
ಮಂಗಳೂರು:
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಪ್ತಾಹದ ಮೊದಲ ದಿನದ ಆಟ ನಡೆಯಲಿದ್ದು, ‘ತ್ರಿಪುರ ಮಥನ’ದ ಪ್ರದರ್ಶನವಿದೆ.
ಬುಧವಾರ ಸಂಜೆ 5:30ರಿಂದ 9:30ರ ವರೆಗೆ ನಡೆಯಲಿರುವ ಆಟದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ ಮತ್ತು ಮುರಾರಿ ಕಡಂಬಳಿತ್ತಾಯ, ಚಕ್ರತಾಳದಲ್ಲಿ ಸಂಜೀವ ಕಜೆಪದವು ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಜಯಾನಂದ ಸಂಪಾಜೆ (ದೇವೇಂದ್ರ), ಚಿಂತನ ಆರ್.ಕೆ (ಅಗ್ನಿ), ಹರ್ಷಿತ ಶೆಟ್ಟಿ (ವರುಣ), ಪ್ರಥಮ ರೈ (ಕುಬೇರ), ಸುಬ್ರಾಯ ಹೊಳ್ಳ ಕಾಸರಗೋಡು (ತಾರಾಕ್ಷ-1), ಹರಿನಾರಾಯಣ ಭಟ್ ಎಡನೀರು (ತಾರಾಕ್ಷ-2), ಉಮೇಶ ಶೆಟ್ಟಿ ಬುಬರಡ್ಕ (ತಾಮ್ರಾಕ್ಷ-1), ಬಾಲಕೃಷ್ಣ ಮಿಜಾರು (ತಾಮ್ರಾಕ್ಷ-2), ಅಶೋಕ ಶೆಟ್ಟಿ ಸರಪಾಡಿ (ವಿದ್ಯುನ್ಮಾಲಿ-1), ಸಂಜೀವ ಶಿರಂಕಲ್ಲು (ವಿದ್ಯುನ್ಮಾಲಿ-2), ರಘು ಕಾವೂರು (ಬ್ರಹ್ಮ ಮತ್ತು ನಾರ್ವಾಕ), ಸೀತಾರಾಮ ಕುಮಾರ ಕಟೀಲು (ಚಾರ್ವಾಕ ಮತ್ತು ದೇವದೂತ), ರಾಮಚಂದ್ರ ಸಾಲ್ಯಾನ್ ಮುಕ್ಕ (ಶಚಿ), ರವಿ ಅಲೆವೂರಾಯ ವರ್ಕಾಡಿ (ಈಶ್ವರ), ಅರುಣ ಕೋಟ್ಯಾನ್ (ಸರಸ್ವತಿ), ಪ್ರೇಮರಾಜ ಕೌಲ (ಆದಿಶೇಷ), ಗೋಪಾಲಕೃಷ್ಣ ಗುಂಡಿಮಜಲು (ಈಶ್ವರ), ಶರತ್ಕುಮಾರ ಕುಂಜತ್ತೂರು (ವೀರಭದ್ರ) ಮತ್ತು ಸಾನ್ವಿ ಜೆ (ಸುಬ್ರಹ್ಮಣ್ಯ) ಪಾತ್ರ ನಿರ್ವಹಿಸಲಿದ್ದಾರೆ.
ಯಕ್ಷಗಾನ ಸಪ್ತಾಹ ಅ.30ರಿಂದ ನ.5ರ ವರೆಗೆ ನಡೆಯಲಿದೆ.
(ಉಪಯುಕ್ತ ನ್ಯೂಸ್ ಸುದ್ದಿಜಾಲ)