ನಗರ ಪ್ರಮುಖ ಸ್ಥಳೀಯ

‘ಸಬೂಬು ನೀಡಿ ತಪ್ಪಿಸಲು ಅಸಾಧ್ಯ, ಕೆಲಸ ಮಾಡಿ ಜನರ ಮನಗೆಲ್ಲುವುದೊಂದೇ ಆಯ್ಕೆ’

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೂತನ ಬಿಜೆಪಿ ಕಾರ್ಪೊರೇಟರ್‌ಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ ಖಡಕ್ ಸಂದೇಶ

ಮಂಗಳೂರು: ‘ಭ್ರಷ್ಟಾಚಾರ ಮುಕ್ತ ಆಡಳಿತ ಬಿಜೆಪಿಯ ಗುರಿಯಾಗಿದೆ. ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಮತದಾರರು ನಮಗೆ ಮತ ನೀಡಿದ್ದಾರೆ. ಅವರ ನಿರೀಕ್ಷೆಗಳನ್ನು ಆದ್ಯತೆಯ ಮೇರೆಗೆ ನೆರವೇರಿಸಿಕೊಂಡು ಹೋಗಬೇಕು. ಕೇಂದ್ರ , ರಾಜ್ಯ ಇದೀಗ ಪಾಲಿಕೆಯಲ್ಲೂ ನಮ್ಮದೇ ಆಡಳಿತ ಬಂದಿದೆ. ಸಬೂಬು ನೀಡಿ ತಪ್ಪಿಸಲು ಅಸಾಧ್ಯ. ಕೆಲಸ ಮಾಡಿ ಜನರ ಮನಗೆಲ್ಲುವುದೊಂದೇ ಆಯ್ಕೆ’ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಬಿಜೆಪಿಯಿಂದ ಆಯ್ಕೆಯಾದ ನೂತನ ಕಾರ್ಪೊರೇಟರ್‌ಗಳಿಗೆ ಶಾಸಕರು ಕಿವಿಮಾತು ಹೇಳಿದರು.

ಕೋಡಿಕಲ್ ನಲ್ಲಿ ಶುಕ್ರವಾರ ನಡೆದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮನಪಾ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ, ‘ನಾನೊಬ್ಬ ಕಾರ್ಪೊರೇಟರ್ ಎಂದು ಅಹಂಕಾರದಿಂದ ಮರೆಯದಿರಿ. ಮತದಾರನಿಗೆ ಆಯ್ಕೆ ಮಾಡುವುದು ಗೊತ್ತು, ಮುಂದಿನ ಬಾರಿ ಬೀಳಿಸುವುದು ಗೊತ್ತು ಎಂದು ಎಚ್ಚರಿಕೆ ನೀಡಿದ್ದು, ಪ್ರಾಮಾಣಿಕವಾಗಿ ಜನರ ಸೇವೆ ಮಾಡಲು ಮುಂದಾಗಬೇಕು’ ಎಂದು ಸದಸ್ಯರಿಗೆ ಕಠಿಣ ಶಬ್ದಗಳಿಂದ ಎಚ್ಚರಿಕೆಯನ್ನೂ ನೀಡಿದರು.

ಪ್ರಥಮವಾಗಿ ಆಗಬೇಕಾದ ಕೆಲಸಗಳ ಪಟ್ಟಿಮಾಡಿ ಬರೆದಿಟ್ಟುಕೊಳ್ಳಿ. ಕಾರ್ಯಕರ್ತರು, ಕುಟುಂಬದ ಸದಸ್ಯರು ನಿಮಗೆ ಬೆನ್ನೆಲುಬಾಗಿ ಇರಬೇಕು. ಆದರೆ ಮಹಾನಗರಪಾಲಿಕೆಯಲ್ಲಿ ಸಿಗುವ ಪ್ರತಿಯೊಂದು ಸೌಲಭ್ಯ, ಅನುದಾನದ ಬಗ್ಗೆ ನೀವೇ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಸ್ವತಂತ್ರವಾಗಿ ಕೆಲಸ ಮಾಡುವುದನ್ನು ಕಲಿತುಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

ಇದರ ನಡುವೆ ವಶೀಲಿಬಾಜಿಗಾಗಿ ಸೇರಿಕೊಳ್ಳುವ ಜನರ ಮಾತುಗಳನ್ನು ಪರಾಮರ್ಶಿಸಿ ಮುಂದಿನ ಹೆಜ್ಜೆಯನ್ನು ಇಡಿ. ಇಲ್ಲವಾದಲ್ಲಿ ನಿಮ್ಮ ಸೇವೆಗೆ ಅವರೇ ಕಂಟಕವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಶಾಸಕ ಡಾ. ಭರತ್ ಶೆಟ್ಟಿ ಅವರ ಎಚ್ಚರಿಕೆಯ ಸಂದೇಶದ ಮಾತುಗಳು ನೆರೆದಿದ್ದ ಕಾರ್ಯಕರ್ತರು, ಸಾರ್ವಜನಿಕರಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿ, ಸಭೆ ಉದ್ದಕ್ಕೂ ಕರತಾಡನ ಕೇಳಿಬಂತು.

ದೇರೆಬೈಲ್ ಪೂರ್ವ ವಾರ್ಡಿನ ಮನೋಜ್ ಕುಮಾರ್, ಬಂಗ್ರಕೂಳೂರು 16ನೇ ವಾರ್ಡಿನ ಕಿರಣ್ ಕುಮಾರ್, ಸೇರಿದಂತೆ ಇತರ ಬಿಜೆಪಿ ಸದಸ್ಯರನ್ನು, ಬಿಜೆಪಿಯ ಗೆಲುವಿಗೆ ದುಡಿದ ವಾರ್ಡ್ ಅಧ್ಯಕ್ಷರು ಪದಾಧಿಕಾರಿಗಳನ್ನು, ಮಂಗಳೂರು ಉತ್ತರ ಬಿಜೆಪಿ ಮಂಡಲದ ಪದಾಧಿಕಾರಿಗಳನ್ನು, ಹಿರಿಯ ಬಿಜೆಪಿ ಮುತ್ಸದ್ದಿಗಳನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಪಾಲಿಕೆ ಸದಸ್ಯ ಮನೋಜ್ ಕುಮಾರ್ ಸ್ವಾಗತಿಸಿದರು. ಕಿರಣ್ ಕುಮಾರ್ ಕೋಡಿಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

(ಉಪಯುಕ್ತ ನ್ಯೂಸ್ ಸುದ್ದಿಜಾಲ)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಉಡುಪಿ: ಯೂನಿಯನ್ ಬ್ಯಾಂಕ್‌ ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ: ಕಂಪ್ಯೂಟರ್‌, ಕಡತಗಳಿಗೆ ಹಾನಿ

Upayuktha

ರಾಮಾಯಣ ಪರೀಕ್ಷೆ: ಶಿವಾನಿ ಭಟ್ ಕುಂಬಳೆ ಪ್ರಥಮ

Upayuktha

ಕೇರಳ ಕಂದಾಯ ಸಚಿವರ ಕಾಸರಗೋಡು ಜಿಲ್ಲಾ ಪ್ರವಾಸ

Upayuktha