ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್‌ ಶಾಲೆಗಳಲ್ಲಿ ‘ವಿ ಇನ್‍ಸ್ಪೈರ್’ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತೆಂಕ ಎಡಪದವಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವಿನ ವಿವೇಕಾನಂದ ಪ್ರೌಢಶಾಲೆಗಳಲ್ಲಿ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕೆ ಸಂಬಂಧಿಸಿದ ಒಂದು ದಿನದ ಜಾಗೃತಿ ಕಾರ್ಯಕ್ರಮ ‘ವಿ ಇನ್‍ಸ್ಪೈರ್’ ನಡೆಸಿದರು.

ಈ ಸಂದರ್ಭದಲ್ಲಿ ವಿಶೇಷ ಚೇತನ ವಿದ್ಯಾರ್ಥಿ ಪ್ರಕಾಶ್ ಉದಾಹರಣೆಯ ಮೂಲಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಸಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಯೋಗ, ಕೆಟ್ಟ ಸ್ಪರ್ಶ ಒಳ್ಳೆಯ ಸ್ಪರ್ಶ, ಋತುಚಕ್ರ, ಸ್ವ ರಕ್ಷಣೆ, ಮಾನಸಿಕ ಆರೋಗ್ಯದ ಮಹತ್ವ, ಒತ್ತಡ ನಿರ್ವಹಣೆಯಂತಹ ವಿಷಯಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು.

ವಿದ್ಯಾರ್ಥಿಗಳಾದ ದಿಶಾ ಶೆಟ್ಟಿ, ವಿಜೇತ ಜೈನ್, ಅಪೇಕ್ಷ, ನಸ್ಮ, ತೇಜು, ಆಕಾಶ್, ಸ್ಫೂರ್ತಿ, ತೇಜಸ್ವಿನಿ,  ಉಪನ್ಯಾಸಕ ಜಿಶ್ಣುರವರ ಮಾರ್ಗದರ್ಶನದಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿ ಈ ಕಾರ್ಯಕ್ರಮವನ್ನು ನಡೆಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ರೇಡಿಯೋ ಪಾಂಚಜನ್ಯದಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಬೆಳಕು’

Upayuktha

ತುಳುವರ ಪಾರಂಪರಿಕ ಜ್ಞಾನ: ಉಜಿರೆಯಲ್ಲಿ ಜ.23ಕ್ಕೆ ಒಂದು ದಿನದ ವಿಚಾರ ಸಂಕಿರಣ

Upayuktha

ಕೊರೊನಾ ಸಂಕಷ್ಟದ ದಿನಗಳಲ್ಲಿ 1163 ಯಕ್ಷ ಕಲಾವಿದರಿಗೆ ಪಟ್ಲ ಫೌಂಡೇಶನ್‌ನಿಂದ ನೆರವು

Upayuktha