ಆರೋಗ್ಯ ಯೋಗ- ವ್ಯಾಯಾಮ ಲೇಖನಗಳು

ಯೋಗಾಭ್ಯಾಸ ಮತ್ತು ವಿಶ್ವ ಮಾನಸಿಕ ಆರೋಗ್ಯ ದಿನ

ಎಲ್ಲರಿಗೂ ತಿಳಿದಿರುವಂತೆ ನಿನ್ನೆ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. ಮಾನಸಿಕ ಆರೋಗ್ಯ ಮತ್ತು ಯೋಗಾಭ್ಯಾಸಕ್ಕೆ ಬಹಳ ಹತ್ತಿರದ ಸಂಬಂಧ ಇದೆ. ಯಾಕೆಂದರೆ ಯೋಗದ ಮುಖ್ಯ ಉದ್ದೇಶವೇ ಮನಸ್ಸನ್ನು ನಿಯಂತ್ರಿಸುವುದು.

ಯೋಗ: ಚಿತ್ತವೃತ್ತಿ ನಿರೋಧ:// (ಪಾತಂಜಲ ಯೋಗ ಸೂತ್ರ 1-2)

ಪಾತಂಜಲ ಯೋಗ ಸೂತ್ರದಲ್ಲಿ ಹೇಳಿದಂತೆ ಯೋಗದ ಮುಖ್ಯ ವ್ಯಾಖ್ಯಾನವೇ “ಯೋಗ ಎಂದರೆ, ಯಾವುದೆಲ್ಲ ಅಭ್ಯಾಸಗಳಿಂದ ಸಹಜವಾಗಿ ಮನಸ್ಸನ್ನು ಹತೋಟಿ ಅಥವಾ ಸಂಪೂರ್ಣವಾಗಿ ನಿಯಂತ್ರಿಸುವ ಅಭ್ಯಾಸ ಅಥವಾ ಕ್ರಿಯೆಗಳಿವೆಯೋ ಅವುಗಳನ್ನು ಯೋಗ ಎನ್ನಲಾಗುತ್ತದೆ”.

ಈಗಿನ ಜಗತ್ತಿನಲ್ಲಿ ನಾವು ಉಪಯೋಗಿಸುವ ವಿದ್ಯುನಮಾನ ತಂತ್ರಜ್ಞಾನ, ಅತ್ಯಧಿಕವಾದ ಜ್ಞಾನೇಂದ್ರಿಯಗಳ ಮತ್ತು ಕರ್ಮೇಂದ್ರಿಯಗಳ ಬಳಕೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ನಮ್ಮನ್ನ ಮಾನಸಿಕ ಅಸ್ವಸ್ಥತೆಗೆ ತೆಗೆದುಕೊಂಡು ಹೋಗುತ್ತಿದೆ.

ನಾವು ಉಪಯೋಗಿಸುವ ಮೊಬೈಲ್, ಟಿವಿ, Laptop, internet, ವಿದ್ಯುನ್ಮಾನ ತಂತ್ರಾಂಶಗಳ ಅಧಿಕ ವ್ಯಸನವೇ ಕೆಲವು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಮನುಷ್ಯನಿಗೆ ತನ್ನ ನಿಕಟ ವ್ಯಕ್ತಿಗಳೊಂದಿಗೆ ಇರುವ ಸಂಬಂಧವನ್ನು ಇವುಗಳು ಹಾಳು ಮಾಡಿವೆ.

ಬೇಸರದ ವಿಷಯ ಎಂದರೆ ಈಗಿನ New generation ವಿದ್ಯುನ್ಮಾನ ತಂತ್ರಾಂಶಗಳ ದಾಸನಾಗಿದ್ದಾನೆ… ಕ್ರಿಯಾತ್ಮಕವಾಗಿ ಯೋಚಿಸುವುದು, ದೈಹಿಕ ಚಟವಟಿಕೆಗಳಲ್ಲಿ ಭಾಗವಹಿಸುವ ಅಭ್ಯಾಸವೇ ಕಡಿಮೆ ಆಗುತ್ತಿದೆ… ಇದು ಮನಸ್ಸಿನ ಎಲ್ಲಾ ದುಶ್ಚಟಗಳಿಗೆ ಕಾರಣವಾಗುತ್ತದೆ. ಅದುವೇ ಮಾನಸಿಕ ಆರೋಗ್ಯವನ್ನು ಹಾಳುಮಾಡುವ ಮುಖ್ಯ ಸಾಧನವಾಗಿದೆ.

ಇವುಗಳೆಲ್ಲದರಿಂದ ನಾವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಯೋಗಾಭ್ಯಾಸಕ್ಕಿಂತ ಉತ್ತಮವಾದ ಇನ್ನೊಂದು ಅಭ್ಯಾಸ ಅಥವಾ ಔಷಧ ಇನ್ನೊಂದಿಲ್ಲ. ಮನಸ್ಸಿಗೆ ಯೋಗಾಭ್ಯಾಸ ವೇ ಮದ್ದು. 90% ಮನುಷ್ಯನಿಗೆ ಬರುವ ಕಾಯಿಲೆಗಳ ಮೂಲ ಮನಸ್ಸೇ ಆಗಿದೆ. ಆದ್ದರಿಂದ ಮನೋ ದೈಹಿಕ ಕಾಯಿಲೆಗಳಿಗೆ ನಿಯಮಿತವಾದ ಯೋಗ ಅಭ್ಯಾಸ ಅಮೃತ ಸಮಾನವಾಗಿದೆ.

ಮನಸ್ಸಿನ ವಿಕಾರಗಳಿಗೆ ಬೇರೆ ಯಾವುದೇ ವೈದ್ಯಕೀಯ ಶಸ್ತ್ರಗಳು ನೆರವಾಗುವುದು ಕಷ್ಟಸಾಧ್ಯ. ಏಕೆಂದರೆ ಮನಸ್ಸಿಗೆ ಮನಸ್ಸಿನಿಂದಲೇ ಚಿಕಿತ್ಸೆಯನ್ನು ಕೊಡಬೇಕು ವಿನಃ ಬರೀ ಔಷಧ ಸೇವನೆ ಮನಸ್ಸಿನ ವಿಕಾರವನ್ನು ಸರಿ ಮಾಡಲು ಸಾಧ್ಯವಾಗದು.

ಮನಶಾಸ್ತ್ರಜ್ಞರು ಕೊಡುವ consultation ಸ್ವಲ್ಪ ಮಟ್ಟಿಗೆ ನೆರವಾಗುವುದು ನಿಜ. ಆದರೆ ಅವರು ಕೊಡುವಂತಹ ಔಷಧಿ ಮನಸ್ಸಿನ ಆಳದಲ್ಲಿರುವ ನೋವನ್ನು, ಅಳುಕನ್ನು, ವಿಕಾರಗಳನ್ನು ಬುಡದಿಂದಲೇ ತೆಗೆಯಲಾರದು. ಆದ್ದರಿಂದ ಮನಸ್ಸಿಗೆ ಯೋಗಾಭ್ಯಾಸವೇ ಸರಿಯಾದ ಚಿಕಿತ್ಸೆಯನ್ನು ನೀಡಬಲ್ಲುದು.

ಯೋಗೇ ನ ಚಿತ್ತಸ್ಯ ಪದೇನ ವಾಚಾ
ಮಲಂ ಶರೀರಸ್ಯ ಚ ವೈದ್ಯ ಕೇ ನ/

ಯೋಪಾಂ ಕರೋತ್ತಮ್ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿ ರಾನತೋಸ್ಮಿ //( ಭೋಜ ವೃತ್ತಿ)

ಪಾತಂಜಲ ಯೋಗಸೂತ್ರದ ವ್ಯಾಖ್ಯಾನವಾದ ಭೋಜ ವೃತ್ತಿಯಲ್ಲಿ ಈ ಸಾಲುಗಳು ಸಿಗುತ್ತವೆ. ಇದರ ಪ್ರಕಾರ ಮನಸ್ಸಿನ ಎಲ್ಲಾ ವಿಕಾರಗಳನ್ನು ಯೋಗಾಭ್ಯಾಸದಿಂದಲೂ, ವ್ಯಾಕರಣದಿಂದ ಭಾಷೆ ಸ್ಫುಟತೆ ಹೆಚ್ಚಿಸಿ ತೊಂದರೆಯನ್ನು ನಿವಾರಿಸಬಹುದು. ಹಾಗೇ ದೇಹದಲ್ಲಿರುವ ಕಲ್ಮಶಗಳನ್ನು ವೈದ್ಯಕೀಯ (ಆಯುರ್ವೇದ) ಔಷಧದಿಂದಲೂ ನಿವಾರಿಸಬಹುದು. ಈ ಮೂರು ಶಾಸ್ತ್ರವನ್ನು ತಿಳಿಸಿದ ಮಹರ್ಷಿ ಪತಂಜಲಿಗಳಿಗೆ ಮತ್ತು ಅವರ ಪ್ರವರಕ್ಕೆ ನಮಸ್ಕರಿಸುತ್ತೇನೆ.

ಈ ರೀತಿಯಾಗಿ ಮನಸ್ಸಿನ ಚಿಕಿತ್ಸೆಗೆ ಯೋಗದಷ್ಟು ಉತ್ತಮವಾದ ಸಾಧನ ಇನ್ನೊಂದಿಲ್ಲ. ಯೋಗ ಸಾಧನದಿಂದ ಮನಸ್ಸು ಮಾತ್ರವಲ್ಲದೆ ಮನಸ್ಸಿಗೆ ದೈಹಿಕ ಆರೋಗ್ಯವನ್ನೂ ಕಾಪಾಡಬಹುದು.

-ವಿಜಯ ಗಣೇಶ ಕೋರಿಕ್ಕಾರು
ಯೋಗ ಶಿಕ್ಷಕರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

“ಮರ್ಯಾದಾ ಪುರುಷೋತ್ತಮ” ಶ್ರೀರಾಮ: ಭಾರತದ ಅಸ್ಮಿತೆ ಭವ್ಯ ರಾಮ ಮಂದಿರ

Upayuktha

ವಿವೇಕದ ಹಲ್ಲು (WISDOM TOOTH) ತೆಗೆಸಿದರೆ ‘ಬುದ್ಧಿವಂತಿಕೆ’ ಕಡಿಮೆಯಾಗುತ್ತಾ…?

Upayuktha

ವಿಶ್ವ ಯೋಗ ದಿನಾಚರಣೆ 2020: ಯೋಗ ಎಂಬುದು ಮನೋ ಪ್ರಧಾನ

Upayuktha