ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಯೋಗಾಸನ ತರಬೇತಿ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಯೋಗಾಸನ ತರಬೇತಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕ ಚಂದ್ರಶೇಖರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿ, ಯೋಗ ಎಂಬುದು ನಮ್ಮ ಜ್ಞಾನದ ಅಭಿವೃದ್ಧಿಗೆ ಪೂರಕವಾದ ಕ್ರಿಯೆ. ಯೋಗದಿಂದ ಏಕಾಗ್ರತೆ ಹೆಚ್ಚುವುದಲ್ಲದೆ ನಮ್ಮ ಮಾನಸಿಕ ಮತ್ತು ದೈಹಿಕ ಕ್ಷಮತೆ ಅಭಿವೃದ್ಧಿಯಾಗುತ್ತದೆ. ದೇಹದಲ್ಲಿರುವ ಸ್ನಾಯುಗಳು ಬಲವರ್ಧನೆಯಾಗಲು ಯೋಗ ಸಹಕಾರಿ ಎಂದು ತಿಳಿಸಿದರು.

ಚಂಚಲ ಮನಸ್ಸನ್ನು ಪ್ರಯತ್ನಪೂರ್ವಕವಾಗಿ ಒಂದೆಡೆಗೆ ತರಲು ಯೋಗವನ್ನು ಪ್ರತಿಯೊಬ್ಬರು ದಿನಂಪ್ರತಿ ಮಾಡಬೇಕು. ಇದರಿಂದ ಏಕಾಗ್ರತೆ ಬರುವುದರೊಂದಿಗೆ ಮನಸ್ಸನ್ನು ತಿಳಿಯಾಗಿರಿಸಲು ಸಾಧ್ಯ ಪರಿಪೂರ್ಣ ಜೀವನಕ್ಕೆ ಯೋಗ ಅತ್ಯಗತ್ಯ. ಯೋಗ ಸಂಸ್ಕೃತಿಯನ್ನು ಜಾಗೃತ ಪಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಂತರ ಉಪನ್ಯಾಸಕರಿಗೆ ವಿವಿಧ ಆಸನಗಳನ್ನು ಪ್ರದರ್ಶಿಸಿ ಅವುಗಳ ಪ್ರಾಮುಖ್ಯತೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಸಂಸ್ಕೃತ ವಿಭಾಗದ ಉಪನ್ಯಾಸಕ ಜಯಗೋವಿಂದ ಶರ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಒಟ್ಟು ಮೂರು ದಿನ ಕಾಲೇಜಿನ ಸಭಾಂಗಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮವು ನಡೆಯಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಿಎ ಆಗಲು ನಿರಂತರ ಅಭ್ಯಾಸ, ಸಮರ್ಪಣಾ ಭಾವದ ಕಲಿಕೆ ಅಗತ್ಯ: ಸಿ.ಎ. ಆದರ್ಶ್ ಶೆಣೈ

Upayuktha

ಫಿಲೋಮಿನಾ ಎಂಎಸ್‍ಡಬ್ಲ್ಯೂ ವಿಭಾಗದಿಂದ ಬೀದಿ ನಾಟಕ ಪ್ರದರ್ಶನ

Upayuktha

‘ನಿರ್ಮಲ ಕನಸುಗಳು’ ಕೃತಿ ಬಿಡುಗಡೆ

Upayuktha

Leave a Comment