ನಗರ ಸ್ಥಳೀಯ

ಮಹಿಳೆಯ ಅನಾಗರಿಕ ಬದುಕಿಗೆ ಮುಕ್ತಿ ದೊರಕಿಸಿದ ಸಮಾಜಸೇವಕ ವಿಶು ಶೆಟ್ಟಿ; ನೆರವಿಗೆ ಬಂದ ನಿವೃತ್ತ ಬ್ಯಾಂಕ್ ಉದ್ಯೋಗಿ

ಉಡುಪಿ: ಮಾನಸಿಕ ವ್ಯಾಧಿಯಿಂದ ಗುಣಮುಖರಾಗಿರುವ ಅಪರಿಚಿತ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು, ಉಡುಪಿ ಜಿಲ್ಲೆಯಲ್ಲಿ ಪುರ್ನವಸತಿ ಕೇಂದ್ರದ ವ್ಯವಸ್ಥೆ ಇಲ್ಲದ ಕಾರಣದಿಂದ ಶಿವಮೊಗ್ಗ ಜಿಲ್ಲೆಯ ರಾಜ್ಯ ಮಹಿಳಾ ನಿಲಯದಲ್ಲಿ ಪುರ್ನವಸತಿ ಕಲ್ಪಿಸಿ, ಮಾನವಿಯತೆ ಮೆರೆದಿದ್ದಾರೆ. ಅಪರಿಚಿತ ಮಹಿಳೆ ತಮಿಳುನಾಡು ರಾಜ್ಯದ ಮೂಲದವರೆಂದು ಶಂಕಿಸಲಾಗಿದೆ.

ಮಾನಸಿಕ ವ್ಯಾಧಿಗೆ ತುತ್ತಾಗಿ ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ, ಅಪರಿಚಿತ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಅವರು, ಕಳೆದ ಡಿ.27 ರಂದು ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಸಹಕಾರದಿಂದ ರಕ್ಷಿಸಿದ್ದರು. ನಂತರ ವಿಶು ಶೆಟ್ಟಿ ಅವರು ಮಹಿಳೆಯನ್ನು ದೊಡ್ಡಣಗುಡ್ಡೆಯ ಡಾ. ಎ.ವಿ.ಬಾಳಿಗ ಆಸ್ಪತ್ರೆಯಲ್ಲಿ 35 ದಿನಗಳ ಕಾಲ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಸಂಬಂಧಿಕರ ಪತ್ತೆಗೊಳಿಸಲು ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿದ್ದರು.

ಮಹಿಳೆಯ ಸಂಬಂಧಿಕರು ಪತ್ತೆಯಾಗದೆ ಇರುವುದರಿಂದ, ವಿಶು ಶೆಟ್ಟಿ ಅವರು, ಸಹಜ ಸ್ಥಿತಿಗೆ ಬಂದಿರುವ ಮಹಿಳೆಯನ್ನು ಜ.31ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ. ಕೊರೊನಾ ತಪಸಾಣೆಗೆ ಒಳಪಡಿಸಿ, ಶಿವಮೊಗ್ಗದ ರಾಜ್ಯ ಮಹಿಳಾ ನಿಲಯದಲ್ಲಿ ಪುನರ್ವಸತಿ ಕಲ್ಪಿಸಿದ್ದಾರೆ. ವಿಶು ಶೆಟ್ಟಿ ಅವರ ಮಾನವಿಯತೆಯ ಸೇವಾಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮಹಿಳೆಯ ಚಿಕಿತ್ಸೆಗೆ ಹಾಗೂ ಇತರ ಖರ್ಚು ಒಟ್ಟು 45 ಸಾವಿರ ರೂಪಾಯಿ ತಗುಲಿದೆ. ಪತ್ರಿಕೆಯಲ್ಲಿ ಬಂದಿರುವ ಘಟನೆಯ ವರದಿ ಕಂಡು, ನಿವೃತ್ತ ಬ್ಯಾಂಕ್ ಉದ್ಯೋಗಿ ಜಗದೀಶ್ ನಾಯಕ್ ಅವರು 25 ಸಾವಿರ ರೂಪಾಯಿ ನೀಡಿ ಮಹಿಳೆಯ ಚಿಕಿತ್ಸೆಗೆ ನೆರವಾಗಿದ್ದಾರೆ. ಉಳಿದ 20 ಸಾವಿರ ಖರ್ಚನ್ನು ವಿಶು ಶೆಟ್ಟಿ ಅವರು ಭರಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ, ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಶ್ರೀಮತಿ ರತ್ನ ಅವರು ಕಾನೂನು ಪ್ರಕ್ರಿಯೆಯಲ್ಲಿ ನೆರವಾಗಿದ್ದಾರೆ. ಪೋಲಿಸ್ ಸಿಬ್ಬಂದಿ ಪವಿತ್ರ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಗಣೇಶ್ ನಾಯ್ಕ್ ಕೊಕ್ಕರ್ಣೆ, ಶುಶ್ರೂಷಕಿ ತನುಜಾ, ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಅವರು ಸಹಕರಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಫೆ.23ರಂದು ಸಪ್ತಪದಿ-ಸಾಮೂಹಿಕ ವಿವಾಹ ಕುರಿತು ವಿಚಾರ ಸಂಕಿರಣ

Upayuktha

ಬೆಳ್ತಂಗಡಿ: ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಶಿಬಿರ

Upayuktha

ಸಂಜೆಯ ಅಪ್‌ಡೇಟ್: ದ.ಕ., ಉಡುಪಿ ಕೊರೊನಾ ಪಾಸಿಟಿವ್ ಇಲ್ಲ, ಕಾಸರಗೋಡಿನಲ್ಲಿ ಒಂದು ಪಾಸಿಟಿವ್

Upayuktha