ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಮೂಡುಬಿದಿರೆ: ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ: ಅಸಾಮಾನ್ಯ ವ್ಯಕ್ತಿತ್ವದವರ ಯೋಚನಾ ಲಹರಿ ಸದಾ ಸುಂದರ ನಾಳೆಗಳ ನಿರ್ಮಾಣದಲ್ಲಿ ತೊಡಗಿರುತ್ತದೆ ಎಂದು ನ್ಯಾಷನಲ್ ಐ.ಎ.ಸ್ ಅಕಾಡೆಮಿಯ ನಿರ್ದೇಶಕರಾದ ಸುನೀಲ ತಿಳಿಸಿದರು.

ಅವರು ಆಳ್ವಾಸ್‌ ಕಾಲೇಜಿನ ಯುಪಿಎಸ್‌ಸಿ ತರಬೇತಿ ಕೇಂದ್ರದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನಮ್ಮೆಲ್ಲರಲ್ಲಿ ವಿಭಿನ್ನವಾದ ಸಾಮರ್ಥ್ಯವಿದ್ದು, ಅದಕ್ಕೆ ಪೂರಕವಾದ ಮಾರ್ಗದರ್ಶನ ಹಾಗೂ ತರಬೇತಿಯ ಕೊರತೆಯಿದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಉತ್ತಮ ಅಂಕಗಳಿಸಿದರೆ ಸಾಲದು, ಅದರೊಂದಿಗೆ ಎಲ್ಲ ತರಹದ ಕೌಶಲ್ಯಗಳು ಹೊಂದಿರಬೇಕು. ನಮ್ಮ ವ್ಯಕ್ತಿತ್ವ ವೃದ್ದಿಸಬೇಕಾದರೆ ಸಂವಹನ ಮತ್ತು ವಿಚಾರ ಶಕ್ತಿ ವಿಭಿನ್ನವಾಗಿರಬೇಕು.

ವಿದ್ಯಾರ್ಥಿಗಳು ಸರಕಾರಿ ನೌಕರಿಗಳ ಬಗ್ಗೆ ಮಾಹಿತಿ ಪಡೆದು ವಿದ್ಯಾರ್ಥಿ ದೆಸೆಯಲ್ಲಿಯೆ ತಯಾರಿ ನಡೆಸಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದರು. ಆಳ್ವಾಸ ಕಾಲೇಜಿನ ಯುಪಿಎಸ್‌ಸಿ ತರಬೇತಿ ಕೇಂದ್ರ ಮುಂದಿನ ದಿನಗಳಲ್ಲಿ ನ್ಯಾಷನಲ್ ಐ.ಎ.ಸ್ ಅಕಾಡೆಮಿಯ ಸಹಯೋಗದೊಂದಿಗೆ ಗುಣಾತ್ಮಕ ತರಬೇತಿಯನ್ನು ನೀಡಲು ನಿರ್ಧರಿಸಿದೆ.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ‍್ಯ ಡಾ. ಕುರಿಯನ್ ವಹಿಸಿದ್ದರು. ಆಳ್ವಾಸ್‌ ಕಾಲೇಜಿನ ಯುಪಿಎಸ್‌ಸಿ ತರಬೇತಿ ಕೇಂದ್ರ ಸಂಯೋಜಕ ಡಾ. ಅಶೋಕ, ಉಪನ್ಯಾಸಕರಾದ ಧನಂಜಯ ಆಚಾರ‍್ಯ ಉಪಸ್ಥಿತರಿದ್ದರು. ತೃತೀಯ ಬಿ.ಎ ವಿದ್ಯಾರ್ಥಿ ಜಾಸ್ವಿನ್ ಕಾರ‍್ಯಕ್ರಮ ನಿರ್ವಹಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಲ್ಲಡ್ಕ: ‘ಸರ್ವಜ್ಞ ಅಕಾಡೆಮಿ’ ಇ- ಲರ್ನಿಂಗ್ ಪ್ಲಾಟ್‌ಫಾರ್ಮ್‌ ಉದ್ಘಾಟನೆ

Upayuktha

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಆದೇಶಕ್ಕೆ ತಾತ್ಕಾಲಿಕ ವಿನಾಯಿತಿ

Upayuktha

ಕನ್ನಡ ವೈಷ್ಣವ ಜನತೋ: ಒಳಿತಿನ ಪರವಾದ ಕಾವ್ಯಗೀತ ಯಾನ

Upayuktha