ಕತೆ-ಕವನಗಳು

ಏಕಾಂಗಿ ಮನಸ್ಸಿದು ಅಣ್ಣ ತಂಗಿಯರಿಲ್ಲ ಏಕಾಂತದ ಮನವಿದು ಅಕ್ಕ ತಮ್ಮಂದಿರಿಲ್ಲ.

 

ತಂದೆ ತಾಯಿ ಇದ್ದರೇನು ದುಖಃ ಹಂಚಿಕೊಳ್ಳಲು ಯಾರಿಲ್ಲವೆಂಬ ಚಿಂತೆ


ಸಮಾದಾನ ಪಡಿಸಲು ಯಾರಿಲ್ಲ ಅನಾಥಳೆಂಬ ಪಟ್ಟ ನನಗೂ ಬಂತೆ
ಅಕ್ಕ ತಂಗಿಯರೋಂದಿಗೆ ಬಾಳುವ ಬಾಗ್ಯ ನನಗಿಲ್ಲದಾಯಿತೆ
ಅಣ್ಣ ತಮ್ಮರೋಂದಿಗಿನ ಒಡನಾಟ ಬರಿ ಕನಸಾಯಿತೆ.

ಭಾವನೆಗಳನ್ನು ಹಂಚಿಕೊಳ್ಳಲು ಇರಬೇಕು ಒಬ್ಬರು
ಗೆಳೆಯ ಗೆಳತಿಯರಲ್ಲ ಅದು ಸಹೋದರ ಸಹೋದರಿಯರು
ತವರು ಮನೆ ಹೊಕ್ಕಾಗ ಬಾಲ್ಯ ನೆನಪಾಗಿಸಲು ಬೇಕು ಅಣ್ಣ ತಮ್ಮಂದಿರು
ಬೇರೆ ಮನೆ ಹೊಕ್ಕರು ಒಂದೇ ಕರುಳ ಬಳ್ಳಿಗಳು ಅಕ್ಕ ತಮ್ಮಂದಿರು.

ಮುಂದೊಂದು ದಿನ ದೂರಾದರೂ ಆ ಮನಗಳು
ಅಲ್ಲೆ ಕುಳಿತು ನೆನೆಯುವುದು ಬಾಲ್ಯದ ದಿನಗಳು
ಎಲ್ಲರೋಂದಿಗೆ ಆಡಿ ಕುಣಿವ ಕ್ಷಣಗಳು
ನನಗಿಲ್ಲವೇ ಆ ಸಂತೋಷದ ದಿನಗಳು.

ಅಕ್ಕನೋಂದಿಗೆ ಜಗಳ ಅಣ್ಣನೊಂದಿಗೆ ಕೋಪ
ನನಗಿಲ್ಲವೇ ಆ ಭಾಗ್ಯ ಇದೆಂತಹ ಶಾಪ
ಯಾರೋ ಒಬ್ಬರು ತಂಗಿ ಎಂದಾಗ ಬರುವ ಬಾಷ್ಪ
ಅಂತಹುದು ಕೇಳಲು ಸಿಗುವುದೇ ಬಲು ಅಪರೂಪ.

✍️1331.ganiga

Related posts

ಕವನ: ಸ್ವಾತಂತ್ರೋತ್ಸವ

Upayuktha

ಚಿತ್ರ ಕವನ: ಕುಸುಮ ನವಿಲು

Upayuktha

ಕವಿತೆ: ನವಚೈತನ್ಯ

Upayuktha

Leave a Comment

error: Copying Content is Prohibited !!