ದೇಶ-ವಿದೇಶ ಪ್ರಮುಖ

ಮೇ 5: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ

ಪ.ಬಂಗಾಳ: ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೇ 5ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಕುರಿತು ಟಿಎಂಸಿ ಹಿರಿಯ ಮುಖಂಡ ಪಾರ್ಥ ಚಟರ್ಜಿ ಇಂದು ಪ್ರಕಟಿಸಿದ್ದಾರೆ.

ಎಂಟು ಹಂತಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 292 ಸ್ಥಾನಗಳ ಪೈಕಿ 212 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಈ ಮೂಲಕ ಮಮತಾ ಸತತ 3ನೇ ಅವಧಿಗೆ ಅಧಿಕಾರ ಉಳಿಸಿಕೊಂಡಿದ್ದಾರೆ. 77 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿರುವ ಬಿಜೆಪಿಯು ಪ್ರಮುಖ ವಿರೋಧ ಪಕ್ಷವಾಗಿ ರೂಪುಗೊಂಡಿದೆ.

ಫಲಿತಾಂಶ ಹೊರ ಬೀಳುತ್ತಿದ್ದಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಖಡ್‌, ಮಮತಾ ಅವರ ಪಕ್ಷದ ಗೆಲುವಿಗೆ ಶುಭಾಶಯ ಕೋರಿ ಟ್ವೀಟಿಸಿದ್ದರು.

ಹಾಗೇ, ಇಂದು ರಾತ್ರಿ 7ಕ್ಕೆ ರಾಜ ಭವನದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು.

 

 

Related posts

ವಿಪತ್ತು ನಿರ್ವಹಣೆ ಸಾಮಾಜಿಕ ಹೊಣೆಗಾರಿಕೆ: ಡಾ. ಡಿ. ವೀರೇಂದ್ರ ಹೆಗ್ಗಡೆ

Upayuktha

ಕೊರೊನಾ ಅಪ್‌ಡೇಟ್ಸ್‌: ಉಡುಪಿ 62, ರಾಜ್ಯದಲ್ಲಿ 267 ಪಾಸಿಟಿವ್ ಪ್ರಕರಣ

Upayuktha

ಮುಂಡಾಜೆ: ಬಿ.ಎಂ.ಎ. ಮಾರ್ಟ್ ಸೂಪರ್ ಮಾರ್ಕೆಟ್ ಉದ್ಘಾಟನೆ

Sushmitha Jain