ಕಲೆ ಸಂಸ್ಕೃತಿ ನಗರ ಸ್ಥಳೀಯ

ಅಷ್ಟಭುಜೆ ದೇವಿಯಾಗಿ ಮತ್ತೆ ರಂಗಸ್ಥಳವೇರಿದ ಜಿತೇಂದ್ರ ಕುಂದೇಶ್ವರ

ಮಂಗಳೂರು: ಪತ್ರಕರ್ತ, ನಾಟಕ ಹಾಗೂ ಯಕ್ಷಗಾನ ಕಲಾವಿದರಾಗಿರುವ ಜಿತೇಂದ್ರ ಕುಂದೇಶ್ವರ 4 ವರ್ಷಗಳ ಅಂತರದ ಬಳಿಕ ಮತ್ತೆ ಬಣ್ಣಹಚ್ಚಿದ್ದು, ಅಷ್ಟಭುಜೆ ದೇವಿಯಾಗಿ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.

ನವರಾತ್ರಿ ಪುಣ್ಯ ಕಾಲದಲ್ಲಿ ಉಡುಪಿ ಪುತ್ತೂರಿನ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ನಡೆದ ಏಕಾದಶಿ ದೇವಿ‌ ಮಹಾತ್ಮೆಯಲ್ಲಿ ಅಷ್ಟ ಭುಜೆಯಾಗಿ ಬಣ್ಣ ಹಚ್ಚಿರುವುದನ್ನು ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

4 ವರ್ಷಗಳ ಹಿಂದೆ ಮಂಗಳೂರಿನ ಪ್ರೆಸ್ ಕ್ಲಬ್ ಡೇಯಲ್ಲಿ ಮಹಿಷಮರ್ದಿನಿಯಾಗಿ ಬಣ್ಣ ಹಚ್ಚಿ ಬದುಕಲ್ಲಿ ಯಕ್ಷಗಾನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೆ ಎಂದೂ ಅವರು ನೆನಪಿಸಿಕೊಂಡಿದ್ದಾರೆ.

‘ಬಳಿಕ ಹಲವು ಬಾರಿ ದೇವಿ ಪಾತ್ರಗಳನ್ನು ಮಾಡಿದ್ದೆ. ಪ್ರತಿ ಬಾರಿಯೂ ವೇಷ ವಿಭಿನ್ನ, ಅನುಭವವೂ ವಿಭಿನ್ನ. ಈ‌ ಆಖ್ಯಾನದಲ್ಲಿ ಮೇಘಮುಖಿಯಾಗಿಯೂ ಸ್ತ್ರೀವೇಷಧಾರಿಯಾದೆ!

2020ರ ಮಾರ್ಚ್ ನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಜಮದಗ್ನಿ ಪಾತ್ರ ಮಾಡಿದ್ದೆ. ಕೊರೊನಾ ಗಲಾಟೆಯಲ್ಲಿ ಫೇಸ್ ಬುಕ್ಕಿಗೆ ಫೋಟೊ ಹಾಕಲು‌ ಮರೆತಿದ್ದೆ. ಕೊರೋನಾ ಬಿಟ್ಟು ಹೋಗುವುದಿಲ್ಲ ಎಂದು ಗೊತ್ತಾದ ಬಳಿಕ ಮತ್ತೆ ಬಣ್ಣ ಹಚ್ಚಿದ್ದೇನೆ. ಅದೂ ಉಡುಪಿಯಲ್ಲಿ’ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

‘ಉಡುಪಿಯಲ್ಲಿ ನನ್ನ ಶಾಲೆ- ಕಾಲೇಜು ದಿನಗಳ ನೆನಪು ಸಾಂಸ್ಕೃತಿಕ ವೈಭವದ ನೆನಪು ಅನನ್ಯ. ಎರಡು ದಶಕಗಳ ಬಳಿಕ ಮತ್ತೆ ಉಡುಪಿಯಲ್ಲಿ ಬಣ್ಣ ಬಣ್ಣದ ನೆನಪು… ಅವಕಾಶ ಮಾಡಿಕೊಟ್ಟ ಪ್ರಮೋದ್ ತಂತ್ರಿಗಳಿಗೆ, ಯಕ್ಷಗುರು ಕದ್ರಿ ರಾಮಚಂದ್ರ ಭಟ್ ಎಲ್ಲೂರು ಅವರಿಗೆ ಧನ್ಯವಾದ. ಫೋಟೊ ತೆಗೆದು ಚೆಂದಗೊಳಿಸಿ ಪತ್ರಕರ್ತ ಮಿತ್ರ ಮೋಹನ್ ಉಡುಪ ಅವರಿಗೆ ವಂದನೆಗಳು’ ಎಂದು ಸೌಜನ್ಯ ಮರೆಯಲು ಅವರು ಮರೆತಿಲ್ಲ. ಅವರ ಬಹುಮುಖ ಪ್ರತಿಭೆ ಸದಾ ಬೆಳಗುತ್ತಿರಲಿ ಎಂದು ಹಾರೈಸೋಣ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ವಿಟ್ಲ ಕಾಂತಡ್ಕದಲ್ಲಿ ಭಾರಿ ಪ್ರಮಾಣದ ಗಾಂಜಾ ವಶ, ಆರೋಪಿ ಬಂಧನ

Upayuktha

ಮಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ; ಎಲ್ಲರೂ ಕೇರಳದವರು

Upayuktha

ವ್ಯಕ್ತಿಗೆ ವ್ಯಕ್ತಿತ್ವವಿದ್ದಂತೆ, ರಾಷ್ಟ್ರಕ್ಕೆ ರಾಷ್ಟ್ರೀಯತೆ: ಕೇಶವ ಬಂಗೇರ

Upayuktha

Leave a Comment