ಕತೆ-ಕವನಗಳು ಸ್ಥಳೀಯ

*ಯು.ಸು.ಗೌಡರ ಸ್ಮರಣಾರ್ಥ ಕವಿಗೋಷ್ಠಿ*

ಸುಳ್ಯ : “ಕವನ ಎಂದರೆ ಭಾವ ತೀವ್ರತೆಯ ಕಲಾತ್ಮಕ ಅಭಿವ್ಯಕ್ತಿ. ಪ್ರೇಮ ಭಾವ ಮತ್ತು ಜೀವ ಪ್ರೀತಿ ಕವನವನ್ನು ಉನ್ನತ ಮಟ್ಟಕ್ಕೊಯ್ಯುತ್ತದೆ. ಬರವಣಿಗೆಗೆ ಅಧ್ಯಯನ ಅವಶ್ಯ. ಕವನದ ಮೂಲಕ ಸಂದೇಶ ನೀಡಿ.’ ಎಂದು ನಿವೃತ್ತ ಉಪನ್ಯಾಸ ಡಾ.ಪ್ರಭಾಕರ ಶಿಶಿಲ ಎಂದು ತಿಳಿಸಿದರು.

ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರಾಜ್ಯೋತ್ಸವದ ಅಂಗವಾಗಿ ನಿವೃತ್ತ ಪ್ರಾಂಶುಪಾಲ ದಿ.ಯು.ಸುಬ್ರಾಯ ಗೌಡ ಸ್ಮರಣಾರ್ಥ ನಡೆದ ಶಿಕ್ಷಕರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿವೃತ್ತ ಉಪನ್ಯಾಸಕಿ ಮತ್ತು ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯೆ ಶ್ರೀಮತಿ ಲೀಲಾ ದಾಮೋದರ್ ಕವಿಗೋಷ್ಠಿಯನ್ನು ಉದ್ಘಾಟಿಸಿ “ಕನ್ನಡಿಗರ ಸ್ವಾಭಿಮಾನದ ಫಲವಾಗಿ ರಾಜ್ಯ ಒಂದಾಯಿತು. ಪ್ರಾಥಮಿಕ ಶಿಕ್ಷಣದ ಹಂತದಲ್ಲಾದರೂ ಕನ್ನಡ ಮಾಧ್ಯಮದ ಅಳವಡಿಕೆ ಅತಿ ಅಗತ್ಯ. ಭಾಷೆಯ ಬೆಳವಣಿಗೆಗೆ ಇದು ಅತಿ ಅನಿವಾರ್ಯ. ಭಾಷೆಯನ್ನು ಸೂಕ್ತವಾಗಿ ಬಳಸಬೇಕಾದ್ದು ಇಂದಿನ ಅನಿವಾರ್ಯತೆ” ಎಂದು ಹೇಳಿದರು.

 

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕೃಷಿಕ ,ಹೈನುಗಾರಿಕೆಯಲ್ಲಿ ಮಹತ್ತರ ಸಾಧನೆ ಮಾಡಿದ ಐವರ್ನಾಡಿನ ಶ್ರೀ ವಿಶ್ವನಾಥ ಪೈ ಕೊಯಿಲ ಹಾಗೂ ದೈಹಿಕ ಶಿಕ್ಷಕ ಲಗೋರಿಯ ಹರಿಕಾರರೆನಿಸಿಕೊಂಡ ಶ್ರೀ ದೊಡ್ಡಣ್ಣ ಬರೆಮೇಲುರವರನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹರಿಪ್ರಸಾದ್ ತುದಿಯಡ್ಕ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ್ ಪೇರಾಲು ಹಾಗೂ ತೇಜಸ್ವಿ ಕಡಪಳ ,ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕವಿಗೋಷ್ಠಿಯಲ್ಲಿ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರಾದ ಪ್ರೇಮಾ ಐವರ್ನಾಡು, ಮಮತಾ ರವೀಶ್ ಪಡ್ಡಂಬೈಲು,ಪೂರ್ಣಿಮಾ ಮಡಪ್ಪಾಡಿ, ಪ್ರಮೀಳಾ ರಾಜ್ ನಿಡುಬೆ,ಪೂರ್ಣಿಮಾ ಚೊಕ್ಕಾಡಿ, ರೇವತಿ ಕೇನ್ಯ,ಯಶೋದಾ.ಎಂ.ಬಿ ಕೋಲ್ಚಾರು,ಸಾನು ಉಬರಡ್ಕ,ಪ್ರಣೀತಾ ಬೆಳ್ಳೂರು, ಫ್ರೊ.ಸಂಜೀವ ಕುದ್ಪಾಜೆ,ಕೆಂಚವೀರಪ್ಪ ಮರ್ಕಂಜ,ಮಲ್ಲಿಕಾ ಗೋಪಾಲ್ ಮರ್ಕಂಜ,ಸಹನಾ ಗಿರೀಶ್ ಬಾಳಿಲ,ವಿದ್ಯಾಶಂಕರಿ ಎಸ್.ಅಜ್ಜಾವರ,ಆನಂದ ಯಸಳೂರು ಬಳ್ಪ, ವಿಜಯಕುಮಾರ್ ಕಾಣಿಚಾರ್,ಪವಿತ್ರ ಎಲಿಮಲೆ ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನ ವಾಚಿಸಿದರು.
ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಆನ್ ಲೈನ್ ಕವಿಗೋಷ್ಠಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.

ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಸ್ವಾಗತಿಸಿದರು. ಚಂದ್ರಶೇಖರ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಶೇಟ್ ಧನ್ಯವಾದಗೈದರು.ಪ್ರಮೀಳಾ ರಾಜ್ ನಿಡುಬೆ ಪ್ರಾರ್ಥಿಸಿದರು.ಶ್ರೀಮತಿ ಚಂದ್ರಮತಿ ಮತ್ತು ಮಮತಾ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.

Related posts

ಅಕ್ರಮ ಸಕ್ರಮ ಪರಭಾರೆ ಗೊಂದಲ, ಸಿಸಿ ಬಸ್‌ಗಳ ಅವ್ಯವಸ್ಥೆ: ಅಳಿಕೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ದೂರು

Upayuktha

ಕೋವಿಡ್‌ 19 ಅಪ್‌ಡೇಟ್ಸ್‌: ದ.ಕ- 14, ಉಡುಪಿ 13 ಕೊರೊನಾ ಪ್ರಕರಣ

Upayuktha

ಫೆ.18: ಫಿಲೋಮಿನಾದಲ್ಲಿ ನ್ಯಾಶನಲ್ ಲೆವೆಲ್ ಫೆಸ್ಟ್ ‘ಫಿಲೋ ವೆಂಚುರ-2020’

Upayuktha