ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಕ್ರಿಯಾತ್ಮಕತೆಗೆ ಲೆಕ್ಕ ಲೇಸು

ಉಜಿರೆ: ವಿದ್ಯಾರ್ಥಿಗಳ ಕ್ರಿಯಾತ್ಮಕತೆ ಹಾಗೂ ಸೃಜನಶೀಲತೆ ಆಭಿವೃದ್ಧಿಗೆ ಗಣಿತಶಾಸ್ತ್ರ ಸಹಕಾರಿ ಎಂದು ಹಿರಿಯ ಸಂಶೋಧಕ ಹಾಗೂ ಪ್ರಾದ್ಯಾಪಕ, ಸಿ ಆರ್ ಪ್ರದೀಪ ಇಲ್ಲಿನ ಎಸ್ ಡಿ ಎಂ ಕಾಲೇಜಿನ ಗಣಿತಶಾಸ್ತ್ರ ವಿಭಾಗ, ಐಕ್ಯೂಎಸಿ ಹಾಗೂ ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ನಡೆದ ವೆಬಿನಾರಿನಲ್ಲಿ ನುಡಿದರು.

ಮೂಲವಿಜ್ಞಾನವನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದ್ದ ಈ ವೆಬಿನಾರಿನಲ್ಲಿ ಉಪನ್ಯಾಸ ಕೊಡುತ್ತಾ ಅವರು, ವಿವಧ ಮಾದರಿಯ ಮಾಯಾಚೌಕದ ತಯಾರಿ, ಚದುರಂಗದ ಕಾಯಿಗಳ ಚಲನಾ ವಿಧಾನ ಕುರಿತ ಸಮಸ್ಯೆಗಳನ್ನು ಹಾಗೂ ವಿದ್ಯಾರ್ಥಿಗಳು ಹೇಗೆ ಕ್ರಿಯಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿವರಿಸಿದರು.

ತಾಲೂಕಿನ ವಿವಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥ ಗಣೇಶ್ ನಾಯಕ್ ಸ್ವಾಗತಿಸಿ, ಪೂಜಿತಾ ವರ್ಮ ಜೈನ್ ನಿರೂಪಿಸಿ, ಅಕ್ಷತಾ ಬಿ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ವೇಣೂರು: 94ಸಿ ಯೋಜನೆಯಡಿ 73ಕುಟುಂಬಗಳಿಗೆ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮ

Sushmitha Jain

ಕಾಡಿನಿಂದ ಕಾಡಿಸಿಕೊಂಡರೆ ಸೃಜನಶೀಲತೆ: ನರೇಂದ್ರ ರೈ ದೇರ್ಲ

Upayuktha

ವಿವೇಕಾನಂದ ಕಾಲೇಜು ಎಂಕಾಂ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

Upayuktha