ಕಲೆ ಸಂಸ್ಕೃತಿ ನಗರ ಸ್ಥಳೀಯ

ಅಜೆಕಾರು ಕಲಾಭಿಮಾನಿ ಬಳಗದಿಂದ ಮಾತೃಶ್ರೀ ಸಂಸ್ಮರಣೆ- ತಾಳಮದ್ದಳೆ

ಮಾತೆಯ ಪ್ರೇರಣೆಯಿಂದ ಯಕ್ಷಗಾನ ಕಲಾಸೇವೆ: ಕುಕ್ಕುವಳ್ಳಿ

ಮಂಗಳೂರು: ‘ಎಳವೆಯಲ್ಲಿ ಕಲಾಸಕ್ತಿ ಮೊಳಕೆಯೊಡೆಯಲು ಅವರವರ ಮನೆಯಲ್ಲಿ ಪೂರಕ ವಾತಾವರಣವಿರಬೇಕು. ಮುಂಬಯಿ ಮಹಾನಗರದಲ್ಲಿ ಅಜೆಕಾರು ಕಲಾಭಿಮಾನಿ ಬಳಗವನ್ನು ಸ್ಥಾಪಿಸಿ ಹದಿನೆಂಟು ವರ್ಷಗಳಿಂದ ಯಕ್ಷಗಾನ ತರಬೇತಿ, ಆಟ- ಕೂಟಗಳ ಸಂಯೋಜನೆ, ಯಕ್ಷ ರಕ್ಷಾ ಪ್ರಶಸ್ತಿ ಪ್ರದಾನಗಳನ್ನು ಮಾಡುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟರಿಗೆ ಬಾಲ್ಯದಲ್ಲಿ ಹೆತ್ತ ಮಾತೆಯೇ ಪ್ರೇರಣೆಯಾಗಿದ್ದರು’ ಎಂದು ಯಕ್ಷಾಂಗಣ ಮಂಗಳೂರು ಅಧ್ಯಕ್ಷ ಮತ್ತು ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಅಜೆಕಾರು ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ಜರಗಿದ ‘ಮಾತೃಶ್ರೀ ಸಂಪಾ ಎಸ್.ಶೆಟ್ಟಿ ಅವರ ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಳೆ’ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.

‘ತಾಯಿ ಸಂಪಾ ಶೆಟ್ಟಿ ಮತ್ತು ಅಜ್ಜಿ ಕೊರಪೋಳು ಶೆಡ್ತಿಯವರ ಜತೆಗೆ ಎಳವೆಯಲ್ಲಿ ನೋಡುತ್ತಿದ್ದ ಯಕ್ಷಗಾನ ಬಯಲಾಟಗಳು ಮನಸ್ಸಿನಲ್ಲಿ ಅಚ್ಚೊತ್ತಿದ ಕಾರಣ ಬಾಲಕೃಷ್ಣ ಶೆಟ್ಟರು ಮುಂಬಯಿಗೆ ಹೋದ ಬಳಿಕವೂ ಯಕ್ಷಾಗಾನದ ಹವ್ಯಾಸವನ್ನು ಬೆಳಸಿಕೊಂಡು ಮಹಾನಗರದ ವಿವಿಧೆಡೆ ತರಗತಿಗಳನ್ನು ನಡೆಸಿ ಸಾವಿರಾರು ಶಿಷ್ಯರನ್ನು ತಯಾರಿಸಿರುವುದು ಸಣ್ಣ ಸಾಧನೆಯಲ್ಲ’ ಎಂದವರು ಶ್ಲಾಘಿಸಿದರು. ಗಣ್ಯರು ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲಾಸಂಘಟಕ ಮತ್ತು ಉದ್ಯಮಿ ಅಜೆಕಾರು ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ದಿವಾಕರ ಹೆಗ್ಡೆಯವರಿಗೆ ಶ್ರದ್ಧಾಂಜಲಿ:
ಇತ್ತೀಚೆಗೆ ನಿಧನರಾದ ಅಜೆಕಾರು ನಿವಾಸಿ ಯಕ್ಷಗಾನದ ಹಿರಿಯ ಕಲಾವಿದ ಮತ್ತು ನಿವೃತ್ತ ಪೋಲಿಸ್ ಅಧಿಕಾರಿ ದಿವಾಕರ ಹೆಗ್ಡೆ ಪುತ್ತೂರು ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯ್ತು.

ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಯಶೋದಾ ಶೆಟ್ಟಿ ಸುಬಾವಿ, ಅಜೆಕಾರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ, ಗುರುಪ್ರಸಾದ್, ಸಮಾಜ ಸೇವಕ ನಂದಕುಮಾರ್ ಹೆಗ್ಡೆ ಅಜೆಕಾರು, ಮುಂಬಯಿ ಉದ್ಯಮಿಗಳಾದ ಸತೀಶ್ ಶೆಟ್ಟಿ ಕೊಟ್ರಪಾಡಿ, ಸುಕುಮಾರ್ ಮಾರ್ಲ ಐಕಳ ಅತಿಥಿಗಳಾಗಿದ್ದರು. ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು.

ತಾಳಮದ್ದಳೆ: ಶಲ್ಯ ಸಾರಥ್ಯ – ಕರ್ಣಾವಸಾನ:
ಬಳಿಕ ಜರಗಿದ ‘ಶಲ್ಯ ಸಾರಥ್ಯ – ಕರ್ಣಾರ್ಜುನ’ ತಾಳಮದ್ದಳೆಯಲ್ಲಿ ಜಿಲ್ಲೆಯ ಪ್ರಸಿದ್ದ ಕಲಾವಿದರಾದ ಶಂಭು ಶರ್ಮ ವಿಟ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬೊಳಂತಿಮೊಗರು, ಸದಾಶಿವ ಆಳ್ವ ತಲಪಾಡಿ ಮತ್ತು ಗಣೇಶ್ ಕುಂಜತ್ತೂರು ಅರ್ಥಧಾರಿಗಳಾಗಿದ್ದರು. ದೇವಿಪ್ರಸಾದ್ ಆಳ್ವ ತಲಪಾಡಿ, ಧೀರಜ್ ರೈ ಸಂಪಾಜೆ, ಪ್ರಶಾಂತ್ ಶೆಟ್ಟಿ ವಗೆನಾಡು, ಮಯೂರ್ ನಾಯಗ ಮಾಡೂರು ಮತ್ತು ರಮೇಶ್ ಕಜೆ ಹಿಮ್ಮೇಳದಲ್ಲಿ ಭಾಗವಹಿಸಿದರು. ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸೋಲು ಗೆಲುವಿಗೆ ಸೋಪಾನ: ಡಾ. ಜೆ ದಿನಕರ ಅಡಿಗ

Upayuktha

ಉಜಿರೆ: ‘ಝೇಂಕಾರ ಸ್ಟಾರ್ ನೈಟ್‍’ಗೆ ಬಿಗ್‍ಬಾಸ್ ಖ್ಯಾತಿಯ ವಾಸುಕಿ ವೈಭವ್ !

Upayuktha

ಪಿಲಿಕುಳ ಜೈವಿಕ ಉದ್ಯಾವನ: ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Upayuktha

Leave a Comment