ಕಲೆ ಸಂಸ್ಕೃತಿ ಸಾಧಕರಿಗೆ ನಮನ

ಬಡಗು ತಿಟ್ಟಿನ ಆಲ್‌ರೌಂಡರ್‌ ಕಲಾವಿದ ನೀಲ್ಕೋಡು ಶಂಕರ ಹೆಗಡೆ

ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ಉತ್ತರ ಕನ್ನಡ ಜಿಲ್ಲೆ ಅನೇಕ ಪ್ರತಿಭೆಗಳನ್ನು ನೀಡಿದೆ. ಇಂತಹ ಪ್ರತಿಭೆಗಳಲ್ಲಿ  ಒಬ್ಬರು ಬಡಗು ತಿಟ್ಟಿನ ಆಲ್‌ರೌಂಡರ್‌ ಕಲಾವಿದ ನೀಲ್ಕೋಡು ಶಂಕರ ಹೆಗಡೆ.

ವಿಶ್ವನಾಥ ಹೆಗಡೆ ಹಾಗೂ ಪಾರ್ವತಿ ಹೆಗಡೆ ಇವರ ಪ್ರೀತಿಯ ಮಗನಾಗಿ 09.05.1978 ರಂದು ಜನಿಸಿದರು. ಪಿಯುಸಿ ವರೆಗೆ ವಿದ್ಯಾಭ್ಯಾಸ. ಪಿಯುಸಿ ಶಿಕ್ಷಣದಲ್ಲಿ ಇರುವಾಗಲೇ ಯಕ್ಷಗಾನ ಮೇಲೆ ತುಂಬಾ ಆಸಕ್ತಿ ಇದ್ದ ಇವರು ಮುಂದೆ ಒಬ್ಬ ಒಳ್ಳೆಯ ಕಲಾವಿದ ಆಗಬೇಕು ಎಂಬ ಕನಸು ಕಂಡರು.

ಹೆಜ್ಜೆಗಾರಿಕೆಯನ್ನು ಹೆರಂಜಾಲು ಗೋಪಾಲ ಗಾಣಿಗ ಇವರಿಂದ ಕಲಿತು, ಮುಂದೆ ತಮ್ಮ ಕಲಾ ಕಲಿಕೆಯನ್ನು “ಶ್ರೀಮಯ ಕಲಾ ಕೇಂದ್ರ ಗುಣವಂತೆ” ಇಲ್ಲಿ “ದಿ ಕೆರೆಮನೆ ಶಂಭು ಹೆಗಡೆ” ಇವರ ಮಾರ್ಗದರ್ಶನದಲ್ಲಿ ಗುರುಗಳು ಆದ ವಿದ್ವಾನ್‌ ಗಣಪತಿ ಭಟ್ ಹಾಗೂ ಎಪಿ ಪಾಠಕ್ ಇವರಿಂದ ಕಲಿತು ಯಕ್ಷಗಾನ ರಂಗದಲ್ಲಿ ಒಬ್ಬ ಒಳ್ಳೆಯ ಕಲಾವಿದನಾಗಿ ಹೊರ ಹೊಮ್ಮಿದರು.

“ಶ್ರೀ ಕೆರೆಮನೆ ಮೇಳ” ,”ಗುಂಡ ಬಾಳ ಮೇಳ”, “ಮಂದಾರ್ತಿ ಮೇಳ” , ಕಮಲಶಿಲೆ ಮೇಳ, ಪೆರ್ಡೂರು ಮೇಳ, ಜಲವಳ್ಳಿ ಮೇಳ ಹಾಗೂ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.

ಸ್ತ್ರೀ ವೇಷ:- “ಮೋಹಿನಿ, ದಾಕ್ಷಾಯಿಣಿ, ಅಂಬೆ, ದ್ರೌಪದಿ, ಸತ್ಯಭಾಮೆ, ಚಿತ್ರಾಕ್ಷಿ, ಸಾವಿತ್ರಿ, ದಮಯಂತಿ, ಸುಭದ್ರೆ, ಸೀತೆ, ಪ್ರಭಾವತಿ, ರುಚಿಮತಿ, ವಿಷಯೇ, ಮೇನಕೆ, ಚಂದ್ರಾವಳಿ, ಸುಧಿಷ್ಣೆ, ಅಸಿಕೆ, ಇತ್ಯಾದಿ”…

ಪುರುಷ ವೇಷ:- ಕೃಷ್ಣ, ಕೌರವ, ಸುಧನ್ವ, ಕಾರ್ತಿವೀರ್ಯ, ಅರ್ಜುನ, ಸುದರ್ಶನ, ಸುಗ್ರೀವ, ಕೀಚಕ, ಸಾಲ್ವ, ರುದ್ರಕೋಪ, ಚಂದ್ರಹಾಸ, ಈಶ್ವರ, ಲವ, ಕುಶ, ಹನುಮಂತ, ಇತ್ಯಾದಿ – ಪೌರಾಣಿಕ ಪ್ರಸಂಗದ ಎಲ್ಲಾ ಸ್ತ್ರೀ ವೇಷ ಹಾಗೂ ಕೆಲವು ಪುರುಷ ವೇಷಗಳನ್ನು ಇವರು ಮಾಡಿದ್ದಾರೆ.

ಅದರಲ್ಲೂ ಸಾಮಾಜಿಕ ಪ್ರಸಂಗವಾದ “ಪದ್ಮ ಪಲ್ಲವಿ, ಬೆಳ್ಳಿ ನಕ್ಷತ್ರ, ನಾಗವಲ್ಲಿ, ನಾದಿನಿ ದಿನಿ, ಶಿವರಂಜಿನಿ, ನಾಗಶ್ರೀ, ಶಂಕರಾಭರಣ, ಮೇಘರಂಜಿನಿ, ಗೋಕುಲಾಷ್ಟಮಿ, ಪುಷ್ಪಸಿಂಧೂರಿ, ಕ್ಷಮಯಾಧರಿತ್ರಿ, ಅಗ್ನಿ ವರ್ಷ, ಅಪೂರ್ವ ಅರ್ಧಾಂಗಿ, ಭ್ರಮರ ಭಾರ್ಗವಿ, ಚಂದ್ರಮುಖಿ ಸೂರ್ಯಸಖಿ” ಇವರ ಅಭಿನಯ ಯಾವತ್ತಿಗೂ ಟಾಪ್ ಕ್ಲಾಸ್. ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ಸಿಕ್ಕಿದೆ. ಯಕ್ಷಗಾನದ ಜೊತೆಗೆ “ಸಂಗೀತ, ಬರವಣಿಗೆ, ಸಾಂಸ್ಕೃತಿಕವಾಗಿ ಕ್ರಿಯಾಶೀಲವಾಗಿರುವುದು ಇವರ ಹವ್ಯಾಸಗಳು. ಸಾಲಿಗ್ರಾಮ ಮೇಳದ ಅನುಭವ ಕೇಳಿದಾಗ ಇವರು ಹೇಳುವುದು ಹೀಗೆ  “ಸಾಲಿಗ್ರಾಮ ಮೇಳ ಒಂದು ಒಳ್ಳೆಯ ಮನೆಯ ವಾತಾವರಣ, ರಂಗಸ್ಥಳದಲ್ಲಿ ಯಾವುದೋ ಭವ್ಯತೆ ಮತ್ತು ಗೌರವ ಮನಸ್ಸಿಗೆ ದಿವ್ಯತೆ”.

‘ನನಗೆಲ್ಲವನ್ನು ನೀಡಿದ ಯಕ್ಷಗಾನಕ್ಕಾಗಿ ಏನಾದರೂ ನೀಡಬೇಕು ಎಂಬ ತುಡಿತವೇ  “ಅಭಿನೇತ್ರಿ ಟ್ರಸ್ಟ್”ಗೆ ಕಾರಣ. ನನ್ನ ಈ ಸುಂದರ ಕನಸಿಗೆ ಚಂದದ ಹೆಸರಿಟ್ಟು ಮಾರ್ಗದರ್ಶನ ಮಾಡಿದವರು  “ಶ್ರೀ ವಿದ್ವಾನ್ ಉಮಾಕಾಂತ್ ಭಟ್”. ನನ್ನ ಜೊತೆಗೆ ಬೆನ್ನುಲುಬಾಗಿ ನಿಂತವರು ನನ್ನ ಸಮಾನ ಮನಸ್ಕರ ಸ್ನೇಹಿತರು, ಕಲಾಭಿಮಾನಿಗಳು, ಕಲಾಪೋಷಕರು. ತುಳಿದು ಬೆಳೆಯುವುದು ಗೆಲುವಲ್ಲ, ಬೆಳೆದು ಬೆಳೆಸುವುದೇ ನಿಜವಾದ ಗೆಲುವು” ಇದು ನನ್ನ ಟ್ರಸ್ಟ್ ನ ಧ್ಯೇಯ ಎನ್ನುತ್ತಾರೆ ಅವರು.

ಯಕ್ಷಗಾನ ಮುಂದಿನ ಯೋಜನೆಗಳು ಕೇಳಿದಾಗ ಇವರು ಹೇಳುವುದು ಹೀಗೆ “ಆಸಕ್ತಿ ಇರುವ ಮಕ್ಕಳಿಗೆ ಯಕ್ಷ ಶಿಕ್ಷಣ, ಶಾಲೆಯಲ್ಲಿ ಯಕ್ಷಗಾನ ಕಲಿಸುವುದು ಹೀಗೆ ಹತ್ತು ಹಲವು ಯೋಜನೆಗಳನ್ನು ನಮ್ಮ ಟ್ರಸ್ಟ್ ನಿಂದ ಮಾಡುವ ಯೋಚನೆ ಇದೆ. ನನ್ನ ಕಲಾ ಅಭ್ಯುದಯಕ್ಕೆ ಸಹಕರಿಸಿದವರು:-
1) ಶ್ರೀ ಆರ್ಗೋಡು ಮೋಹನದಾಸ ಶೆಣೈ.
2) ಶ್ರೀ ಸುಬ್ರಹ್ಮಣ್ಯ ಧಾರೇಶ್ವರ.
3) ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ
4) ಶ್ರೀ ಕೃಷ್ಣಯಾಜಿ ಬಳ್ಕೂರು.
5) ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ ಇತರರು

ದಿನಾಂಕ 13.12.2009ರಂದು ನೀಲ್ಕೋಡು ಶಂಕರ ಹೆಗಡೆಯವರ ಕಲೆಯನ್ನು ನೋಡಿ ಮೆಚ್ಚಿ ಮದುವೆಯಾದರು ತೃಪ್ತಿ. ಈ ದಂಪತಿಗಳ ಮಗಳು ದ್ಯುತಿ, ಮನೆಯ ಹಾಗೂ ಸಂಸ್ಥೆಯ ಬೆಳಕು.

“ಶ್ರೀಯುತ ನೀಲ್ಕೋಡು ಶಂಕರ ಹೆಗಡೆ” ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ.

– ಶ್ರವಣ್ ಕಾರಂತ್ ಕೆ.,
ಸುಪ್ರಭಾತ
ಶಕ್ತಿನಗರ ಮಂಗಳೂರು

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕಲಾವಿದರಿಗೆ ನಮನ: ಪಂಚರಾಜ್ಯ ಯಕ್ಷ ಪ್ರಭೃತಿ ಕೆ ಗೋವಿಂದ ಭಟ್‌ ನಿಡ್ಲೆ

Upayuktha

ಇಂದಿನ ಐಕಾನ್ – ಜನರ ಪ್ರೀತಿಗಾಗಿ ಏಳು ಗುಡ್ಡ ಅಗೆದು ರಸ್ತೆ ಮಾಡಿದ ರಾಜಾರಾಂ ಭಾಪ್ಕರ್ ಮೇಷ್ಟ್ರು

Upayuktha

ತುಳುವರ ಧಾರ್ಮಿಕ ಆಚರಣೆಗಳ ಶುಭಮಂಗಳ- ಪತ್ತನಾಜೆ

Upayuktha

Leave a Comment

error: Copying Content is Prohibited !!