ಮಂಗಳೂರು: ಕಟೀಲು ಮೇಳದ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡ ಲೇಖನ ವಿವಾದದ ಸ್ವರೂಪ ತಾಳಿದ್ದು, ಬ್ರಾಹ್ಮಣರು ಜನಿವಾರಧಾರಿಗಳು- ಶೂದ್ರರ ನಡುವಣ ವಿವಾದ ಇದು ಎಂಬಂತೆ ಬಿಂಬಿಸಲು ಹೊರಟಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ.
ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟರೇ ಸ್ವತಃ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ತಮ್ಮ ಪರವಾಗಿ ಎಂಬಂತೆ ಬಿಂಬಿಸಿಕೊಳ್ಳುತ್ತ, ಬ್ರಾಹ್ಮಣರು, ಜನಿವಾರಧಾರಿಗಳು ಎಂಬ ಉಲ್ಲೇಖದೊಂದಿಗೆ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರ ಹೆಸರನ್ನೂ ಎಳೆದು ತಂದ ಕ್ರಮವನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
‘ದಯಮಾಡಿ ಯಾರೂ ಒಂದು ಸಮಾಜವನ್ನು ಗುರಿಯಾಗಿಟ್ಟು ಕೊಂಡು ದೂಷಿಸಬೇಡಿ….. ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮಾಜ ಕಾರಣವಲ್ಲ…….. ನನಗೆಕಲಿಸಿದ ಗುರುಗಳು ಜನಿವಾರಧಾರಿಗಳೆ…..ನನ್ನ ಏಳ್ಗೆಗೆ ಎಲ್ಲಾ ಸಮಾಜದವರು ಕಾರಣರು……..ನಾನು ಯಕ್ಷಗಾನದಲ್ಲಿ ಇಷ್ಟು ಬೆಳೆಯಲು ಎಲ್ಲರ ಕೊಡುಗೆ ಇದೆ… ಬಲಿಪಜ್ಜ ನಾನು ಆರಾಧಿಸುವ ದೇವರು.ಅವರನ್ನು ಈ ವಿಚಾರದಲ್ಲಿ ಎಳೆದು ತರುವುದನ್ನು ನಾನು ಬಲವಾಗಿ ವಿರೋಧಿಸುತ್ತೇನೆ..’
ನನ್ನ ಅಭಿಮಾನಿಗಳಲ್ಲಿ ವಿನಂತಿ 🙏🙏🙏
-ನಿಮ್ಮಪಟ್ಲ ಸತೀಶ್ ಶೆಟ್ಟಿ
ಎಂದು ಪಟ್ಲ ಸತೀಶ್ ಶೆಟ್ಟರು ಸ್ಪಷ್ಟನೆ ನೀಡಿ ಕಳುಹಿಸಿರುವ ವಾಟ್ಸಪ್ ಸಂದೇಶವೂ ವ್ಯಾಪಕವಾಗಿ ಪ್ರಚಾರ ಪಡೆಯುತ್ತಿದೆ.
(ಉಪಯುಕ್ತ ನ್ಯೂಸ್ ಸುದ್ದಿಜಾಲ)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ