ನಗರ ಸ್ಥಳೀಯ

ಕೆನರಾ ಬ್ಯಾಂಕ್‍ನಲ್ಲಿ ಮಹಿಳಾ ದಿನಾಚರಣೆ


ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕೆನರಾ ಬ್ಯಾಂಕ್‍ನ ಮಂಗಳೂರು ವಲಯ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಸ್ಕೂಲ್ ಆಫ್ ರೋಶನಿ ನಿಲಯದ ಪ್ರೊ. ಹಿಲ್ಡಾ ರಾಯಪ್ಪನ್ ಮಾತನಾಡುತ್ತಾ, ಮಹಿಳೆಯು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಪಧಾನ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ಆಕೆಯ ಪಾತ್ರ ಅಮೂಲ್ಯವಾದುದು. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿರುವುದರಿಂದ ಮಹಿಳೆಯ ಗೌರವ ಹೆಚ್ಚು ಸಿಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದರು.

ಮಹಿಳಾ ಮತ್ತು ಪ್ರಸೂತಿ ತಜ್ಞೆ ಡಾ. ನಿನಾ ಮಹಾಲೆ ಅವರು ಮಹಿಳೆ ಮತ್ತು ಕ್ಯಾನ್ಸರ್ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದುದರಿಂದ ಸಣ್ಣ ಪ್ರಮಾಣದ ಸಂಶಯ ಬಂದ ತಕ್ಷಣ ತಪಾಸಣೆ ನಡೆಸಬೇಕು. ಯಾವುದೇ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಸುಲಭವಾಗಿ ಗುಣಪಡಿಸಬಹುದಾಗಿದೆ ಎಂದರು.

ಕೆನರಾ ವಿದ್ಯಾ ಜ್ಯೋತಿ ಎಂಬ ಯೋಜನೆಯಡಿ ಸ್ಕಾಲರ್‌ ಶಿಪ್ ಹಾಗೂ ಶಾಲಾ ಬ್ಯಾಗ್‍ಗಳನ್ನು ವಿದ್ಯಾರ್ಥಿಯರಿಗೆ ಬ್ಯಾಂಕ್‍ನ ಮಹಾ ಪ್ರಬಂಧಕರಾದ ಯೋಗೀಶ ಬಿ. ಆಚಾರ್ಯ ಅವರು ವಿತರಿಸಿದರು. ಸಮಾರಂಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳನ್ನು ಅಭಿನಂದಿಸಲಾಯಿತು. ಸಹಾಯಕ ಮಹಾಪ್ರಬಂಧಕಿ ಲೈನೆಟ್ಟೆ ಎಸ್.ಎಲ್. ಪಿಂಟೋ ಸ್ವಾಗತಿಸಿದರು. ಸೌಮ್ಯ ವಂದಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಭಾರೀ ಬಿರುಗಾಳಿ: ಸುಬ್ರಹ್ಮಣ್ಯ ಸಮೀಪ ಮರ ಬಿದ್ದು ಕಾರು, ದ್ವಿಚಕ್ರ ವಾಹನಗಳು ಜಖಂ

Upayuktha

ಕೋವಿಡ್ 19 ಅಪ್ಡೇಟ್ಸ್: ರಾಜ್ಯದಲ್ಲಿ 5 ಕೊರೊನಾ ಪ್ರಕರಣ ಪತ್ತೆ

Upayuktha

ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Upayuktha