ಕಲೆ ಸಂಸ್ಕೃತಿ ನಗರ ಸ್ಥಳೀಯ

ಯಕ್ಷಗಾನವು ಈ ತುಳು ಮಣ್ಣಿನ ಶ್ರೇಷ್ಠ ಕಲೆ: ದಯಾನಂದ ಜಿ.ಕತ್ತಲ್‌ಸಾರ್

ಸರಯೂ ಮಹಿಳಾ ವೃಂದದ ದಶಮಾನೋತ್ಸವ ಸಮಾರಂಭ


ಕುಡ್ಲ: “ಯಕ್ಷಗಾನವು ಈ ಮಣ್ಣಿನ ಶ್ರೇಷ್ಠ ಕಲೆ. ಇದರಲ್ಲಿ ಮಣ್ಣಿನ ಶ್ರೇಷ್ಠ ಪರಂಪರೆಯನ್ನು ತಿಳಿಸುವ ಅನೇಕ ಸಂಗತಿಗಳಿವೆ. ಸರಯೂ ಮಹಿಳಾ ವೃಂದ ಅತ್ಯಂತ ಸುಂದರವಾದ ತುಳು ಭಾಷೆಯಲ್ಲಿ ತಾಳಮದ್ದಳೆ ಸರಣಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಇಂದು ಪುತ್ತೂರಿನ ಓರ್ವ ಸಾಂಸ್ಕೃತಿಕ ರಾಯಭಾರಿ ಭಾಸ್ಕರ ಬಾರ್ಯರನ್ನು ಸನ್ಮಾನಿಸಿ ಈ ಕಲೆಗೆ ಮರ್ಯಾದೆ ಸಲ್ಲಿಸಿದ್ದಾರೆ. ಯಕ್ಷಗಾನ ಮತ್ತು ತುಳು ಭಾಷೆ ಎರಡೂ ಸಮಾನಾಂತರ ರೇಖೆಗಳು. ಸದಾ ಜೊತೆಯಾಗಿ ಸಾಗುತ್ತಾ ಭಾಷೆ ಹಾಗೂ ಕಲೆಯ ಸೊಬಗನ್ನು ಹೆಚ್ಚಿಸುತ್ತಿವೆ” ಎಂದು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ ಹೇಳಿದರು.

ಅವರು ತುಳು ಭವನದ ಸಿರಿ ಚಾವಡಿಯಲ್ಲಿ ಜರುಗಿದ ಸರಯೂ ಮಹಿಳಾ ವೃಂದದ ದಶಮಾನೋತ್ಸವ ಸಂಭ್ರಮಾಚರಣೆಯ ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನದಿಂದ ಬಾರ್ಯರನ್ನು ಸನ್ಮಾನಿಸುತ್ತ ಮಾತನಾಡಿದರು.

ತುಳು ಕವಿ, ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ, ಸಂಘಟಕ ಸುಧಾಕರ ರಾವ್ ಪೇಜಾವರ ಮುಖ್ಯ ಅತಿಥಿಗಳಾಗಿದ್ದರು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರು ಸ್ವಾಗತಿಸಿದರು. ಅಧ್ಯಕ್ಷ ವರ್ಕಾಡಿ ಮಧುಸೂದನ ಅಲೆವೂರಾಯ ವಂದಿಸಿದರು. ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಎಲ್ ನಿಡ್ವಣ್ಣಾಯ, ಸಂಜೀವ ಕಜೆಪದವು, ಸ್ಕಂದ ಕೊನ್ನಾರ್, ಡಾ. ದಿನೇಶ್ ನಾಯಕ್, ಹರ್ಷಿತ್ ಶೆಟ್ಟಿ, ಹರಿಚರಣ್ ಆರ್.ಪಿ. ಗಗನ್ ಶೆಟ್ಟಿ, ಅಕ್ಷಯ್ ಸುವರ್ಣ ಉಪಸ್ಥಿತರಿದ್ದರು.

ಬಳಿಕ ಸರಯೂ ಯಕ್ಷ ಬಳಗ ಕೋಡಿಕಲ್ ವತಿಯಿಂದ ‘ಕೋಟಿ-ಚೆನ್ನಯ’ ತುಳು ಯಕ್ಷಗಾನ ಬಯಲಾಟ ಜರುಗಿತು.

ಯಕ್ಷಗಾನಕ್ಕೆ ಅಕಾಡೆಮಿಗಳ ಸಹಕಾರ ಅಗತ್ಯ: ಕತ್ತಲ್‌ಸಾರ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

 

Related posts

ಶಾಲೆಯಲ್ಲಿ ಅಡುಗೆ ಅನಿಲ ಸೋರಿಕೆ: ತಪ್ಪಿದ ಅನಾಹುತ

Upayuktha

ಆತ್ಮ, ಆಲೋಚನಾ ಶುದ್ಧಿ, ತಾಳ್ಮೆ- ವ್ಯಕ್ತಿತ್ವ ವಿಕಸನದ ಮೂಲಾಂಶಗಳು: ರೋಜರ್ ನಾರಾಯಣ್

Upayuktha

ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Upayuktha

Leave a Comment

error: Copying Content is Prohibited !!