ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಹಿಂದಿ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ: ಡಾ. ಮಂಗಲ್‌ ದೇಸಾಯಿ

ಮಂಗಳೂರು: ಭಾರತೀಯರು ವಿಶ್ವದೆಲ್ಲೆಡೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಮೂಲಕ ಅಸ್ತಿತ್ವ ಸ್ಥಾಪಿಸಿದ್ದಾರೆ. ಹೀಗಾಗಿ ಹಿಂದಿಯೂ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ, ಎಂದು ಧಾರವಾಡದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಿಕೆ ಡಾ. ಡಾ. ಮಂಗಲ್‌ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ಸಂಘ ಮತ್ತು ಸ್ನಾತಕೋತ್ತರ ವಿಭಾಗಗಳು ಜಂಟಿಯಾಗಿ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಹಿಂದಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆನ್‌ ಲೈನ್‌ ನಲ್ಲಿ ಭಾಗವಹಿಸಿದ್ದ ಅವರು, 2006 ರಿಂದ ಪ್ರತಿ ವರ್ಷ ಜನವರಿ 10 ರಂದು ವಿಶ್ವ ದಿನಾಚರಣೆ ನಡೆಯುತ್ತಿದೆ. ಪ್ರಸ್ತುತ ಹಿಂದಿಯನ್ನು 20 ಕ್ಕೂ ಹೆಚ್ಚು ದೇಶಗಳಲ್ಲಿ ಮಾತನಾಡಲಾಗುತ್ತದೆ, ಎಂದರು.

ಪ್ರಾಂಶುಪಾಲ ಡಾ. ಹರೀಶ ಎ ಅವರು, ಹಿಂದಿ, ಚಿತ್ರಗೀತೆಗಳ ಮೂಲಕ ಜನಸಾಮಾನ್ಯರ ಹೃದಯ ಗೆದ್ದಿದೆ, ಎಂದರು. ಹಿಂದಿ ಸಂಘದ ಉಪಾಧ್ಯಕ್ಷೆ ಡಾ. ನಾಗರತ್ನ ರಾವ್‌ ಅವರು ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಚಾಲಕಿ ಡಾ. ಸುಮಾ ಟಿ ಆರ್‌, ಹಿಂದಿ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಡಾ. ಸಂಜೀವ್‌ ಕುಮಾರ್‌ ಧನ್ಯವಾದ ಸಮರ್ಪಿಸಿದರೆ, ವಿದ್ಯಾರ್ಥಿನಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ವಿಭಾಗದ ಜ್ಯೋತಿ, ಡಾ. ನಾಗರತ್ನ ಶೆಟ್ಟಿ ಮತ್ತು ರಶ್ಮಿ ಹಾಜರಿದ್ದರು.

ಸ್ಪರ್ಧೆ, ಬಹುಮಾನಗಳು:
ಹಿಂದಿ ಭಾಷೆಯನ್ನು ಪ್ರೋತ್ಸಾಹಿಸುವ ಸಲುವಾಗಿ, ʼಹಿಂದಿ ಸಪ್ತಾಹʼದ ವೇಳೆ ಕಾಲೇಜಿನ ಪ್ರಾಧ್ಯಾಪಕರಿಗೆ ಹಿಂದಿ ಆಲಂಕಾರಿಕ ಬರವಣಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಮೊದಲ ಸ್ಥಾನ ಪಡೆದ ವಾಣಿಜ್ಯ ವಿಭಾಗದ ವಿದ್ಯಾಕಿಶನ್‌ ಆಳ್ವಾ, ದ್ವಿತೀಯ ಸ್ಥಾನಿ ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಡಾ. ಭಾರತಿ ಪ್ರಕಾಶ್‌ ಮತ್ತು ತೃತೀಯ ಸ್ಥಾನಿ ಭೌತಶಾಸ್ತ್ರ ವಿಭಾಗದ ಅರುಣಾ ಕುಮಾರಿಯವರಿಗೆ ಬಹುಮಾನ ವಿತರಿಸಲಾಯಿತು.

ಇದೇ ಸಂಧರ್ಭದಲ್ಲಿ ಕೆಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿಂದಿ ದ್ವಿತೀಯ ಎಂ.ಎ ವಿದ್ಯಾರ್ಥಿನಿ ಶ್ರಾವ್ಯ ಅವರನ್ನು ಸನ್ಮಾನಿಸಲಾಯಿತು. ಲಾಕ್‌ಡೌನ್‌ ಆನ್‌ಲೈನ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಪ್ರಥಮ ಬಿಎಯ ಮಹಾಲಕ್ಷ್ಮಿ ಮತ್ತು ಯಶಸ್ವಿನಿಯವರನ್ನೂ ಪುರಸ್ಕರಿಸಲಾಯಿತು. ರಸಪ್ರಶ್ನೆಯಲ್ಲಿ ಕ್ರಮವಾಗಿ ಪ್ರಥಮ ಮೂರು ಸ್ಥಾನ ಪಡೆದ ರೂಪಾ ಪೆರೇರಾ, ಪಲ್ಲವಿ ಮತ್ತು ರೋಮಿತಾ ಅವರಿಗೂ ಬಹುಮಾನ ವಿತರಿಸಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಾಜ್ಯಮಟ್ಟದ ವಾಲಿಬಾಲ್, ಥ್ರೋ ಬಾಲ್ ಪಂದ್ಯ: ಮಂಗಳೂರು ವಕೀಲರಿಗೆ ರನ್ನರ್ ಅಪ್ ಗೌರವ

Upayuktha

ಕಾಪುವಿನಲ್ಲಿ ಲೈಟ್ ಹೌಸ್ ಉತ್ಸವಕ್ಕೆ ಸಿದ್ಧತೆ

Upayuktha

ಕೇರಳ ರಾಜ್ಯ ಮಟ್ಟದ ಗೀತಾ ಕಂಠಪಾಠ ಸ್ಪರ್ಧೆ: ಸಂವೃತಾ ಪ್ರಥಮ

Upayuktha