ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಕಠಿಣ ಪರಿಶ್ರಮಕ್ಕಿಂತ ಸೃಜನಶೀಲ ಅಭಿವ್ಯಕ್ತಿ ಇಂದಿನ ಅಗತ್ಯ : ಪ್ರೊ.ವಿ. ಜಿ.ಭಟ್

ವಿವೇಕಾನಂದದಲ್ಲಿ ಆನ್‍ಲೈನ್ ಕೋರ್ಸ್ ತರಬೇತಿ ಕಾರ್ಯಾಗಾರ

ಪುತ್ತೂರು: ಕಠಿಣ ಪರಿಶ್ರಮಕ್ಕಿಂತ ಸೃಜನಶೀಲ ಪರಿಶ್ರಮ ಇಂದಿನ ಅಗತ್ಯ. ಸಮಾಜದಲ್ಲಿ ಕಠಿಣ ಪರಿಶ್ರಮಿಗಳು ಬೇಕಾದಷ್ಟು ಜನ ಇರಬಹುದು ಆದರೆ ಬುದ್ಧಿವಂತಿಕೆಯಿಂದ ಮಾಡಬೇಕಾದ ಕೆಲಸವನ್ನು ಸಾಧಿಸುವಂತಹವರು ಬೇಕಾಗಿದೆ. ವಿದ್ಯಾರ್ಥಿಗಳು ಇಂತಹ ಅಂಶವನ್ನು ಮೈಗೂಡಿಸಿಕೊಂಡರೆ ಅನೇಕ ಸಂಗತಿಗಳಲ್ಲಿ ಯಶಗಳಿಸಬಹುದು ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿ.ಜಿ. ಭಟ್ ಹೇಳಿದರು.

ಅವರು ಕಾಲೇಜಿನ ವಾಣೀಜ್ಯ ಹಾಗೂ ವ್ಯವಹಾರ ನಿರ್ವಹಣಾ ವಿಭಾಗ, ಐಕ್ಯುಎಸಿ ಘಟಕ ಉದ್ಯೋಗ ಮತ್ತು ತರಬೇತಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ್ದ ಆನ್‍ಲೈನ್ ಕೋರ್ಸ್ ಮತ್ತು ಆಪ್ಟಿಟ್ಯೂಡ್ ಟೆಸ್ಟ್‍ಗೆ ಸಿದ್ಧತೆ ಎಂಬ ವಿಷಯದ ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.

ಮಾಡುವ ಕಾರ್ಯದಲ್ಲಿ ಸೌಂದರ್ಯ ಅಡಗಿರಬೇಕು. ಸೂಕ್ತ ರೀತಿಯಲ್ಲಿ ವಿಷಯಗಳನ್ನು ನಿಭಾಯಿಸುವ ಚಾಕಚಕ್ಯತೆ ನಮ್ಮಲ್ಲಿರಬೇಕು ಮಾತ್ರವಲ್ಲದೆ ಆಧುನಿಕ ದಿನಗಳಲ್ಲಿ ನಮ್ಮ ಒಟ್ಟು ವ್ಯಕ್ತಿತ್ವ ಉದ್ಯೋಗ ಕ್ಷೇತ್ರದಲ್ಲಿ ಬಹುದೊಡ್ಡ ಪರಿಣಾಮ ಬೀರುತ್ತದೆ. ಇಂತಹ ಸೂಕ್ಷ್ಮ ಸಂಗತಿಗಳನ್ನು ಅರಿತು ಆ ಕುರಿತಾಗಿ ಗಮನ ನೀಡಿದಾಗ ಯಾವುದೇ ಸವಾಲನ್ನು ಎದುರಿಸುವುದಕ್ಕೆ ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ.ಶ್ರೀಧರ ಎಚ್.ಜಿ ಮಾತನಾಡಿ ಯಾವುದೇ ವಿಷಯದಲ್ಲಿ ಸಾಧನೆ ಸಾಧ್ಯವಾಗಬೇಕಾದರೆ ಅದಕ್ಕೆ ಪೂರಕವಾದ ತರಬೇತಿ ಅಗತ್ಯ. ಅಂತಹ ತರಬೇತಿಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡಾಗ ಬೆಳವಣಿಗೆ ಸಾಧ್ಯವಾಗುತ್ತದೆ. ತಂತ್ರಜ್ಞಾನ ಆಧಾರಿತ ಇಂದಿನ ಜಗತ್ತಿನಲ್ಲಿ ವೇಗಕ್ಕೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕು. ಅದರಲ್ಲೂ ವಿದ್ಯಾರ್ಥಿಗಳಿಗೆ ತರಬೇತಿ ಅನ್ನುವುದು ಹೊಸ ಪ್ರೇರಣೆ ನೀಡಬಹುದಾದ ವಿಚಾರ ಎಂದು ನುಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೂಡಬಿದಿರೆಯ ಎಂಐಟಿಇ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ವರುಣ್ ವಿವಿಧ ಆನ್‍ಲೈನ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧಗೊಳ್ಳಬೇಕಾದ ವಿಧಾನ, ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳ ಬಗೆಗೆ ಮಾಹಿತಿ ನೀಡಿದರು. ಹಾಗೆಯೇ ಆ ಕುರಿತಾದ ವಿವಿಧ ಸಾಧ್ಯತೆಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿದರು.

ಉದ್ಯೋಗ ಮತ್ತು ತರಬೇತಿ ಘಟಕದ ಸಂಯೋಜಕಿ ರೇಖಾ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕಿ ರವಿಕಲಾ ವಂದಿಸಿದರು. ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

‘ಸಾಹಿತ್ಯದ ಬಯಲ ಬೆಟ್ಟ- ಡಾ. ನಾ. ಮೊಗಸಾಲೆ’ ಕೃತಿ ಬಿಡುಗಡೆ

Upayuktha

ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ 29ಕ್ಕೆ ಉದ್ಘಾಟನೆ

Upayuktha

ಎಂಜಿನಿಯರಿಂಗ್‌ನಲ್ಲಿ 6 ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಪಡೆದ ಸಿಂಧೂರ ಸರಸ್ವತಿ

Upayuktha