ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

ಹೆಣ್ಣಿನ ಸಮಸ್ಯೆಗಳನ್ನು ಕಾನೂನು ರೀತಿಯಲ್ಲಿ ಬಗೆಹರಿಸಬೇಕು: ರೇಶ್ಮಾ

ಪುತ್ತೂರು: ಅಭಿವೃದ್ಧಿ ಹೊಂದಿದ ದೇಶ, ಹೊಂದುತ್ತಿರುವ ದೇಶ, ಹೊಂದದ ದೇಶ ಮತ್ತು ಪ್ರಪಂಚದಲ್ಲಿ ಎಲ್ಲಿಯೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನತೆ ಇಲ್ಲ. ಸ್ತ್ರೀಯರಿಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಕಾನೂನಿನ ರೀತಿಯಲ್ಲಿ ಬಗೆಹರಿಸುವಲ್ಲಿ ಹಿಂದೇಟು ಹಾಕುತ್ತಾರೆ. ಎಲ್ಲವನ್ನೂ ಮೌನವಾಗಿ ಮುಚ್ಚಿಡಲು ಪ್ರಯತ್ನ ಮಾಡುತ್ತಾರೆ. ಮಹಿಳೆಯರ ಸಮಸ್ಯೆಗಳನ್ನು ನ್ಯಾಯುತವಾಗಿ ಬಗೆಹರಿಸಬೇಕಾಗಿದೆ ಎಂದು ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ರೇಶ್ಮಾ ಜಿ. ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಮಹಿಳಾ ಘಟಕ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.

ನಮ್ಮ ಜೀವನ ನಮ್ಮ ಕೈಯಲ್ಲಿದೆ. ಅದನ್ನು ನಾವೇ ಸರಿಪಡಿಸಬೇಕು. ಇನ್ನೊಬ್ಬರು ಬಂದು ಸರಿ ಮಾಡುತ್ತಾರೆ ಎನ್ನುವ ನಿರೀಕ್ಷೆ ಬೇಡ. ನಾವು ಏನು ಎಂದು ಪ್ರಪಂಚಕ್ಕೆ ತೋರಿಸಬೇಕಾದ ಅಗತ್ಯ ಇದೆ, ಹೆಣ್ಣಿನ ತ್ಯಾಗವನ್ನು ಯಾರೂ ಹೇಳುವುದಿಲ್ಲ, ನಮ್ಮ ಹೆಜ್ಜೆ ಪ್ರಪಂಚವೇ ನಮ್ಮತ್ತ ನೋಡುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ. ಹೆಣ್ಣು ಒಂದು ಮಗುವಿಗೆ ಜನ್ಮ ನೀಡುವುದರ ಮೂಲಕ ಮರುಜನ್ಮವನ್ನು ಪಡೆಯುತ್ತಾಳೆ. ಅವಳು ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಪತ್ನಿಯಾಗಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಸಮಾಜದಲ್ಲಿ ನಡೆಯುವ ತಪ್ಪುಗಳ ಮೂಲವನ್ನು ಅರಿತು ನಾವೇ ಅದನ್ನು ಸರಿಪಡಿಸಬೇಕಾಗಿದೆ ಎಂದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ರೇಖಾ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಆತ್ಮಕಲ್ಯಾಣದಿಂದ ಲೋಕ ಕಲ್ಯಾಣ: ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು

Upayuktha

ಸುನಿಲ್ ಕಾಮತ್ ಅವರಿಗೆ ಡಾಕ್ಟರೇಟ್

Upayuktha

ಬಯ್ಯಮಲ್ಲಿಗೆ ಪತ್ರಿಕೆ ಮಾಲೀಕ, ಸಂಪಾದಕರಾಗಿದ್ದ ಮೋನಪ್ಪ ಪಾಟಾಳಿ ಇನ್ನಿಲ್ಲ

Upayuktha News Network