ನಿಧನ ಸುದ್ದಿ ಪ್ರಮುಖ

ಯಕ್ಷಗಾನದ ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್‌ ನಿಧನ

 

ಉಡುಪಿ: ಯಕ್ಷಗಾನ ರಂಗದ ಹಿರಿಯರಾದ, ಮದ್ದಲೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ (101 ವರ್ಷ) ಇಂದು ರಾತ್ರಿ 8:30ರ ವೇಳೆಗೆ ನಿಧನರಾದರು.

ಅವರ ಅಂತ್ಯ ಸಂಸ್ಕಾರ ನಾಳೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಗೋಪಾಲ ರಾವ್ ಅವರು 1919ರ ಡಿಸೆಂಬರ್‌ 15ರಂದು ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ಜನಿಸಿದರು. ಹಿರಿಯಡ್ಕ ಮೇಳದಲ್ಲಿ ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಬಡಗುತಿಟ್ಟಿನ ಏರು ಮದ್ದಳೆ ಬಾರಿಸುವುದರಲ್ಲಿ ಪರಿಣಿತರಾಗಿದ್ದರು.

ಹಿರಿಯ ಭಾಗವತರಾದ ಶೇಷಗಿರಿ ರಾವ್ ಅವರ ಭಾಗವತಿಕೆಗೆ ಮದ್ದಳೆ ಬಾರಿಸುತ್ತಿದ್ದ ಪರಿ ಅವಿಸ್ಮರಣೀಯ ಎಂದು ರಾಯರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಎರಡು ವರ್ಷಗಳ ಹಿಂದೆ ಅ೦ಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿ ತನ್ನ ಅರವತ್ತರ ಸಂಭ್ರಮದಲ್ಲಿ ಗುರುಗಳಾದ ಹಿರಿಯಡ್ಕ ಗೋಪಾಲ ರಾಯರನ್ನು ಅರವತ್ತು ಸಾವಿರ ನಿಧಿ ಯೊಂದಿಗೆ ಸನ್ಮಾನಿಸಿದ ಸಂದರ್ಭದಲ್ಲಿ ಸೊಗಸಾಗಿ ಮದ್ದಳೆ ನುಡಿಸಿದ ದೃಶ್ಯ ಇನ್ನೂ ಹಸಿರಾಗಿದೆ.

ಗೋಪಾಲರಾಯರು ಪರ್ಡೂರು ಮತ್ತು ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಕಡಲತಡಿಯ ಭಾರ್ಗವ ಶಿವರಾಮ ಕಾರಂತರ ಒಡನಾಡಿಯಾಗಿಯೂ ಗುರುತಿಸಿಕೊಂಡಿದ್ದರು. 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.

ಹಿರಿಯಡ್ಕ ಗೋಪಾಲ ರಾವ್ ಅವರ ಬಗ್ಗೆ ಡಾ. ಕೆ.ಎಂ ರಾಘವ ನಂಬಿಯಾರ್‌ ಅವರು ‘ರಂಗ ವಿದ್ಯೆಯ ಹೊಲಬು’ ಎಂಬ ಕೃತಿಯನ್ನು ರಚಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೋವಿಡ್ 19 ನಾಶಕ್ಕೆ ಆಯುರ್ವೇದ ಔಷಧ ಸಿದ್ಧ: ಪ್ರಾಯೋಗಿಕ ಬಳಕೆಗೆ ಅನುಮತಿ ಕೋರಿ ಡಾ. ಗಿರಿಧರ ಕಜೆ ಅವರಿಂದ ಪ್ರಧಾನಿಗೆ ಮನವಿ

Upayuktha

ನೈಋತ್ಯ ಮುಂಗಾರು ಜೂನ್ 1ಕ್ಕೆ ಕೇರಳ ಪ್ರವೇಶ ನಿರೀಕ್ಷೆ

Upayuktha

ನವರಾತ್ರಿ ವಿಶೇ‍ಷ: ದುರ್ಗಾ ಸಪ್ತಶತಿ ಪಾರಾಯಣದ ವಿಶೇಷ ಫಲಗಳು

Upayuktha

Leave a Comment