ಆರೋಗ್ಯ ಕಲೆ-ಸಾಹಿತ್ಯ ಯೋಗ- ವ್ಯಾಯಾಮ

‘ಯೋಗ-ಆರೋಗ್ಯ’: 4ನೇ ಮರುಮುದ್ರಣ ಕಂಡ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಕೃತಿ ಈಗ ಲಭ್ಯ

ಮಂಗಳೂರು: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಅತ್ಯಂತ ಜನಪ್ರಿಯ ಕೃತಿ ‘ಯೋಗ ಆರೋಗ್ಯ’ (ಯೋಗದಿಂದ ಯೋಗ್ಯ ವಿದ್ಯಾರ್ಥಿ) ಈಗ ನಾಲ್ಕನೇ ಬಾರಿಗೆ  ಮರು ಮುದ್ರಣಗೊಂಡು ಬಿಡುಗಡೆಯಾಗಿದೆ.

ಮಂಗಳೂರಿನಲ್ಲಿ ಕಂಕನಾಡಿಯ ರೇಣುಕಾ ಬುಕ್‌ಸ್ಟಾಲ್‌, ಕೊಡಿಯಾಲಬೈಲ್‌ನ ನವಕರ್ನಾಟಕ ಬುಕ್‌ ಸ್ಟಾಲ್‌ ಮತ್ತು ಕೆಎಸ್ಸಾರ್ಟಿಸಿ ಬುಕ್‌ ಸ್ಟಾಲ್‌ಗಳಲ್ಲಿ ಈ ಪುಸ್ತಕಗಳು ಲಭ್ಯವಿವೆ. ಅರಸೀಕೆರೆಯ ಗುಂಡಪ್ಪ ಸನ್ಸ್‌ ಬಳಿ ಈ ಪುಸ್ತಕ ಲಭ್ಯವಿದ್ದು, ವೆಬ್‌ಸೈಟ್ ಮೂಲಕವೂ ( https://www.shyamaraj.com ಖರೀದಿಸಬಹುದಾಗಿದೆ. ಅವರ ಮೊಬೈಲ್ ಸಂಖ್ಯೆ: 9343219040

ಯೋಗಾಭ್ಯಾಸಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ನೀಡುವ ಕೃತಿ ಇದಾಗಿದ್ದು, ಆಸಕ್ತರು ತಮ್ಮ ಸಮೀಪದ ಪುಸ್ತಕ ಮಳಿಗೆಗಳಲ್ಲಿ ಕೊಂಡು ಓದಬಹುದು.
ಇದು ಈ ಕೃತಿಯ ನಾಲ್ಕನೇ ಮರುಮುದ್ರಣವಾಗಿದೆ. ಮೊದಲ ಬಾರಿಗೆ 2011ರಲ್ಲಿ, ದ್ವಿತೀಯ ಮುದ್ರಣ- 2014ರಲ್ಲಿ ಮತ್ತು ತೃತೀಯ ಮುದ್ರಣ 2018ರಲ್ಲಿ ಬೆಳಕು ಕಂಡಿದೆ. ಬೆಂಗಳೂರಿನ ಬ್ರಿಲಿಯಂಟ್ ಪ್ರಿಂಟರ್ಸ್‌ ಮುದ್ರಿಸಿರುವ ಈ ಕೃತಿ 300ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದೆ. ಈ ಪುಸ್ತಕ ಮುಖಬೆಲೆ 250 ರೂ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭ ಸಂದೇಶವನ್ನು ಹೊತ್ತಿರುವ ಈ ಕೃತಿ ಯೋಗಾಭ್ಯಾಸಿಗಳಿಗೆ ಅತ್ಯುತ್ತಮ ಮಾರ್ಗದರ್ಶಿ ಕೈಪಿಡಿಯಾಗಿದೆ.

ಯೋಗಶಾಸ್ತ್ರ, ಯೋಗಿಯ ಆಹಾರ, ಕ್ರಿಯೆಗಳು, ಸರಳ ವ್ಯಾಯಾಮಗಳು, ಸೂರ್ಯ ನಮಸ್ಕಾರ, ಅಷ್ಟಾಂಗ ಯೋಗ, ದೇಹದಲ್ಲಿರುವ ಪಂಚಕೋಶಗಳು, ವಿದ್ಯಾರ್ಥಿಗಳಿಗಾಗಿ ಯೋಗ, ಕಂಪ್ಯೂಟರ್‌ ಉದ್ಯೋಗಿಗಳಿಗೆ ಸರಳ ಯೋಗ, ಯಾವ ರೋಗಕ್ಕೆ ಯಾವ ಯೋಗ, ಯೋಗಾಸನಕ್ಕೂ ವ್ಯಾಯಾಮಕ್ಕೂ ಇರುವ ವ್ಯತ್ಯಾಸ, ಯೋಗದಿಂದ ಯೋಗ್ಯ ವಿದ್ಯಾರ್ಥಿ ನಿರ್ಮಾಣ, ಯೋಗದ ಪ್ರಶ್ನೆಗಳು ಮತ್ತು ಉತ್ತರಗಳು- ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸುವಿಚಾರ: ಯೋಗ ಸಾಧನೆಗೆ ಮಾಡುವ ಕೆಲಸದಲಿ ಪ್ರೀತಿಯಿರಬೇಕು

Upayuktha

ಪ್ರಸವಾನಂತರದ ಖಿನ್ನತೆ: ಏನು, ಯಾಕೆ, ಪರಿಹಾರ ಹೇಗೆ…?

Upayuktha

ಆಯುರ್ವೇದದ ವಿಶೇಷ ಚಿಕಿತ್ಸೆ- ‘ಪಂಚಕರ್ಮ’

Upayuktha