ಅಪಘಾತ- ದುರಂತ ದೇಶ-ವಿದೇಶ ಪ್ರಮುಖ

ಪ್ರಿಯತಮನ ಜೊತೆ ಆಟೋ ರಿಕ್ಷಾದಲ್ಲಿ ಜಗಳ: ಸಾವಿನಲ್ಲಿ ಅಂತ್ಯ

ಹೊಸದಿಲ್ಲಿ: ಆಟೋ ರಿಕ್ಷಾದಲ್ಲಿ ತೆರಳುವಾಗ ಪ್ರಿಯತಮನ ಜೊತೆ ಜಗಳವಾಡಿಕೊಂಡ ಯುವತಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ರಾಷ್ಟ್ರೀಯ ಹೆದ್ದಾರಿ- 24ರ ಮೇಲ್ಸೇತುವೆ ಬಳಿ ನಡೆದಿದೆ.

ಪರಮ್​ಜೀತ್ ಕೌರ್​ (20) ಎಂದು ಮಹಿಳೆಯನ್ನು ಗುರುತಿಸಲಾಗಿದ್ದು, ಹೃತಿಕ್ ಎಂಬ ಆಕೆಯ ಪ್ರಿಯಕರನನ್ನು ಆಶ್ರಮ್ ಚೌಕ್ ಬಳಿಯಿರುವ ಪಾರ್ಕ್​ನಲ್ಲಿ ಭೇಟಿಯಾಗಿದ್ದಳು. ಆಟೋ ಹತ್ತುವ ವೇಳೆಯೂ ವಾಗ್ವಾದ ನಡೆಯುತ್ತಿದ್ದು, ಪರಂಜೀತ್ ಕೌರ್​ನ ಮಾಜಿ ಪ್ರಿಯಕರ ಸಿದ್ಧಾರ್ಥ್ ಕೂಡಾ ಸ್ಥಳಕ್ಕೆ ಆಗಮಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಹೃತಿಕ್ ಹಲವು ಬಾರಿ ಪರಮ್​ಜೀತ್ ಕೌರ್​ಳನ್ನು ಥಳಿಸಿದ್ದಾನೆ. ನಂತರ ಇಬ್ಬರೂ ಆಟೋದಲ್ಲಿಯೋ ಗಲಾಟೆ ನಡೆಸಿದ್ದು, ಆಟೋದಿಂದ ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಪಾಂಡವ್ ನಗರದ ಆಸ್ಪತ್ರೆಗೆ ದಾಖಲಿಸಿ, ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಗ್ನೇಯ ದೆಹಲಿಯ ಡಿಸಿಪಿ ಆರ್​.ಪಿ. ಮೀನಾ ತಿಳಿಸಿದ್ದಾರೆ.

Related posts

ಚೀನಾದಲ್ಲಿ ಡಿಜಿಟಲ್ ಕರೆನ್ಸಿ ಪ್ರಾಯೋಗಿಕ ಬಳಕೆ ಆರಂಭ: ಡಾಲರ್‌ ಪ್ರಾಬಲ್ಯ ತಡೆಗೆ ಡ್ರ್ಯಾಗನ್‌ ಸಜ್ಜು

Upayuktha

ಉಪ್ಪಳ ಹೆದ್ದಾರಿಯಲ್ಲಿ ಮಗುಚಿಬಿದ್ದ ಲಾರಿ; ಸಂಚಾರಕ್ಕೆ ಅಡ್ಡಿ

Upayuktha

ಮೌನಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು

Upayuktha