ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್‌ ಕಾಲೇಜಿನಲ್ಲಿ ‘ಯಶಸ್ಸಿಗಾಗಿ ಕೌಶಲ್ಯ’ ಕಾರ್ಯಾಗಾರ

ಮೂಡುಬಿದಿರೆ: ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂದರೆ ಶ್ರಮದ ಜತೆ ಸಂಕಲ್ಪವೂ ಮುಖ್ಯ. ಇದನ್ನು ಅರಿತವನು ನಿಜವಾಗಿಯೂ ಸಾಧಕನಾಗಬಲ್ಲ ಎಂದು ಜೆಸಿ ತರಬೇತುದಾರ ವೇಣು. ಜಿ. ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಪಿ.ಜಿ ಸೆಮಿನರ್ ಹಾಲ್‍ನಲ್ಲಿ ವಾಣಿಜ್ಯ ವಿಭಾಗದಿಂದ ಸಿಎ (ಇಂಟರ್) ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಯಶಸ್ಸಿಗಾಗಿ ಕೌಶಲ್ಯ’ ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು.

ನಾವು ಮಾಡುವ ಕೆಲಸದಲ್ಲಿ ಎಷ್ಟು ಅಳವಡಿಸಿಕೊಳ್ಳುತ್ತೇವೋ, ಅಷ್ಟು ಕಲಿಯಲು ಸಾಧ್ಯ. ವಿದ್ಯಾರ್ಥಿಗಳು ಸಾಧನೆಯ ಕನಸು ಮಾತ್ರ ಕಾಣುವುದಲ್ಲದೇ ಅದಕ್ಕಾಗಿ ಶ್ರಮಿಸಬೇಕು. ಆಗ ನಿಜವಾಗಿಯೂ ಭವಿಷ್ಯದಲ್ಲಿ ಉನ್ನತಿ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುರಿಯನ್ ಮಾತನಾಡಿ, ನಾವು ಮುಂದೆ ಏನಾಗಬೇಕೆಂಬುವುದನ್ನು ಇತರರಿಗೆ ಪ್ರದರ್ಶಿಸುತ್ತೇವೆಯೋ, ಆಗ ನಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಆಗ ನಾವು ಅಂದುಕೊಂಡಂತೆ ಯಶಸ್ಸನ್ನು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ 2018-19ರಲ್ಲಿ ಸಿಎ (ಇಂಟರ್) ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಷ್ಮಾ ಎನ್, ತೇಜಸ್, ದೀಕ್ಷಾ, ಅನಿತಾ ಕೆ ಹೆಗ್ಡೆ, ಭರತ್ ಜಿ ಹೆಗ್ಡೆ, ಧೀರಜ್ ಬಿ .ಎನ್, ಪವಿತ್ರಾ ವಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಎಮ್.ಡಿ, ವೃತ್ತಿಪರ ಕೋರ್ಸ್‌ನ ಸಂಯೋಜಕರಾದ ಅಶೋಕ ಕೆ.ಜಿ., ಕಾರ್ಯಕ್ರಮದ ಸಂಯೋಜಕಿ ಅಪರ್ಣ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಕೀರ್ತನಾ ಸ್ವಾಗತಿಸಿ, ನಿಖಿತಾ ವಂದಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕಠಿಣ ಪರಿಶ್ರಮಕ್ಕಿಂತ ಸೃಜನಶೀಲ ಅಭಿವ್ಯಕ್ತಿ ಇಂದಿನ ಅಗತ್ಯ : ಪ್ರೊ.ವಿ. ಜಿ.ಭಟ್

Upayuktha

ಕಡಬ ಘಟಕದ ಗೃಹರಕ್ಷಕರಿಗೆ ಜಿಲ್ಲಾ ಸಮಾದೇಷ್ಟರಿಂದ ಅಕ್ಕಿ ವಿತರಣೆ

Upayuktha

ಮಂಗಳೂರು ವಿವಿ 38ನೇ ವಾರ್ಷಿಕ ಘಟಿಕೋತ್ಸವ ಫೆ.27ಕ್ಕೆ

Upayuktha

Leave a Comment