕ್ಕಿದೆ. ಅದನ್ನು ನಾವು ಬಳಸಿಕೊಳ್ಳಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಚ್ ಎಸ್ ಸಚ್ಚಿದಾನಂದ ಮೂರ್ತಿ ಹೇಳಿದರು.

ಸಚ್ಚಿದಾನಂದ ಮೂರ್ತಿಯವರು,ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಆಗಮಿಸಿ, ಮಹಾಸಭೆಯ ಗೌರವ ಸ್ವೀಕರಿಸಿ ಮಾತನಾಡಿದರು. ಸಂವಿಧಾನದ ಆಶಯದಂತೆ ಆರ್ಥಿಕವಾಗಿ ದುರ್ಬಲರಾದವರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆರ್ಥಿಕವಾಗಿ ಬ್ರಾಹ್ಮಣರಿಗೂ ಈ ಸೌಲಭ್ಯ ಲಭ್ಯವಿದ್ದು, ಅದನ್ನು ಪಡೆದುಕೊಳ್ಳಬೇಕು ಎಂದರು. ಸಾಂದೀಪಿನಿ ಶಿಷ್ಯವೇತನ, ಚಾಣಕ್ಯ ಆಡಳಿತ ತರಬೇತಿ, ಸ್ವಯಂ ಉದ್ಯೋಗ ತರಬೇತಿ, ವೇದ ಶಿಕ್ಷಣ ಶಿಷ್ಯವೇತನ ಮುಂತಾದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಹಲವಾರು ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.

ಹವ್ಯಕ ಮಹಾಸಭೆಯು ಡಾ.ಕಜೆಯವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಮಹಾಸಭೆಯ ಕಾರ್ಯಗಳು ಶ್ಲಾಘನೀಯವಾಗಿದ್ದು, ಸಮುದಾಯದ ಒಳಿತಿಗೆ ನಾವೆಲ್ಲರೂ ಒಗ್ಗಟ್ಟಾಗೋಣ ಎಂದರು.

ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರು ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಅಲ್ಪಕಾಲದಲ್ಲಿ ಅನೇಕ ಉತ್ತಮ ಯೋಜನೆಗಳನ್ನು ಹಾಕಿಕೊಂಡು ಮುನ್ನೆಡೆಯುತ್ತಿದೆ. ಅವರ ಎಲ್ಲಾ ಕಾರ್ಯಗಳಿಗೂ ಮಹಾಸಭೆ ಯಾವುದೇ ಷರತ್ತುಗಳಿಲ್ಲದೇ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದರು ಹಾಗೂ ವಯಕ್ತಿಕವಾಗಿ 1,08,000 ಸಾಥ್ಮ್ಯ ಹಾಗೂ ಭೌಮ್ಯ ಮಾತ್ರೆಗಳನ್ನು (1200 ಕಿಟ್) ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಉಚಿತವಾಗಿ ನೀಡಿ, ಆಸಕ್ತರಿಗೆ ನೀಡುವಂತೆ ಕೋರಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಗೌರವ ಸದಸ್ಯರಾದ ಎಂ.ಎಸ್ ಹೆಗಡೆ ಗೌರೀಬಣಗಿ ಮಂಡಳಿಯ ಕಾರ್ಯಗಳನ್ನು ತಿಳಿಸಿ, ಇ.ಡಬ್ಲ್ಯು. ಎಸ್ ಪ್ರಮಾಣಪತ್ರ ಪಡೆಯುವ ಕುರಿತು ಮಹಾಸಭೆಯ ಸದಸ್ಯರುಗಳಿಗೆ ತಿಳಿಸುವಂತೆ ಕೋರಿದರು.

ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ ಅವರು ಮಹಾಸಭೆಯ ಕಿರುಪರಿಚಯವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಸಚ್ಚಿದಾನಂದ ಮೂರ್ತಿಯವರನ್ನು ಹವ್ಯಕ ಮಹಾಸಭೆಯ ವತಿಯಿಂದ ಸನ್ಮಾನಿಸಲಾಯಿತು.

ಅಭಿವೃದ್ಧಿ ಮಂಡಳಿಯ ಸದಸ್ಯರಾದ ಶ್ರೀಮತಿ ವತ್ಸಲಾ ನಾಗೇಶ್, ಮಹಾಸಭೆಯ ಕೋಶಾಧಿಕಾರಿಗಳಾದ ಕೃಷ್ಣಮೂರ್ತಿ ಭಟ್ ಯಲಹಂಕ, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್ ಯಲ್ಲಾಪುರ, ಶ್ರೀಧರ ಭಟ್ ಸಾಲೇಕೊಪ್ಪ ಸೇರಿದಂತೆ ಮಹಾಸಭೆಯ ವಿವಿಧ ಭಾಗಗಳ ನಿರ್ದೇಶಕರು ಹಾಗೂ ಸಂಚಾಲಕರು ಉಪಸ್ಥಿತಿರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಚಿತ್ರರಂಗದ ಒತ್ತಾಯ ಕ್ಕೆ ಒಪ್ಪಿಗೆ ಸೂಚಿಸಿದ ಸರ್ಕಾರ, 100% ಸೀಟ್‌ ಭರ್ತಿಗೆ ಒಪ್ಪಿಗೆ

Harshitha Harish

ಕೋಲಾರದಲ್ಲಿ ಆಂಜನೇಯ ದೇಗುಲ ಅಪವಿತ್ರಗೊಳಿಸಿದ ದುಷ್ಕರ್ಮಿ

Upayuktha

ರಾಮಚಂದ್ರಾಪುರ ಮಠದಿಂದ ಬಾಲಕ, ಬಾಲಕಿಯರಿಗೆ ಗುರುಕುಲ

Upayuktha