ಪುತ್ತೂರು: ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರದಲ್ಲಿ ಪ್ರಸಾರವಾಗುತ್ತಿರುವ ವಾರದ ಅತಿಥಿ ಕಾರ್ಯಕ್ರಮಕ್ಕೆ ದೆಹಲಿ ಆಕಾಶವಾಣಿ ಕೇಂದ್ರದ ವಾರ್ತಾವಾಚಕ ಎ.ವಿ. ಚಿತ್ತರಂಜನ್ ದಾಸ್ ಅವರ ಅನುಭವದ ಕುರಿತ ಸಂದರ್ಶನ ಡಿ. 24ರಂದು ಪಾಂಚಜನ್ಯ ಕೇಂದ್ರದಲ್ಲಿ ನಡೆಯಿತು.
ಮೂಲತಃ ಸುಳ್ಯದವರಾದ ಇವರ ಬಾಲ್ಯದ ಅನುಭವ ಹಾಗೂ ಇವರ ವೃತ್ತಿ ಜೀವನದ ಅನುಭವದ ಕುರಿತ ಸಂದರ್ಶನ ನೀಡಿದರು.
ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ಸಂದರ್ಶಿಸಿದವರು. ಚಿತ್ತರಂಜನ್ದಾಸ್ ಅವರ ಅನುಭವದ ಮಾತುಕಥೆಯನ್ನು ಡಿ. 27ರಂದು ವಾರದ ಅತಿಥಿ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ