ಶಿಕ್ಷಣ- ಉದ್ಯೋಗ ಸ್ಥಳೀಯ

ʼಶ್ಲಾಘ್ಯʼದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮಾಹಿತಿ ಕಾರ್ಯಾಗಾರ

ಮಂಗಳೂರು: ಬ್ಯಾಂಕ್ ಪರೀಕ್ಷೆ (ಐಬಿಪಿಎಸ್, ಎಸ್‍ಬಿಐ, ಆರ್‍ಬಿಐ ಗ್ರೇಡ್ ಬಿ), ಎಲ್ ಐಸಿ ಎಎಓ, ಎಸ್‍ಎಸ್‍ಸಿ-ಸಿಜಿಎಲ್ ಸೇರಿದಂತೆ ನಾನಾ ಬಗೆಯ ಸ್ಪ್ರಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರವನ್ನು ನವೆಂಬರ್ 1ರಂದು ನಗರದ ಕೋಡಿಯಾಲ್‍ಬೈಲ್‍ನ ಜೈಲ್ ರಸ್ತೆಯಲ್ಲಿರುವ ದಿವ್ಯ ಎನ್‍ಕ್ಲೇವ್‍ನ ಪ್ರಥಮ ಮಹಡಿಯಲ್ಲಿರುವ ಶ್ಲಾಘ್ಯ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ಆಯೋಜಿಸಿದೆ.

ಕಾರ್ಯಾಗಾರದಲ್ಲಿ ಯುಪಿಎಸ್‍ಸಿ, ಎಂಬಿಎ ಪ್ರವೇಶ ಪರೀಕ್ಷೆ, ನಾನಾ ಬ್ಯಾಂಕಿಂಗ್ ಪರೀಕ್ಷೆ, ಎಲ್‍ಐಸಿ ಪ್ರವೇಶ ಪರೀಕ್ಷೆ, ಇಂಟೆಲಿಜೆನ್ಸಿ ಬ್ಯೂರೋ, ಕ್ಯಾಂಪಸ್ ಸೆಲೆಕ್ಷನ್‍ಗೆ ನುರಿತ ತಜ್ಞರು ಮಾಹಿತಿ ನೀಡಲಿದ್ದಾರೆ. ಶಿಬಿರವು ಸಂಪೂರ್ಣ ಉಚಿತವಾಗಿದ್ದು, ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ನಡೆಯಲಿದೆ. ಆಯಾ ಕ್ಷೇತ್ರದಲ್ಲಿ ತರಬೇತಿ ನೀಡಿ ಅನುಭವ ಇರುವ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ವ್ಯಾಟ್ಸಪ್ ಸಂಖ್ಯೆ 7349327494 ನಲ್ಲಿ ಅಥವಾ ಈ ಮೈಲ್ ವಿಳಾಸ ಹೆಸರು shlaghya.mangaluru@gmail.com ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ವಿದ್ಯಾರ್ಥಿಗಳ ಆಸಕ್ತಿ ಹಾಗೂ ಅವರ ಸಾಮರ್ಥ್ಯವನ್ನು ಅರ್ಥೈಸಿಕೊಂಡು ಅವರಿಗೆ ಪೂರಕವಾಗಿ ತರಬೇತಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಬಿರದ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ನುರಿತ ಹಿರಿಯ ಅಧ್ಯಾಪಕರು ಸಂದೇಹಗಳನ್ನು ನಿವಾರಿಸುವಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಂಪೂರ್ಣ ತುಲನೆ ಮಾಡಿ ಅದಕ್ಕೆ ಅನುಗುಣವಾಗಿ ಶಿಬಿರವನ್ನು ನಡೆಸಿಕೊಡಲಾಗುತ್ತದೆ. ಪ್ರಶ್ನೆ ಪತ್ರಿಕೆ ಹೇಗಿರುತ್ತದೆ? ಯಾವ ಪ್ರಶ್ನೆಗೆ, ಎಷ್ಟು, ಹೇಗೆ ಉತ್ತರವನ್ನು ಯಾವ ರೀತಿ ಪ್ರಸ್ತುತ ಪಡಿಸಬೇಕು? ಪರೀಕ್ಷೆಗಳಿಗೆ ಬರುವ ಸಂಭಾವ್ಯ ಪ್ರಶ್ನೆಗಳು ಯಾವುದು? ಅವುಗಳಿಗೆ ಉತ್ತರ ಎಲ್ಲಿರುತ್ತದೆ? ಹೀಗೆ ಹಲವು ರೀತಿಯ ಗೊಂದಲ, ಸಮಸ್ಯೆ, ಪ್ರಶ್ನೆಗಳಿಗೆ ಉತ್ತರವಾಗಿ ಶಿಬಿರ ಉಪಯುಕ್ತವಾಗಲಿದೆ.

ಶ್ಲಾಘ್ಯ ಸಂಸ್ಥೆಯಲ್ಲಿ ರೆಗ್ಯುಲರ್ ಆಗಿ ಬೆಳಗ್ಗೆ 7ರಿಂದ 8:30, 10ರಿಂದ 12 ಗಂಟೆ, ಅಪರಾಹ್ನ 2ರಿಂದ 4 ಮತ್ತು 4:30ರಿಂದ 6 ಹಾಗೂ 6:30ರಿಂದ ರಾತ್ರಿ 8 ಗಂಟೆ ವರೆಗೆ ಐದು ಬ್ಯಾಚ್‍ಗಳಲ್ಲಿ ನಾನಾ ಕೋರ್ಸ್‌ಗಳಿಗೆ ತರಬೇತಿ ನೀಡಲಾಗುತ್ತದೆ.

Related posts

ಅನುಭವಗಳೇ ಜೀವನದ ಪಾಠಗಳು: ಸ್ವರ್ಣಲಕ್ಷ್ಮೀ

Upayuktha

ಜೀವನದಲ್ಲಿ ಧನಾತ್ಮಕ ಯೋಚನೆಗಳಿದ್ದರೆ ಯಶಸ್ಸು ಕಾಣಲು ಸಾಧ್ಯ: ಪ್ರೊ. ಸೀಮಾ ಪ್ರಭು

Upayuktha

ದಿಲ್ಲಿಯಲ್ಲಿ ಆರೋಗ್ಯ ಸಚಿವರನ್ನು ಭೇಟಿಯಾದ ಶಾಸಕ ಡಾ. ಭರತ್‌ ಶೆಟ್ಟಿ

Upayuktha