ನಗರ ಯೋಗ- ವ್ಯಾಯಾಮ ಸ್ಥಳೀಯ

ಮನೆ ಮನೆಗಳಲ್ಲಿ ಯೋಗ ಬೆಳಗಲಿ: ಡಾ. ಎ.ಎಸ್.ಚಂದ್ರಶೇಖರ್

ಮಂಗಳೂರು: ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಯಂತ್ರೀಕೃತ ಬದುಕಿನಿಂದ ಏಕತಾನತೆ ಬರುವುದು ಸಹಜ. ಪ್ರತಿದಿನ ನಿತ್ಯನೂತನವಾಗಿ ಮನಸ್ಸಿಗೆ ಚೈತನ್ಯ ನೆಮ್ಮದಿ ಬೇಕಾದಲ್ಲಿ ದಿನನಿತ್ಯ ಯೋಗಾಭ್ಯಾಸ ಮಾಡಿ ಧ್ಯಾನ ಮತ್ತು ಪ್ರಾಣಾಯಾಮ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತೀ ಮನೆಯಲ್ಲಿ ಎಲ್ಲರೂ ಯೋಗಾಭ್ಯಾಸ ಮಾಡಬೇಕು. ಮನೆ ಮತ್ತು ಮನೆಗಳಲ್ಲಿ ಯೋಗ ಬೆಳಗಬೇಕು ಎಂದು ಖ್ಯಾತ ಆಯುರ್ವೇದ ತಜ್ಞರು ಮತ್ತು 2020ನೇ ಸಾಲಿನ ರಾಜ್ಯ ಯೋಗ ಪ್ರಶಸ್ತಿ ವಿಜೇತ ಯೋಗ ಶಿಕ್ಷಕರಾದ ಡಾ: ಎ.ಎಸ್.ಚಂದ್ರಶೇಖರ್, ಮೈಸೂರು, ಆರೋಗ್ಯ ಭಾರತಿ ಕರ್ನಾಟಕ ಇದರ ಕಾರ್ಯದರ್ಶಿ ಇವರು ಅಭಿಪ್ರಾಯ ಪಟ್ಟರು.

ಭಾನುವಾರ (ಫೆ.21) ನಗರದ ಗ್ರೀನ್ ಎಕ್ರೆ ಲೇ ಔಟ್ ಬಡಾವಣೆಯ ‘ಸರೋಜಿನಿ’ ನಿವಾಸದಲ್ಲಿ ಆರೋಗ್ಯ ಭಾರತಿ ಮಂಗಳೂರು ವಲಯ ಮತ್ತು ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಇದರ ಸಂಯುಕ್ತ ಆಶ್ರಯದಲ್ಲಿ “ಮನೆ ಮನೆಯಲ್ಲಿ ಯೋಗ” ಅಭಿಯಾನದ ಅಂಗವಾಗಿ ನಡೆದ ಯೋಗ ಶಿಬಿರವನ್ನು ಉದ್ದೇಶಿಸಿ ಡಾ: ಚಂದ್ರಶೇಖರ್ ಮಾತನಾಡಿದರು.

ಆರೋಗ್ಯ ಭಾರತಿ ಮಂಗಳೂರು ವಿಭಾಗದ ಶ್ರೀ ಪುರುಷೋತ್ತಮ ದೇವಸ್ಯ ಸ್ವಾಗತ ಕೋರಿದರು. ಆರೋಗ್ಯ ಭಾರತಿ ಮಂಗಳೂರು ಇದರ ಕಾರ್ಯಾಧ್ಯಕ್ಷರಾದ ಡಾ|| ಈಶ್ವರ ಪಲ್ಲಾದೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಭಾರತಿ ಕರ್ನಾಟಕ ಇದರ ಅಧ್ಯಕ್ಷರಾದ ಡಾ|| ಸತೀಶ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆರೋಗ್ಯ ಭಾರತಿ ಮಂಗಳೂರು ಗೌರವ ಅಧ್ಯಕ್ಷರಾದ ಡಾ|| ಮುರಲೀ ಮೋಹನ ಚೂಂತಾರು ಇವರು ವಂದನಾರ್ಪಣೆಗೈದರು.

ಬಡಾವಣೆಯ ಸುಮಾರು 25 ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಶ್ರೀ ರಮೇಶ್ ಭಟ್ ಸರವು ಹಾಗೂ ಬಡಾವಣೆಯ ಎ.ಎಸ್.ಭಟ್ ಅರ್ತಿಕಜೆ, ಶ್ರೀ ಶಶಿಧರ್ ಭಿಡೆ, ಶ್ರೀ ರಾಘವೇಂದ್ರ, ಶ್ರೀ ಅರುಣ್ ಕುಮಾರ್, ಶ್ರೀ ರವೀಂದ್ರ, ಶ್ರೀ ಡಾ|| ದೀಪಕ್, ಡಾ|| ಆಶಾ, ಶ್ರೀ ಸುರೇಶ್‍ನಾಥ್ , ಶ್ರೀಮತಿ ಗೀತಾ ಗಣೇಶ್, ಶ್ರೀಮತಿ ಅನಿತಾ ಬೋಳಂತಕೋಡಿ ಮುಂತಾದವರು ಉಪಸ್ಥಿತರಿದ್ದರು. ಈ ಶಿಬಿರ ಸಾಯಂಕಾಲ 6 ರಿಂದ 7 ಗಂಟೆಯವರೆಗೆ ಜರುಗಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಡಿಸೆಂಬರ್ 1 ರಿಂದ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್

Upayuktha

ದಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾಗಿ 2ನೇ ಅವಧಿಗೆ ಡಾ| ಚೂಂತಾರು ಅಧಿಕಾರ ಸ್ವೀಕಾರ

Upayuktha

ಹದಿಹರೆಯದ ಮಕ್ಕಳ ಪಾಲನೆಯ ಸವಾಲುಗಳು- ಉಪನ್ಯಾಸ

Upayuktha