ವಿಜ್ಞಾನ-ತಂತ್ರಜ್ಞಾನ

ಮಂಗಳೂರು, ಉಡುಪಿಯಲ್ಲಿ ಶೂನ್ಯ ನೆರಳಿನ ಕ್ಷಣದ ವೀಕ್ಷಣೆ; ಕುಂದಾಪುರ, ಬ್ರಹ್ಮಾವರದವರು ನಾಳೆ (26) ನೋಡಬಹುದು

ಉಡುಪಿ: ಶೂನ್ಯ ನೆರಳಿನ ದಿನವನ್ನು ಮಂಗಳೂರಿನಲ್ಲಿ ಏಪ್ರಿಲ್ 24 ರಂದು ಮಧ್ಯಾಹ್ನ 12.28 ಕ್ಕೆ ಹಾಗೂ ಉಡುಪಿಯಲ್ಲಿ ಏಪ್ರಿಲ್ 25 ರಂದು ಮಧ್ಯಾಹ್ನ 12:29 ಕ್ಕೆ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸದಸ್ಯರು ವೀಕ್ಷಿಸಿದರು.

ಈ ಶೂನ್ಯ ನೆರಳಿನ ಕ್ಷಣವನ್ನು ಮಂಗಳೂರಿನಿಂದ 12:15 ರಿಂದ 12:35 ರ ತನಕ paac ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಗೂ ಉಡುಪಿಯಿಂದ ಫೇಸ್ಬುಕ್ ಪುಟದಲ್ಲಿ ನೇರ ಪ್ರಸಾರ ಮಾಡಲಾಯಿತು. ನೇರ ಪ್ರಸಾರವನ್ನು ರಾಜ್ಯಾದ್ಯಂತ ನೂರಾರು ಜನರು ವೀಕ್ಷಿಸಿ, ನೆರಳು ಕಣ್ಮರೆಯಾಗುವುದನ್ನು ಕಣ್ತುಂಬಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಮನೆಯಿಂದಲೇ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಬಳಸಿಕೊಂಡು ಶೂನ್ಯ ನೆರಳನ್ನು ಗಮನಿಸಿ, ಚಿತ್ರಗಳನ್ನು ಕಳುಹಿಸಿದ್ದಾರೆ. ಕುಂದಾಪುರ ಹಾಗೂ ಬ್ರಹ್ಮಾವರದ ಜನರು ಈ ವಿದ್ಯಮಾನವನ್ನು ಏಪ್ರಿಲ್ 26 ರಂದು 12:20 ರಿಂದ 12:30 ರ ಒಳಗೆ ವೀಕ್ಷಿಸಬಹುದು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಖಗೋಳ ಕ್ಯಾಲೆಂಡರ್: ಹೊಸ ವರ್ಷ 2021ರ ಆಕಾಶ ವಿದ್ಯಮಾನಗಳು

Upayuktha

ಆಕಾಶ ವೀಕ್ಷಣೆ: ಮೇ ತಿಂಗಳಲ್ಲೇನು ವಿಶೇಷ…?

Upayuktha

ಖಗೋಳ ವಿದ್ಯಮಾನ: 21 ಜೂನ್ 2020ರ ಸೂರ್ಯಗ್ರಹಣ

Upayuktha