ನಗರ ಸ್ಥಳೀಯ

ಬೊಂದೆಲ್‌ನಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ: ಶಾಸಕ ಡಾ.ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ಮಂಗಳೂರು: ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬೊಂದೆಲ್‌ನಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಲಾವಿದರ ಜೊತೆ ಜಿಲ್ಲಾಧಿಕಾರಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ಮಂಗಳವಾರ ನಡೆಯಿತು.

ಕಲಾವಿದರ ಸಲಹೆ, ಸಹಕಾರದೊಂದಿಗೆ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗಲಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಗೊಳ್ಳಲಿದೆ. ಈ ಸಂಬಂಧ ಸಂಪೂರ್ಣ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಬಜೆಟ್ ತಯಾರಿಸಲು ಶಾಸಕರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಶಾಸಕರ ಜೊತೆಗೆ ಸ್ಥಳೀಯ ಭಾಗದ ಕಾರ್ಪೊರೇಟರ್ ಲೋಹಿತ್ ಅಮೀನ್, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ಮಂಗಳೂರು ರಂಗಭೂಮಿಯ ಗೌರವಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ರಂಗಸಂಗಾಂತಿ ಸಂಸ್ಥೆಯ ಅಧ್ಯಕ್ಷರಾದ ಶಶಿರಾಜ್ ಕಾವೂರು, ಸಂಕೇತ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗನ್ ಪವಾರ್, ಸ್ವರೂಪ ಸಮೂಹ ಸಂಸ್ಥೆಯ ಗೋಪಾಡ್ಕರ್, ಹಿರಿಯ ಚಿತ್ರಕಲಾವಿದ ಪ್ರಸಾದ್ ಆರ್ಟ್ಸ್ ಗ್ಯಾಲರಿಯ ಗಣೇಶ ಸೋಮಯಾಜಿ,ಯಕ್ಷಧ್ರುವ ಮಂಗಳೂರು ಅಧ್ಯಕ್ಷ ಪ್ರದೀಪ್ ಆಳ್ವ, ತುಳುನಾಟಕ ಕಲಾವಿದ ಮೋಹನ್ ಕೊಪ್ಪಳ ಉಪಸ್ಥಿತರಿದ್ದರು.

ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶ ರಾಜೇಶ್ ರವರು ಸ್ವಾಗತಿಸಿ, ಧನ್ಯವಾದವಿತ್ತರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪಾಲಿಕೆ ಚುನಾವಣೆ: ನಾಳೆ (ನ.10) ಬಹಿರಂಗ ಪ್ರಚಾರ ಅಂತ್ಯ

Upayuktha

ಕಾರ್ಕಳ ಶೇಖರ ಭಂಡಾರಿ ಅವರ `ಪ್ರಾಸಭಂಡಾರ’ ಭಾಗ-3 ಕೃತಿ ಬಿಡುಗಡೆ ನ.25ಕ್ಕೆ

Upayuktha

ಎಂಜಲಿನಿಂದ ಮಸಾಜ್‌: ವೈರಲ್ ವೀಡಿಯೋ ವಿರುದ್ಧ ಉಡುಪಿ ಸವಿತಾ ಸಮಾಜದಿಂದ ದೂರು

Upayuktha

Leave a Comment