ದೇಶ-ವಿದೇಶ ಪ್ರಮುಖ

ಅಭಿನಂದನ್ ವರ್ಧಮಾನ್‌ಗೆ ಕೀರ್ತಿಚಕ್ರ ಪುರಸ್ಕಾರ

ಹೊಸದಿಲ್ಲಿ: ಭಾರತದ ವೀರಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ದೇಶದ ಮೂರನೆ ಅತಿದೊಡ್ಡ ಶೌರ್ಯ ಪ್ರಶಸ್ತಿ ‘ವೀರಚಕ್ರ’ ವನ್ನು ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರದಾನ ಮಾಡಲಾಗುವುದು.

ಬಾಲಾಕೋಟ್ ವೈಮಾನಿಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನಿ ವಾಯುಪಡೆಗಳ ನಡುವೆ ಫೆಬ್ರವರಿ 27ರಂದು ಆಗಸದಲ್ಲಿ ನಡೆದ ಘರ್ಷಣೆ ವೇಳೆ ಅಭಿನಂದನ್ ಅವರು ಪಾಕ್ ವಾಯುಪಡೆಯ ಎಫ್‌-16 ವಿಮಾನವನ್ನು ಹೊಡೆದುರುಳಿಸಿದ್ದರು. ಬಳಿಕ ಅವರು ಚಲಾಯಿಸುತ್ತಿದ್ದ ಮಿಗ್ ವಿಮಾನ ಪಾಕ್ ನೆಲದಲ್ಲಿ ಪತನಗೊಂಡಿತ್ತು. ಭಾರತದ ಮಿಲಿಟರಿ ಮತ್ತು ರಾಜತಾಂತ್ರಿಕ ಒತ್ತಡಗಳ ಪರಿಣಾಮವಾಗಿ ಪಾಕಿಸ್ತಾನ ಒಂದೇ ದಿನದಲ್ಲಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಮರಳಿಸಿತ್ತು.

ಸ್ಯಾಪರ್ (ಸೇನೆಯ ಸುರಂಗಕಾರ) ಪ್ರಕಾಶ್ ಜಾಧವ್ ಮತ್ತು ಸಿಆರ್‌ಪಿಎಫ್‌ ಉಪ ಕಮಾಂಡೆಂಟ್ ಹರ್ಷಪಾಲ್ ಸಿಂಗ್ ಅವರಿಗೆ ಕೀರ್ತಿ ಚಕ್ರಗಳನ್ನು ಪ್ರದಾನ ಮಾಡಲಾಗುವುದು. ಇತರ 14 ಮಂದಿಗೆ ಶೌರ್ಯ ಚಕ್ರಗಳನ್ನು ಪ್ರದಾನ ಮಾಡಲಾಗುವುದು. ಪ್ರಕಾಶ್ ಜಾಧವ್ ಅವರು 2018ರ ನವೆಂಬರ್‌ನಲ್ಲಿ ಕುಲ್ಗಾಂನಲ್ಲಿ ಉಗ್ರರ ಜತೆ ನಡೆದ ಎನ್‌ಕೌಂಟರ್‌ನಲ್ಲಿ ಬಲಿದಾನ ಮಾಡಿದ್ದರು.

 

ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರಗಳು ಎರಡು ಮತ್ತು ಮೂರನೆಯ ಅತ್ಯುನ್ನತ ಶೌರ್ಯ ಪುರಸ್ಕಾರಗಳಾಗಿವೆ. ಅಶೋಕ ಚಕ್ರ ಎಂಬುದು ಶಾಂತಿ ಕಾಲದಲ್ಲಿ ನೀಡುವ ಉನ್ನತ ಸೇನಾ ಪುರಸ್ಕಾರವಾಗಿದೆ. ವೀರಚಕ್ರ ಯುದ್ಧಕಾಲದ ಶೌರ್ಯ ಪ್ರದರ್ಶನಕ್ಕಾಗಿ ನೀಡುವ 3ನೇ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಪರಮವೀರ ಚಕ್ರ ಮತ್ತು ಮಹಾವೀರ ಚಕ್ರಗಳು ಎರಡು ಮತ್ತು ಮೊದಲನೆಯ ಅತ್ಯುನ್ನತ ಪ್ರಶಸ್ತಿಯಾಗಿವೆ.

ಭಾರತೀಯ ವಾಯುಪಡೆಎಯ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರಿಗೆ ಫೆಬ್ರವರಿ 27ರ ವೈಮಾನಿಕ ಸಂಘರ್ಷದ ವೇಳೆ ಫೈಟರ್ ಕಂಟ್ರೋಲರ್ ಆಗಿ ನಿರ್ವಹಿಸಿದ ಕರ್ತವ್ಯಕ್ಕಾಗಿ ಯುದ್ಧ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ.

ಫೆಬ್ರವರಿ 26ರಂದು ನಸುಕಿನ ಜಾವ ಪಾಕಿಸ್ತಾನದ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಯಶಸ್ವೀ ಬಾಂಬ್ ದಾಳಿ ನಡೆಸಿದ ಮಿರಾಜ್-2000 ಪೈಲಟ್‌ಗಳಿಗೆ ವಾಯುಸೇನಾ (ಶೌರ್ಯ) ಪದಕಗಳನ್ನು ನೀಡಿ ಗೌರವಿಸಲಾಗುವುದು.

Related posts

ನೀರುಪೋಲು ಮಾಡುವುದು ಸಾಮಾಜಿಕ ಅಪರಾಧ: ಶ್ರೀಪಡ್ರೆ

Upayuktha

ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಇನ್ನಿಲ್ಲ

Upayuktha

ಕೋಸ್ಟಲ್‌ವುಡ್‌: ತುಳುನಾಡಿನ ಸಂಸ್ಕೃತಿ ಬಿಂಬಿಸುವ ‘ಪಿಂಗಾರ’ ಶೀಘ್ರ ತೆರೆಗೆ

Upayuktha