
ವಾಷಿಂಗ್ಟನ್:
‘ಹೌಡಿ, ಮೋದಿ! ಶೇರ್ಡ್ ಡ್ರೀಮ್ಸ್, ಬ್ರೈಟ್ ಫ್ಯೂಚರ್ಸ್’ ಹೆಸರಿನ ಈ ರ್ಯಾಲಿ ಲಕ್ಷಾಂತರ ಜನರ ಗಮನ ಸೆಳೆಯಲಿದೆ. ಅಮೆರಿಕ ಮತ್ತು ಭಾರತದ ಜನತೆಯ ನಡುವೆ ಬಲವಾದ ಬಾಂಧವ್ಯ ಬೆಸೆಯಲು ಈ ರ್ಯಾಲಿ ಸಹಕಾರಿಯಾಗಲಿದೆ. ಜಗತ್ತಿನ ಅತಿ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳ ನಡುವಣ ರಕ್ಷಣಾ ವ್ಯೂಹಾತ್ಕಕ ಬಾಂಧವ್ಯವನ್ನು ಇದು ಗಟ್ಟಿಗೊಳಿಸಲಿದೆ. ಇಂಧನ ಮತ್ತು ವ್ಯಾಪಾರ ಪಾಲುದಾರಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ’ ಎಂದು ಶ್ವೇತಭವನದ ಪ್ರಕಟಣೆ ಹೇಳಿದೆ.
ಟೆಕ್ಸಾಸ್ ರ್ಯಾಲಿಯ ಬಳಿಕ ಅಧ್ಯಕ್ಷ ಟ್ರಂಪ್ ಓಹಿಯೋದ ವ್ಯಾಪಕೊನೆಟಾಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೋರಿಸನ್ ಅವರ ಜತೆಗೂಡಿ ಆಸ್ಟ್ರೇಲಿಯಾ ಮಾಲೀಕತ್ವದ ಉತ್ಪಾದನಾ ಕೇಂದ್ರವೊಂದ್ನು ಉದ್ಘಾಟಿಸಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಜತೆಗಿನ ಬಾಂಧವ್ಯಗಳಿಗೆ ಅಮೆರಿಕ ನೀಡುವ ಮಹತ್ವವನ್ನು ಟ್ರಂಪ್ ಅವರ ಉಪಸ್ಥಿತಿ ಸಾರುತ್ತದೆ ಎಂದು ಶ್ವೇತಭವನ ತಿಳಿಸಿದೆ.
ಟೆಕ್ಸಾಸ್ನಲ್ಲಿ ನಡೆಯುವ ‘ಹೌಡಿ, ಮೋದಿ’ ರ್ಯಾಲಿ ಪ್ರಧಾನಿ ಮೋದಿ ಅವರು ಅಮೆರಿಕದಲ್ಲಿ ನಡೆಸುತ್ತಿರುವ ಮೂರನೇ ಬೃಹತ್ ಸಾರ್ವಜನಿಕ ರ್ಯಾಲಿಯಾಗಿದೆ. 2014ರಲ್ಲಿ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ನಲ್ಲಿ ಹಾಗೂ 2017ರಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ಮೋದಿ ರ್ಯಾಲಿ ನಡೆಸಿದ್ದರು.
22ರಂದು ನಡೆಯುವ ಹೌಡಿ, ಮೋದಿ ರ್ಯಾಲಿಯನ್ನು 50,000 ಮಂದಿ ಕುಳಿತುಕೊಳ್ಳಬಹುದಾದ ಎನ್ಆರ್ಜಿ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರ ಸಂಘಟನೆ ಆಯೋಜಿಸಿದೆ. ಈ ನಗರದಲ್ಲಿ 1.50 ಲಕ್ಷಕ್ಕೂ ಅಧಿಕ ಮಂದಿ ಅನಿವಾಸಿ ಭಾರತೀಯರಿದ್ದಾರೆ. (ಏಜೆನ್ಸೀಸ್)