ದೇಶ-ವಿದೇಶ ಪ್ರಮುಖ

ರಾಮ ಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ವ್ರತದಲ್ಲಿರುವ ಈ ಅಜ್ಜಿ

 

ಜಬಲ್ಪುರ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಗೊಳ್ಳಬೇಕು ಎಂಬುದು ಕೋಟ್ಯಂತರ ಮಂದಿಯ ಮನದಾಸೆ. ಆದರೆ ಈ ಅಜ್ಜಿಗೆ ಅದು ಬಯಕೆಯಷ್ಟೇ ಅಲ್ಲ, ಅದೊಂದು ಸಂಕಲ್ಪ. ರಾಮಮಂದಿರದ ಸಂಕಲ್ಪ ಹೊತ್ತು ಬರೋಬ್ಬರಿ 28 ವರ್ಷಗಳಿಂದ ಇವರು ಉಪವಾಸ ವ್ರತ ಮಾಡುತ್ತಾ ಬಂದಿದ್ದಾರೆ.

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕಠಿಣ ವ್ರತ ನಿರತರಾಗಿರುವ ಈ ಅಜ್ಜಿ ಸುದ್ದಿಯ ಕೇಂದ್ರವಾಗಿದ್ದಾರೆ.

ಇವರು ಮಧ್ಯಪ್ರದೇಶದ ಜಬಲ್ಪುರದ ಊರ್ಮಿಳಾ ದೇವಿ, ಇವರಿಗೀಗ 82 ವರ್ಷದ ಇಳಿ ವಯಸ್ಸು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಬಳಿಕ ತಲೆದೋರಿದ ಹಿಂಸಾಚಾರದಿಂದ ಮನನೊಂದು ಉಪವಾಸ ವ್ರತಕ್ಕೆ ತೊಡಗಿದ್ದರು.

ಅಯೋಧ್ಯೆಯಲ್ಲಿ ಸಹಮತದಿಂದ ರಾಮನ ಮಂದಿರ ನಿರ್ಮಾಣವಾಗುವ ತನಕ ಆಹಾರ ಸೇವಿಸುವುದಿಲ್ಲ ಎಂದು ದೃಢ ಸಂಕಲ್ಪ ಮಾಡಿದ್ದರು. ಆಗ ಅವರ ವಯಸ್ಸು 54. ಆಗಿತ್ತು. ಅಂದಿನಿಂದ ಇಂದಿನ ತನಕ ಬರೀ ಹಣ್ಣುಗಳನ್ನಷ್ಟೇ ತಿನ್ನುತ್ತಾ ಬಂದಿದ್ದಾರೆ, ಜತೆಗೆ ರಾಮ.. ರಾಮ.. ಎನ್ನುತ್ತಾ ನಾಮಸ್ಮರಣೆ ಮಾಡುತ್ತಾ ಬಂದಿದ್ದಾರೆ.

ರಾಮನ ದರ್ಶನವಾದ ಬಳಿಕವಷ್ಟೇ ಉಪವಾಸ ಅಂತ್ಯ:

ಅಯೋಧ್ಯೆಯಲ್ಲಿ ನಡೆಯುವ ವೈಭವದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತಾವೂ ಭಾಗಿಯಾಗಬೇಕೆಂಬ ಅವರ ಉತ್ಕಟಗೆ ಕೊರೋನಾ ತಣ್ಣೀರು ಎರಚಿದೆ. ಭೂಮಿ ಪೂಜೆಯ ದಿನದಂದು ರಾಮಸ್ಮರಣೆ ಮಾಡುತ್ತಾ ಇಲ್ಲಿಂದಲೇ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ ಈ ತಪಸ್ವಿ ಊರ್ಮಿಳಾ ದೇವಿ.

ಶಿಲಾನ್ಯಾಸ ನೆರವೇರುತ್ತಿದೆಯಲ್ಲಾ, ಇನ್ನಾದರೂ ಉಪವಾಸ ನಿಲ್ಲಿಸುತ್ತೀರಾ ಎಂದು ಕೇಳಿದರೆ, ಇಲ್ಲ, ಸರಯೂ ನದಿ ತೀರದಲ್ಲಿ ಶ್ರೀರಾಮನ ದರ್ಶನ ಪಡೆದ ಬಳಿಕವಷ್ಟೇ ಈ ಉಪವಾಸ ವ್ರತವನ್ನು ಕೊನೆಗೊಳಿಸುತ್ತೇನೆ ಎನ್ನುತ್ತಾರೆ.
ವರ್ಷ ಕಳೆದಂತೆ ಅವರ ದೇಹಾರೋಗ್ಯವೂ ಕ್ಷೀಣಿಸುತ್ತಿದ್ದು, ಉಪವಾಸ ವ್ರತ ಕೊನೆಗೊಳ್ಳುವ ದಿನ ಸಮೀಪಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಮಕ್ಕಳು ಅಜ್ಜಿಯೊಂದಿಗೆ ಉಣ್ಣಲು ಕಾಯುತ್ತಿದ್ದಾರೆ ಎನ್ನುತ್ತಾರೆ ಊರ್ಮಿಳಾ ದೇವಿಯವರ ಸೊಸೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ ಟ್ವೀಟ್‌ ಮಾಡಿ, ರಾಮಮಂದಿರದ ಹಿಂದೆ ಊರ್ಮಿಳಾ ದೇವಿಯಂತಹ ಜನರ ವ್ರತವಿದೆ ಎಂದು ಉಲ್ಲೇಖಿಸಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ದ.ಕ., ಕಾಸರಗೋಡು ಜಿಲ್ಲೆಯಲ್ಲಿ ಎರಡು, ಉಡುಪಿಯಲ್ಲಿ ಒಂದು ಕೊರೊನಾ ಪಾಸಿಟಿವ್

Upayuktha

2005ಕ್ಕಿಂತ ಮೊದಲು ಜನಿಸಿದ ಮಗಳಿಗೂ ಸಮಪಾಲು: ಸುಪ್ರೀಂ ಮಹತ್ವದ ತೀರ್ಪು

Upayuktha News Network

ಪುತ್ತೂರು, ಕಾರ್ಕಳ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆ

Upayuktha

Leave a Comment

error: Copying Content is Prohibited !!