ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಪುಂಜಾಲಕಟ್ಟೆ: ಸ.ಪ್ರ.ದ ಕಾಲೇಜಿನಲ್ಲಿ ಜೀವನ ಕೌಶಲ ಕಾರ್ಯಾಗಾರ

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು 2ರ ವತಿಯಿಂದ ಪ್ರಥಮ ವರ್ಷದ ಬಿಬಿಎಂ ಹಾಗೂ ಬಿಎ ವಿದ್ಯಾರ್ಥಿಗಳಿಗೆ ಜೀವನ ಕೌಶಲ ಕಾರ್ಯಾಗಾರವನ್ನು ಗುರುವಾರ (ಮಾ.4) ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ಪ್ರೊ ಗಣಪತಿ ಭಟ್ ಕುಳಮರ್ವ ಇವರು ವಹಿಸಿದ್ದರು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಕಾಂತ್ ಪೂಜಾರಿ ಬಿರಾವು ಹಾಗೂ ಶ್ರೀ ಶಾಂತಪ್ಪ ಇವರು ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ ಐಸಿಎಕ್ಯೂ ಸಂಚಾಲಕರಾದ ಪ್ರೊ ರವಿಶಂಕರ್ ಬಿ, ಪ್ರೊ ವಿಶಾಲ್ ಪಿಂಟೋ, ಪ್ರೊ ದೀಕ್ಷಿತ ವರ್ಕಾಡಿ ಹಾಗೂ ಪ್ರೊ ಪ್ರೀತಿ ಕೆ ರಾವ್ ಇವರು ಉಪಸ್ಥಿತರಿದ್ದರು. ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರೊ ರಾಜೇಶ್ವರಿ ಎಚ್ ಎಸ್ ಹಾಗೂ ಪ್ರೊ ಸಂತೋಷ್ ಪ್ರಭು ಎಂ ಇವರು ಉಪಸ್ಥಿತರಿದ್ದರು.

ವಿದ್ಯಾ ಅವರು ಕಾರ್ಯಕ್ರಮ ನಿರೂಪಿಸಿದರು. ಮಧುರ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಚೈತ್ರ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಪ್ರಥಮ ಬಿಎ ಹಾಗೂ ಬಿಬಿಎ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಅಮೃತ ಸಾಹಿತ್ಯ ವೇದಿಕೆ ಲಾಂಛನ ಬಿಡುಗಡೆ ಫೆ.28ಕ್ಕೆ

Upayuktha

ಮಂಗಳೂರು ನಗರದಲ್ಲಿ ನಾಳೆ ಕಸ ಒಯ್ಯುವವರು ಬರಲ್ಲ; ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ

Upayuktha

‘ಉಜಿರೆ: ವನರಂಗ’ದಲ್ಲಿ ಕಲಾತ್ಮಕ ವೈವಿಧ್ಯತೆಯ ಅನಾವರಣ

Upayuktha