ಕತೆ-ಕವನಗಳು

ಯಕ್ಷಗಾನ

ಒಂದು ಕರಾವಳಿ ಕಲೆ


ಮಾತು,ಅಭಿನಯ,ನಾಟ್ಯ,
ತಾಳ,ಹಾಡು ಇದ್ದರೆ ಮಾತ್ರ ಅದಕ್ಕೆ ಬೆಲೆ
ಕಾರಣ
ಇದು ಕೇವಲ ಮನೋರಂಜನಾತ್ಮಕ ಕಲೆಯಲ್ಲ
ಶಿಕ್ಷಣ ನಾತ್ಮಕ ಕಲೆಯೂ ಹೌದು..!!

ಗಣಪತಿಯ ಸ್ತುತಿಯಿಂದ
ಪ್ರಾರಂಭಿಸುವುದು ವಾಡಿಕೆ
ಶ್ರೇಷ್ಠ ಕಲಾವಿದರು ನೀಡಿರುವರು
ಈ ಕಲೆಗೆ ಅಪಾರ ಕೊಡುಗೆ||

ಯಕ್ಷಗಾನದಲ್ಲಿ ಇರುತ್ತದೆ ನೀತಿಪಾಠ
ಈ ಕಲೆಯನ್ನು ಕರೆಯುವರು ದಶಾವತಾರ,ಬಯಲಾಟ,
ಭಾಗವತರಾಟ||

ತೆಂಕುತಿಟ್ಟು,ಬಡಗುತಿಟ್ಟು,
ಬಡಬಡಗುತಿಟ್ಟು ಎಂಬ ಶೈಲಿಗಳು
ಯಕ್ಷಗಾನದಲ್ಲಿ ತುಂಬಾ
ಕಲಾತ್ಮಕವಾದದ್ದು ಬಣ್ಣ ಬಣ್ಣದ ವೇಷಗಳು||

ಎಲ್ಲಾ ಪ್ರಸಂಗಗಳಲ್ಲೂ
ಕಂಡು ಬರುವುದು ಹಾಸ್ಯ
ನವರಸಗಳ ಅಭಿವ್ಯಕ್ತಿಗೆ ಇದೆ ಅವಕಾಶ||

ಹಿಂದೆಲ್ಲಾ ಬೆಳಗಿನ ಜಾವದವರೆಗೆ
ನಡೆಯುತ್ತಿತ್ತು ಪ್ರಸಂಗ
ಆದರೆ ಈಗ ನಾಲ್ಕೈದು ಗಂಟೆಗಳಿಗೆ
ಸೀಮಿತವಾಗಿರುವುದು ವಿಪರ್ಯಾಸ..!!!

ಅದೆಷ್ಟೊ ಇತಿಹಾಸವಿರುವ
ಈ ಗಂಡುಕಲೆಯನ್ನ , ಪ್ರೋತ್ಸಾಹಿಸೋಣ
ಯಕ್ಷಗಾನ ಕಲೆಯನ್ನು ಉತ್ತುಂಗಕ್ಕೆರಿಸೋಣ ||

ಸಂಧ್ಯಾ

Related posts

*ವ್ಯವಸ್ಥೆ ( ಅವ್ಯವಸ್ಥೆ)*

Harshitha Harish

ಕವನ: ತಾಯಿ

Upayuktha

ಕವಿತೆ: ಆಹ್ವಾನಿಸು ಹೃದಯಕೆ

Upayuktha