ಕತೆ-ಕವನಗಳು

ಯುಗಾದಿ ಗಝಲ್

ಪ್ಲವನಾಮ ಸಂವತ್ಸರ ಒಳಿತು
ಮಾಡಲಿ ಸಖಿ
ವಿಪ್ಲವವು ಕಳೆದು ಸುಪ್ರಭೆಯು
ಮೂಡಲಿ ಸಖಿ

ದುರಿತಗಳ ಹೊತ್ತ ಶಾರ್ವರಿಯು
ಕೊನೆಯಾದಳಲ್ಲ ಇಂದು
ಮೊರೆತಗಳು ಸುತ್ತ ರೋಗರುಜಿನಗಳು
ಓಡಲಿ ಸಖಿ

ಚೈತ್ರದ ಚಿಗುರು ಕೋಗಿಲೆಗಳ ಕೂಜನ
ಮುದ ತಾರದೇ
ಮೈತ್ರಿಯು ನಕ್ಕು ಬಾಗಿಮನಗಳು
ಕೂಡಲಿ ಸಖಿ

ಬೇವುಬೆಲ್ಲವು ಸಮರಸ ತತ್ವವನು
ಸಾರುವುದು ತಿಳಿ
ನೋವು ನಲಿವುಗಳು ಜೀವನದಿ
ಆಡಲಿ ಸಖಿ

ಅಂಗಳದ ರಂಗವಲ್ಲಿ ಮುಂಬಾಗಿಲಿನ
ತೋರಣ ಶೋಭಿಸದೇ
ಸುಮಂಗಳೆಯರು ದೇವನಲಿ ಸೌಖ್ಯವ
ಬೇಡಲಿ ಸಖಿ

ಉತ್ಸಾಹವು ಇಮ್ಮಡಿಸಿ ನವಪರ್ವವ
ಸ್ವಾಗತಿಸಲು ಸಜ್ಜಾಗಿದೆ
ಉತ್ಸವವು ಮನೆಗಳಲಿಗೆ ಹೊಸಕಳೆಯ
ನೀಡಲಿ ಸಖಿ

ನಿನ್ನೆಗಳ ಪಾಠಗಳಜೊತೆ ನಾಳೆಗಳ
ಹೊಸನಿರೀಕ್ಷೆಯಲ್ಲಿಹಳು ರೂಪಾ
ಕೊನ್ನೆಸುಮಗಳ ಮಧುಹೀರಿ ಬಂಡುಣಿಗಳು
ಹಾಡಲಿ ಸಖಿ

-ರೂಪಾಪ್ರಸಾದ ಕೋಡಿಂಬಳ

Related posts

ಸಣ್ಣ ಕಥೆ – ಕಾಡುವ-ನೆನಪು

Harshitha Harish

ಎನ್ನ ಮೋಕೆದ ಅಪ್ಪೆ ಎಂಚಾಂದ್ ಪುಗರಡ್ ಅಪ್ಪೆ

Harshitha Harish

ಚಿತ್ರ ಕವನ: ಮಲಗೆನ್ನ ಮಗುವೆ

Upayuktha