ಕಲೆ ಸಂಸ್ಕೃತಿ ನಗರ ಸ್ಥಳೀಯ

ಯಕ್ಷಗಾನಕ್ಕೆ ಅಕಾಡೆಮಿಗಳ ಸಹಕಾರ ಅಗತ್ಯ: ಕತ್ತಲ್‌ಸಾರ್

ಮಂಗಳೂರು: ಯಕ್ಷಗಾನವು ಸಾಕಷ್ಟು ಖರ್ಚು-ವೆಚ್ಚಗಳನ್ನು ಅಪೇಕ್ಷಿಸುವ ಕಲೆ. ಯಕ್ಷಗಾನ ಪ್ರದರ್ಶನಕ್ಕೆ ವೇಷಭೂಷಣ, ಹಿಮ್ಮೇಳ ಕಲಾವಿದರು ಎಂದೆಲ್ಲಾ ಆಗುವಾಗ ಬಹಳಷ್ಟು ಹೊರೆಯಾಗುತ್ತದೆ. ಅದನ್ನು ಕಡಿತಗೊಳಿಸುವರೇ ಅಕಾಡೆಮಿಗಳು ವೇಷಭೂಷಣ ಮತ್ತು ಹಿಮ್ಮೇಳ ಪರಿಕರಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು ಮತ್ತು ಇದಕ್ಕಾಗಿ ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಒತ್ತಾಯಿಸಿ, ಅದಕ್ಕೆ ಬೇಕಾಗುವ ವ್ಯವಸ್ಥೆ ಖಂಡಿತಾ ಮಾಡುತ್ತೇನೆ ಎಂದು ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ನುಡಿದರು.

ಇಂದು ಯಕ್ಷಗಾನ ಕಲಾವಿದೆ ಶ್ರೀಮತಿ ಸುಲೋಚನಾ ವಿ. ರಾವ್ ರವರು ದುರ್ಗಾಂಬಾ ಮಹಿಳಾ ಮಂಡಳಿಯ ಸ್ಥಾಪಕಾಧ್ಯಕ್ಷೆಯಾಗಿ, ಕಲಾವಿದೆಯಾಗಿ ಈ ರಂಗದಲ್ಲಿ ಸಾಕಷ್ಟು ದುಡಿದಿದ್ದಾರೆ. ದಶಮಾನೋತ್ಸವದ ಸಂಭ್ರಮದಲ್ಲಿರುವ ಸರಯೂ ಮಹಿಳಾ ವೃಂದ ಇವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ” ಎಂದು ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದ ಸಿರಿ ಚಾವಡಿಯಲ್ಲಿ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.

ಉದ್ಯಮಿ ಮಧುಸೂದನ ಅಲೆವೂರಾಯ, ಆಕಾಶವಾಣಿ ಹಿಂದಿ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತಿ ಹೊಂದಿರುವ ಮಾಲತಿ ಭಟ್, ಶಿಕ್ಷಕ-ಗುರು ವಾಸುದೇವ ರಾವ್, ಸರಯೂ ಮಹಿಳಾ ವೃಂದದ ಅಧ್ಯಕ್ಷೆ ವಿಜಯಲಕ್ಷ್ಮೀ ಎಲ್ ನಿಡ್ವಣ್ಣಾಯ ಉಪಸ್ಥಿತರಿದ್ದರು. ಮಧುಸೂದನ ಅಲೆವೂರಾಯ ವರ್ಕಾಡಿ ಸ್ವಾಗತಿಸಿದರು. ಡಾ.ದಿನೇಶ್ ನಾಯಕ್ ಸನ್ಮಾನ ಪತ್ರ ವಾಚಿಸಿದರೆ, ಶಾಂತಾ ಆರ್ ಎರ್ಮಾಳ್ ವಂದಿಸಿದರು. ಬಳಿಕ ಸರಯೂ ಯಕ್ಷ ಬಳಗದವರಿಂದ ‘ಯಕ್ಷ ಮಣಿ’ ಎಂಬ ತುಳು ತಾಳಮದ್ದಳೆ ಜರುಗಿತು.

ಯಕ್ಷಗಾನವು ಈ ತುಳು ಮಣ್ಣಿನ ಶ್ರೇಷ್ಠ ಕಲೆ: ದಯಾನಂದ ಜಿ.ಕತ್ತಲ್‌ಸಾರ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಉಡುಪಿ ಪರ್ಯಾಯಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್‌; ಸಂಚಾರ ಬದಲಾವಣೆ, ಡ್ರೋನ್ ಹಾರಾಟ ನಿಷೇಧ

Upayuktha

ಅ.2ಕ್ಕೆ ಕುಂಬಳೆಯಲ್ಲಿ ದಸರಾ ಸಾಹಿತ್ಯ ಸಂಭ್ರಮ

Upayuktha

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆದ ದ್ವಿತೀಯ ಪಿಯುಸಿ ಆಂಗ್ಲ ಪರೀಕ್ಷೆ

Upayuktha

Leave a Comment

error: Copying Content is Prohibited !!